ಹೇರ್ ಕಟ್ಟಿಂಗ್‌ಗೆ ಲಂಡನ್‌ ಕ್ಷೌರಿಕನನ್ನು ವಿಮಾನದಲ್ಲಿ ಕರೆಸುವ ರಾಜ! ಈತನ ಐಷಾರಾಮಿ ಸಂಪತ್ತಿನ ರಹಸ್ಯವೇನು?

Published : Apr 04, 2025, 06:16 PM ISTUpdated : Apr 04, 2025, 06:57 PM IST

ಬ್ರುನೈ ಸುಲ್ತಾನ್ ಹಸನಲ್ ಬೊಲ್ಕಿಯಾ ತಮ್ಮ ಅಪಾರ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಯಿಂದ ವಿಶ್ವವಿಖ್ಯಾತರಾಗಿದ್ದಾರೆ. ಅವರ ಅರಮನೆ, ಕಾರುಗಳ ಸಂಗ್ರಹ, ಮತ್ತು ವಿಮಾನಗಳು ಅವರ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.  ದೇಶದ ಏಳಿಗೆಗಾಗಿ ಎಥೇಚ್ಚ ಖರ್ಚು ಮಾಡೋ ಈ ರಾಜ  2550 ಕೋಟಿ  ಮೌಲ್ಯದ 1,778 ಕೊಠಡಿಗಳಿರುವ  ವಿಶ್ವದ ಅತಿದೊಡ್ಡ ವಸತಿ ಅರಮನೆಯಲ್ಲಿ ವಾಸಿಸ್ತಾರೆ. ತಮ್ಮ ನೆಚ್ಚಿನ ಕ್ಷೌರಿಕನನ್ನು ಲಂಡನ್‌ನಿಂದ ವಿಮಾನದಲ್ಲಿ ಕರೆಸಿಕೊಳ್ಳುತ್ತಾರೆ ಇದಕ್ಕಾಗಿ ಪ್ರತಿ ಬಾರಿ ಸುಮಾರು  20,000  ಡಾಲರ್ ಖರ್ಚು ಮಾಡ್ತಾರೆ.

PREV
110
ಹೇರ್ ಕಟ್ಟಿಂಗ್‌ಗೆ ಲಂಡನ್‌ ಕ್ಷೌರಿಕನನ್ನು ವಿಮಾನದಲ್ಲಿ ಕರೆಸುವ ರಾಜ! ಈತನ ಐಷಾರಾಮಿ ಸಂಪತ್ತಿನ ರಹಸ್ಯವೇನು?

 ತಮ್ಮ ಸುದೀರ್ಘ ಆಳ್ವಿಕೆಗೆ ಮಾತ್ರವಲ್ಲದೆ, ಅಸಾಧಾರಣ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಗೂ ಬ್ರುನೈಯ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಅಂದಾಜು $50 ಬಿಲಿಯನ್ ನಿವ್ವಳ ಮೌಲ್ಯ ಮತ್ತು 7,000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಸಂಗ್ರಹದೊಂದಿಗೆ, ಅವರು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ರಾಜಮನೆತನದವರಲ್ಲಿ ಒಬ್ಬರು. 1984 ರಲ್ಲಿ ಬ್ರಿಟನ್‌ ನಿಂದ ಸ್ವಾತಂತ್ರ್ಯ ಪಡೆದ ನಂತರ ಬ್ರುನೈ ದೇಶದ ಪ್ರಧಾನಿಯಾಗಿದ್ದು, ಜಗತ್ತಿನಲ್ಲಿ ಉಳಿದಿರುವ ಕೆಲವೇ ಕೆಲವು ರಾಜಾಡಳಿತದಲ್ಲಿ ಮತ್ತು ರಾಜರುಗಳಲ್ಲಿ ಒಬ್ಬರು.

210

ತನ್ನ ಅತಿರಂಜಿತ ಜೀವನಶೈಲಿಗೆ ಹೆಸರುವಾಸಿಯಾದ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಜುಲೈ 15, 1946 ರಂದು ಸುಲ್ತಾನ್ ಹಾಜಿ ಒಮರ್ ಅಲಿ ಸೈಫುದ್ದೀನ್ III ಮತ್ತು ರಾಣಿ ಪತ್ನಿ ಪೆಂಗಿರಾನ್ ಅನಕ್ ದಾಮಿತ್ ಅವರ ಪುತ್ರ ಮಗನಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ  ತಂದೆಯ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಅವರು ಆಗಸ್ಟ್ 1968 ರಲ್ಲಿ ಬ್ರುನೈಯ 29 ನೇ ಸುಲ್ತಾನರಾದರು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು.  ದಶಕಗಳಲ್ಲೇ ಅವರು ತಮ್ಮ ಸಂಪತ್ತು, ಅಧಿಕಾರ ಮತ್ತು ಐಷಾರಾಮಿ ಜೀವನ ಶೈಲಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟರು.

ಪ್ರಧಾನಿ ಮೋದಿ ಪ್ರವಾಸ ಕೈಗೊಂಡಿರುವ ಬ್ರುನೈ ರಾಜ ಅಂತಿಂಥವನಲ್ಲ, ಚಿನ್ನದಲ್ಲೇ ಸ್ನಾನ ಮಾಡುವ ಸುಲ್ತಾನ!


 

310

 ಸುಲ್ತಾನರು ಬ್ರುನೈಯ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದು, ಇದರ ಜೊತೆಗೆ ಹಲವಾರು ಇತರ ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ.  ಆಗ್ನೇಯ ಏಷ್ಯಾದಲ್ಲಿರುವ ಬೊರ್ನಿಯೋ ದ್ವೀಪದಲ್ಲಿರುವ ಸಣ್ಣ ದೇಶ ಬ್ರುನೈ. ಆದರೆ ಈ ದೇಶವು ಶ್ರೀಮಂತ  ತೈಲ ಸಮೃದ್ಧಿಯನ್ನು ಹೊಂದಿದ್ದು,   ಸುಲ್ತಾನರ ಸಂಪತ್ತು ಅದಕ್ಕೆ ತಕ್ಕಂತೆ ಬೆಳೆದಿದೆ. ದೇಶ ಚಿಕ್ಕದಾಗಿದ್ದರೂ ತನ್ನ  ಶ್ರೀಮಂತ ತೈಲ ನಿಕ್ಷೇಪಗಳಿಂದಾಗಿ ಆರ್ಥಿಕವಾಗಿ ಸದೃಢವಾಗಿದೆ. ತಲಾ ಆದಾಯ ಹೆಚ್ಚಿರುವ ಜಗತ್ತಿನ ಟಾಪ್‌  5 ದೇಶಗಳಲ್ಲಿ ಬ್ರುನೈ ಕೂಡ ಒಂದು.

410

 ದೇಶದ ಏಳಿಗೆಗಾಗಿ ಎಥೇಚ್ಚ ಖರ್ಚು ಮಾಡ್ತಾರೆ, ಶಿಕ್ಷಣ, ಆರೋಗ್ಯ, ಸಮಾಜಿಕ ಅಭಿವೃದ್ಧಿ ಸೇರಿದೆ. ಇಲ್ಲಿ ಜನತೆಗೆ ಆರೋಗ್ಯ ಸೇವೆ ಸಂಪೂರ್ಣ ಉಚಿತವಾಗಿದೆ. ಇಲ್ಲಿ 400 ಮಿಲಿಯನ್ ಡಾಲರ್ ಆರೋಗ್ಯ ಸೇವೆಗಾಗಿಯೇ ಖರ್ಚಾಗುತ್ತದೆ. ಇಲ್ಲಿನ ಜನತೆ ವೈಯಕ್ತಿಕವಾಗಿ ಎಷ್ಟೇ ಸಂಪಾದನೆ ಮಾಡಿದ್ರೂ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ. ಕಾರ್ಪೋರೇಟ್‌ ತೆರಿಗೆ ಇದ್ದು, ಅದರಲ್ಲೂ ವಿದೇಶಿ ಹೂಡಿಕೆಗೆ ತೆರಿಗೆ ಇದೆ. ರಿಯಾಯ್ತಿ ಕೂಡ ನೀಡಲಾಗುತ್ತದೆ.

ಪ್ರವಾಸಿಗರಿಗೆ ಮುಕ್ತವಾದ ದ್ವೀಪ, ಫ್ರೀಯಾಗಿ ಸಿಗುತ್ತೆ ಅನ್‌ಲಿಮಿಟೆಡ್ ಬಿಯರ್; ಇಲ್ಲಿಗೆ ಹೋಗೋದು ಹೇಗೆ? ಬೆಲೆ ಎಷ್ಟು?

510

 ಸುಲ್ತಾನನ ಸಂಪತ್ತಿನ  ಅತ್ಯಂತ ಪ್ರಸಿದ್ಧ ಸಂಕೇತವೆಂದರೆ ಅದು ಅವರ ಅರಮನೆ ಇಸ್ತಾನಾ ನೂರುಲ್ ಇಮಾನ್, ಇದನ್ನು ನಿರ್ಮಿಸಲು ಸುಮಾರು 2550 ಕೋಟಿ ಖರ್ಚಾಗಿದೆಯಂತೆ.  ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಪಟ್ಟಿ ಮಾಡಲಾದ ಇದು ವಿಶ್ವದ ಅತಿದೊಡ್ಡ ವಸತಿ ಅರಮನೆಯಾಗಿದೆ. ಈ ಅರಮನೆಯು 1,778 ಕೊಠಡಿಗಳು, 257 ಸ್ನಾನಗೃಹಗಳು, ಐದು ಈಜುಕೊಳಗಳು, ಒಂದು ಭವ್ಯ ಮಸೀದಿ, ಒಂದು ಪೋಲೋ ಮೈದಾನ ಮತ್ತು 110 ಕಾರುಗಳನ್ನು ಹಿಡಿದಿಟ್ಟುಕೊಳ್ಳಬಹುದಾದ ಬೃಹತ್ ಗ್ಯಾರೇಜ್ ಅನ್ನು ಸಹ ಒಳಗೊಂಡಿದೆ.

610

ಸುಲ್ತಾನ್ ಬೊಲ್ಕಿಯಾ ಅವರ ಕಾರುಗಳ ಮೇಲಿನ ಪ್ರೀತಿಗೆ ಸರಿ ಸಾಟಿ ಯಾವುದು ಕೂಡ ಇಲ್ಲ.   ಅವರ ವೈಯಕ್ತಿಕ ಸಂಗ್ರಹದಲ್ಲಿ 7,000 ಕ್ಕೂ ಹೆಚ್ಚು ವಾಹನಗಳಿವೆ, ಅದರಲ್ಲಿ 500 ರೋಲ್ಸ್ ರಾಯ್ಸ್ ಮಾತ್ರ ಸೇರಿವೆ. ಇದರ ಜೊತೆಗೆ  300 ಫೆರಾರಿ, ಬೆಂಟ್ಲಿ, BMW, ಮರ್ಸಿಡಿಸ್, ಜಾಗ್ವಾರ್ ಮತ್ತು ಇದುವರೆಗೆ ತಯಾರಿಸಿದ ಐದು ಮೆಕ್‌ಲಾರೆನ್ F1 LM ಕಾರುಗಳಲ್ಲಿ ಮೂರು ಅಪರೂಪದ ಮಾದರಿಗಳನ್ನು ಹೊಂದಿದ್ದಾರೆ. ಸುಲ್ತಾನರ ಖಾಸಗಿ ರೋಲ್ಸ್ ರಾಯ್ಸ್ ಚಿನ್ನದ ಲೇಪಿತವಾಗಿದ್ದು, ದಿನದ 24 ಗಂಟೆಯೂ ಚಾಲೂ ಸ್ಥಿತಿಯಲ್ಲೇ ಇರುತ್ತದಂತೆ.

ರಾಮ್ ಚರಣ್ ಬರ್ತ್‌ಡೇ: 40 ಕೋಟಿ ಬೆಲೆಯ ಮನೆಯಲ್ಲಿ ವಾಸ, ಆಸ್ತಿ ಎಷ್ಟಿದೆ?

710

ಕಾರುಗಳ ಜೊತೆಗೆ, ಸುಲ್ತಾನ್ ಖಾಸಗಿ ವಿಮಾನಗಳ ಸಮೂಹವನ್ನು ಹೊಂದಿದ್ದಾರೆ, ಅದರಲ್ಲಿ  ಬೋಯಿಂಗ್ 747-400 ಕೂಡ ಸೇರಿದೆ. ಇದನ್ನು ಚಿನ್ನದ ಲೇಪಿತದಿಂದ ಮಾಡಲಾಗಿದೆ. ಅವರ ಖಾಸಗಿ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಅವರ ಐಶಾರಾಮಿ ಜೀವನ ಶೈಲಿಗೆ  ಮತ್ತೊಂದು ಉದಾಹರಣೆಯಾಗಿದೆ.  
 

810

ಆಶ್ಚರ್ಯಕರ ವಿಷಯವೆಂದರೆ  ರಾಜ ತಮ್ಮ ತಲೆಯ ಕೂದಲನ್ನು ಕಟ್ ಮಾಡಲು   ಲಂಡನ್‌ನಿಂದ ಬ್ರೂನೈಗೆ ತಮ್ಮ ನೆಚ್ಚಿನ ಕ್ಷೌರಿಕನನ್ನು ವಿಮಾನದಲ್ಲಿ ಕರೆದೊಯ್ಯುತ್ತಾರೆ, ಪ್ರತಿ ಬಾರಿ ಸುಮಾರು  20,000  ಡಾಲರ್ ಖರ್ಚು ಮಾಡುತ್ತಾರಂತೆ. ಇದಲ್ಲದೆ  ಸುಲ್ತಾನರ ಖಾಸಗಿ ಮೃಗಾಲಯ ಕೂಡ ಇದ್ದು, 30 ಬಂಗಾಳ ಹುಲಿಗಳನ್ನು ಹೊಂದಿದೆ. ಅಲ್ಲದೆ ವಿವಿಧ ಪಕ್ಷಿ ಪ್ರಭೇದಗಳು ಇವೆ. 

910

 ಒಮ್ಮೆ ಸುಲ್ತಾನ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಅದಕ್ಕಾಗಿ ಏರ್‌ ಬಸ್‌ ಖರೀದಿಸಿದ್ದರು. ಮಗಳ ಹುಟ್ಟುಹಬ್ಬ ಕೂಡ ಅದ್ಧೂರಿಯಾಗಿ ಮಾಡಲಾಗಿತ್ತು. ವಿದೇಶಿ ಗಣ್ಯರು ಬಂದು ಕಾರ್ಯಕ್ರಮ ನೀಡಿದ್ದರು. ಅವರಿಗೆ ಕೋಟಿಗಟ್ಟಲೆ ಕೊಟ್ಟಿದ್ದರು. ಇಷ್ಟು ಮಾತ್ರವಲ್ಲ ಮಗಳ ಮದುವೆಯನ್ನು ಎರಡು ವಾರಗಳವರೆಗೆ ನಡೆಸಿದ್ದರು. ಮದುವೆಗಾಗಿ ಇಡಿ ದೇಶದಲ್ಲೇ ರಜೆ ಘೋಷಿಸಲಾಗಿತ್ತು. ಮೈಕೆಲ್ ಜಾಕ್ಸನ್, ಬ್ರಿಟ್ನಿ ಸ್ಪಿಯರ್ ಅಂಥ ಹಲವು ಕಲಾವಿದರಿಂದ ಕಾರ್ಯಕ್ರಮ ಇತ್ತು.

1010

2014ರಲ್ಲಿ ಷರಿಯಾ ಕಾನೂನಿನ ಬಗ್ಗೆ ದಂಡ ಸಂಹಿತೆ ವಿಧಿಸಿದಾಗ ವಿವಾದವಾಗಿತ್ತು. ಇದು ಅಂತರಾಷ್ಟ್ರಿಯ ಟೀಕೆಗೆ ಗುರಿಯಾದಾಗ ಕಾನೂನನ್ನು ಹಿಂದಕ್ಕೆ ಪಡೆಯಲಾಯ್ತು. ಇಂತಹ ಸಣ್ಣ ಪುಟ್ಟ ವಿವಾದಗಳ ಹೊರತಾಗಿಯೂ ಸಾಂಸ್ಕೃತಿಕ ಪರಂಪರೆಯನ್ನು ಈ ದೇಶ ಕಾಪಾಡಿಕೊಂಡು ಬರುತ್ತಿದ್ದು, ಇಲ್ಲಿನ ಜನತೆ ಉನ್ನತ ಮಟ್ಟದ ಜೀವನ ನಡೆಸಿಕೊಂಡು ಬರುತ್ತಿರುವುದು ಮಾತ್ರ ಸುಳ್ಳಲ್ಲ.

Read more Photos on
click me!

Recommended Stories