ಜಿಮ್‌ನಲ್ಲಿ ಹಾರ್ಟ್‌ಅಟ್ಯಾಕ್‌ನಿಂದ ಯುವಕ ಸಾವು; ವರ್ಕೌಟ್​​​ ಮಾಡುವಾಗ್ಲೇ ಯಾಕೆ ಹೀಗಾಗುತ್ತೆ?

By Vinutha Perla  |  First Published Jul 12, 2023, 10:27 AM IST

ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗ್ತಿದೆ. ಅದರಲ್ಲೂ ಯುವಕರೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಹಾಗೆಯೇ ತೆಲಂಗಾಣದಲ್ಲೊಬ್ಬ ಯುವಕ ಜಿಮ್‌ನಲ್ಲಿ ಎಕ್ಸರ್‌ಸೈಸ್ ಮಾಡಿ ಮನೆಗೆ ಬಂದ ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 


ತೆಲಂಗಾಣ: ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖೈ ಹೆಚ್ಚಾಗ್ತಿದೆ. ಅದರಲ್ಲೂ ಯುವಜನತೆ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಎದೆಯಲ್ಲಿ ನೋವು ಕಾಣಿಸಿಕೊಂಡು ಹಠಾತ್ ಹೃದಯಾಘಾತದಿಂದ ಯುವಕ ಮೃತಪಟ್ಟಿರುವ ಘಟನೆ ತೆಲಂಗಾಣದ ಖಮ್ಮಂ ಬಳಿ ನಡೆದಿದೆ. ತಾಲೀಮು ನಡೆಸಿದ ನಂತರ 31 ವರ್ಷದ ವ್ಯಕ್ತಿ ಶ್ರೀಧರ್‌ ಹೃದಯಾಘಾತದಿಂದ ನಿಧರನರಾದರು. 

ಜಿಮ್‌ನಿಂದ ಮನೆಗೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಶ್ರೀಧರ್ ಅಸ್ವಸ್ಥತೆಯ ಅನುಭವ ಆಗಿರುವುದಾಗಿ ಕುಟುಂಬಸ್ಥರಲ್ಲಿ ಹೇಳಿದರು. ಅವರ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ (Hospital) ಸ್ಥಳಾಂತರಿಸಿದರು, ಅಲ್ಲಿ ಅವರು ವೈದ್ಯಕೀಯ ಚಿಕಿತ್ಸೆ (Treatment) ಪಡೆಯುತ್ತಿರುವಾಗ ನಿಧನರಾದರು ಎಂದು ತಿಳಿದುಬಂದಿದೆ. ಈ ಹಿಂದೆ ಒಂದು ಬಾರಿ ಶ್ರೀಧರ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಆ ನಂತರವೂ ಅವರು ವರ್ಕೌಟ್ ಮಾಡುವುದನ್ನು ಮುಂದುವರಿಸಿದ್ದರು.

Latest Videos

undefined

ವಿಟಮಿನ್ ಡಿ, ವಯಸ್ಸಾದವರಲ್ಲಿ ಹೃದಯಾಘಾತ ತಡೆಯಬಹುದು; ಅಧ್ಯಯನದಿಂದ ಮಾಹಿತಿ

ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರ ಅಸ್ವಸ್ಥಗೊಂಡಿದ್ದ ವ್ಯಕ್ತಿ
ಶ್ರೀಧರ್‌ ಭಾನುವಾರ ಮನೆಯಲ್ಲಿ ತಮ್ಮ ಸಹೋದರನ ಮಗಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಅಸ್ವಸ್ಥಗೊಂಡಿರುವ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಮರುದಿನ ಎಂದಿನಂತೆ ಜಿಮ್‌ಗೆ ಹೋಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಶ್ರೀಧರ್ ಬೆಳಿಗ್ಗೆ ಜಿಮ್‌ನಿಂದ ಮನೆಗೆ ಹಿಂದಿರುಗಿದ ಕೂಡಲೇ ಅಸ್ವಸ್ಥಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ (Death) ಘೋಷಿಸಿದ್ದಾರೆ.

ಫೆಬ್ರವರಿ 22 ರಂದು ನಡೆದ ಪ್ರತ್ಯೇಕ ಘಟನೆಯಲ್ಲಿ, 24 ವರ್ಷದ ವಿಶಾಲ್ ಎಂಬ ವ್ಯಕ್ತಿ ತೆಲಂಗಾಣದ ಸಿಕಂದರಾಬಾದ್‌ನಲ್ಲಿರುವ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ (Heartattack) ಸಾವನ್ನಪ್ಪಿದರು. ಜಿಮ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಅಹಿತಕರ ಘಟನೆ ಸೆರೆಯಾಗಿದೆ. ಮೊಂಡಾ ಮಾರ್ಕೆಟ್‌ನ ಘಾನ್ಸಿ ಬಜಾರ್ ಪ್ರದೇಶದ ನಿವಾಸಿಯಾಗಿರುವ ವಿಶಾಲ್ ಇತ್ತೀಚೆಗೆ 2020 ರ ಬ್ಯಾಚ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದರು ಮತ್ತು ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು.

ನವಜಾತ ಶಿಶುವಿಗೆ ಮೂರು ತಿಂಗಳಲ್ಲಿ 3 ಬಾರಿ ಹೃದಯಾಘಾತ, ಯಾಕೆ ಹೀಗಾಗುತ್ತೆ?

ಫೆಬ್ರವರಿ 25 ರಂದು, ವಿಶ್ವನಾಥ್ ಜಂಗೇವಾಡ್ ಎಂಬ 18 ವರ್ಷದ ಹುಡುಗ ತೆಲಂಗಾಣದಲ್ಲಿ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದನು. ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವಿಶ್ವನಾಥ್ ಅವರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಿನ್ವಾಟ್ ತಾಲೂಕಿನ ಶಿವಾನಿ ಗ್ರಾಮದವರು. ಇದಲ್ಲದೆ, ಫೆಬ್ರವರಿ 20 ರಂದು, ಹೈದರಾಬಾದ್‌ನ ಕಾಲಾಪಥರ್ ಪ್ರದೇಶದಲ್ಲಿ ಹಲ್ದಿ ಸಮಾರಂಭದಲ್ಲಿ ರಬ್ಬಾನಿ ಎಂಬ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರು. ವರನಿಗೆ ಅರಿಶಿನ ಪೇಸ್ಟ್ ಹಚ್ಚುವ ಸಾಂಪ್ರದಾಯಿಕ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಗ ರಬ್ಬಾನಿ ಹೃದಯ ಸ್ತಂಭನಕ್ಕೆ (Cardiac arrest) ಒಳಗಾಗಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಉಳಿಸಲಾಗಲಿಲ್ಲ.

ವರ್ಕೌಟ್ ಅನ್ನೋದು ಇತ್ತೀಚಿನ ಜೀವನಶೈಲಿಗೆ ಅಗತ್ಯವಾಗಿದೆ. ಕುಳಿತೇ ಮಾಡುವ ಕೆಲಸ, ಕಳಪೆ ಆಹಾರಪದ್ಧತಿಯಿಂದ ಬಹುತೇಕರು ಬೊಜ್ಜು, ತೂಕ ಹೆಚ್ಚಳದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯವನ್ನು ಕಾಪಾಡಲು ಯೋಗ, ಧ್ಯಾನ, ವ್ಯಾಯಾಮ ಈ ಯಾವುದೇ ರೀತಿಯ ವರ್ಕೌಟ್ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಇತ್ತೀಚಿಗೆ ಹೆಚ್ಚಿನವರು ಜಿಮ್‌ಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ವರ್ಕೌಟ್ ಮಾಡೋವಾಗ ಹೃದಯಾಘಾತ ಆಗೋ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಏನ್ ಹೇಳ್ತಾರೆ ತಿಳಿಯೋಣ.

ಜಿಮ್ ಮಾಡೋದ್ರಿಂದ ಹಾರ್ಟ್‌ ಅಟ್ಯಾಕ್‌ ಆಗುತ್ತಾ, ತಜ್ಞರು ಹೇಳೋದೇನು?

click me!