
ಇತ್ತೀಚಿನ ದಿನಗಳಲ್ಲಿ ಬಹುಪಾಲು ಜನರ ಲೈಫ್ ಸ್ಟೈಲ್ ಸರಿಯಿಲ್ಲ. ಇದಕ್ಕೆ ಕಾರಣ ಹಲವಾರು. ಕೆಲವರಿಗೆ ಕೆಲಸದ ಒತ್ತಡವಾದರೆ, ಮತ್ತೆ ಕೆಲವರ ಪರಿಸರ, ಆಹಾರ ಸೇವನೆಯ ಕ್ರಮವೇ ಸರಿಯಿರುವುದಿಲ್ಲ. ಒಂದು ವೇಳೆ ನಿಮ್ಮ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳದಿದ್ದರೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಈ ಸಮಸ್ಯೆಗಳಲ್ಲಿ ಯಕೃತ್ತಿನ (ಲಿವರ್) ಹಾನಿಯೂ ಒಂದು. ಹೌದು, ಇದು ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಯಕೃತ್ತು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ ಹಲವು ಕಾರಣಗಳಿಂದ ಅದರ ಆರೋಗ್ಯವು ಆಗಾಗ್ಗೆ ಕ್ಷೀಣಿಸಲು ಪ್ರಾರಂಭಿಸುತ್ತದೆ.
ತಮಿಳುನಾಡಲ್ಲಿ ಮೇಯೋನಿಸ್ ಬ್ಯಾನ್, ಮಧುಮೇಹ ಜೊತೆ ಇದು ತರೋ ಅನಾರೋಗ್ಯ ಒಂದೆರಡಲ್ಲ
ಯಕೃತ್ತಿನಲ್ಲಿ ಕೊಬ್ಬಿನ ಅತಿಯಾದ ಶೇಖರಣೆಯಿಂದ ಉಂಟಾಗುವ ಸಾಮಾನ್ಯ ಪಿತ್ತಜನಕಾಂಗದ ಸಮಸ್ಯೆಯೆಂದರೆ ನಾನ್-ಆಲ್ಕೋಹಾಲಿಕ್
ಫ್ಯಾಟಿ ಲಿವರ್ ಡಿಸೀಸ್ (NAFLD). ಇದು ಸಾಮಾನ್ಯವಾಗಿ ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಅಥವಾ ಅತಿಯಾದ ಮದ್ಯಪಾನದಿಂದ ಸಂಭವಿಸುತ್ತದೆ. ಅಂದಹಾಗೆ ಫ್ಯಾಟಿ ಲಿವರ್ ಇದ್ದರೆ ದೇಹವು ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಹಾಗಾಗಿ ಇಂದು ಈ ಲೇಖನದಲ್ಲಿ ನಾವು ಮುಖ ಮತ್ತು ತ್ವಚೆಯ ಮೇಲೆ ಗೋಚರಿಸುವ ಫ್ಯಾಟಿ ಲಿವರ್ ನ ಕೆಲವು ಚಿಹ್ನೆಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
ಹಳದಿ ಬಣ್ಣಕ್ಕೆ ತಿರುಗುವ ತ್ವಚೆ
ನಿಮ್ಮ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಇದು ನಿಮ್ಮ ತ್ವಚೆ ಹಳದಿ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಬ್ಲಡ್ ಸ್ಟ್ರೀಮ್ ನಲ್ಲಿ ಬಿಲಿರುಬಿನ್ ಸಂಗ್ರಹವಾದಾಗ ಇದು ಸಂಭವಿಸುತ್ತದೆ . ಬಿಲಿರುಬಿನ್ ಒಂದು ಹಳದಿ ವರ್ಣದ್ರವ್ಯ (ಪಿಗ್ಮೆಂಟ್) ಆಗಿದ್ದು, ಇದು ಕೆಂಪು ರಕ್ತ ಕಣಗಳು ವಿಭಜನೆಯಾದಾಗ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಯಕೃತ್ತು ಹಾನಿಗೊಳಗಾದರೆ ಅದು ಅದನ್ನು ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗುವುದಿಲ್ಲ ಮತ್ತು ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಚರ್ಮವು ಹಳದಿಯಾಗಿ ಕಾಣಲು ಪ್ರಾರಂಭಿಸುತ್ತದೆ.
ಪಿಗ್ಮೆಂಟೇಶನ್
ಸಿರೋಸಿಸ್ ಅಥವಾ ತೀವ್ರ ಯಕೃತ್ತಿನ ಹಾನಿಯಿಂದಲೂ ಪಿಗ್ಮೆಂಟೇಶನ್ ಸಮಸ್ಯೆಗಳು ಉಂಟಾಗಬಹುದು. ನಿಜ ಹೇಳಬೇಕೆಂದರೆ ಇದು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ. ಇದು ಯಕೃತ್ತಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಕಿನ್ ಪಿಗ್ಮೆಂಟೇಶನ್ ಗೆ ಕಾರಣವಾಗುತ್ತದೆ, ಇದರಿಂದಾಗಿ ಮುಖದ ಮೇಲೆ ಕಂದು ಕಲೆಗಳು ಮತ್ತು ಕೈ ಹಾಗೂ ಕಾಲುಗಳಲ್ಲಿ ಕಪ್ಪು ಕಲೆಗಳು ಉಂಟಾಗುತ್ತವೆ.
ಅತಿಯಾದ ರಕ್ತಸ್ರಾವ
ಸಾಮಾನ್ಯವಾಗಿ ಯಕೃತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಇದು ಗಾಯ ಇತ್ಯಾದಿಗಳ ಸಂದರ್ಭದಲ್ಲಿ ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಯಕೃತ್ತು ಹಾನಿಗೊಳಗಾಗಲು ಪ್ರಾರಂಭಿಸಿದರೆ ಹೆಪ್ಪುಗಟ್ಟುವಿಕೆಯನ್ನು ರೂಪಿಸುವ ಅದರ ಸಾಮರ್ಥ್ಯ ಕಡಿಮೆಯಾಗಬಹುದು. ಇದರಿಂದಾಗಿ, ಸಣ್ಣ ಗಾಯವೂ ಗಂಭೀರವಾಗಬಹುದು ಮತ್ತು ರಕ್ತಸ್ರಾವ ಹೆಚ್ಚಾಗಬಹುದು.
ತಮಿಳುನಾಡಲ್ಲಿ ಮೇಯೋನಿಸ್ ಬ್ಯಾನ್, ಮಧುಮೇಹ ಜೊತೆ ಇದು ತರೋ ಅನಾರೋಗ್ಯ ಒಂದೆರಡಲ್ಲ
ಊತ
ಸಿರೋಸಿಸ್ ಇರುವ ಜನರು ಸಾಮಾನ್ಯವಾಗಿ ಊತವನ್ನು ಅನುಭವಿಸುತ್ತಾರೆ, ವಿಶೇಷವಾಗಿ ಹೊಟ್ಟೆ ಅಥವಾ ಕೆಳಗಿನ ದೇಹದಲ್ಲಿ (ಎಡಿಮಾ) ದೇಹದಲ್ಲಿ ದ್ರವ ಸಮತೋಲನ(fluid balance)ವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅಲ್ಬುಮಿನ್‌ನಂತಹ ಸಾಕಷ್ಟು ಪ್ರೋಟೀನ್‌ಗಳನ್ನು ಯಕೃತ್ತು ಉತ್ಪಾದಿಸಲು ಸಾಧ್ಯವಾಗದ ಕಾರಣ ಈ ಊತ ಸಂಭವಿಸುತ್ತದೆ. ಆಲ್ಬುಮಿನ್ ಮಟ್ಟ ಕಡಿಮೆಯಾದಾಗ, ದ್ರವವು ರಕ್ತನಾಳಗಳಿಂದ ಅಂಗಾಂಶಗಳಿಗೆ ಸೋರಿಕೆಯಾಗಿ ಊತಕ್ಕೆ ಕಾರಣವಾಗಬಹುದು.
ಕಣ್ಣುರೆಪ್ಪೆಗಳ ಸುತ್ತ ಹಳದಿ ಕಲೆಗಳು (Xanthelasma)
ಕ್ಸಾಂಥೆಲಾಸ್ಮಾ ಎಂದರೆ ಕಣ್ಣುರೆಪ್ಪೆಗಳ ಸುತ್ತ ಹಳದಿ ಕಲೆಗಳು. ಚರ್ಮದ ಕೆಳಗೆ ಕೊಬ್ಬು ಸಂಗ್ರಹವಾಗುವುದರಿಂದ ಇದು ಉಂಟಾಗುತ್ತದೆ. ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೂ ಇದು ಸಂಭವಿಸಬಹುದು. ಇದು 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಹೆಚ್ಚಾಗಿ ಹೆಚ್ಚಿನ ಕೊಲೆಸ್ಟ್ರಾಲ್‌ನೊಂದಿಗೆ ಸಂಭವಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.