
ಟೋಕಿಯೋ(ಏ.16) ಉದ್ಯೋಗಿಗಳಿಗೆ ಕೆಲಸ ಮಾಡಿ ಚೇರ್‌ನಿಂದ ಏಳುವಾಗ ಚೇರ್ ಸರಿಯಾಗಿ ಇಡಬೇಕು ಅನ್ನೋ ಚಿಂತೆ, ಇತ್ತ ಕಚೇರಿಗೆ ಎಲ್ಲಾ ಕುರ್ಚಿಗಳನ್ನು ಜೋಡಿಸಿ ಇಡಬೇಕಾದ ಅನಿವಾರ್ಯತೆಗಳು ಸಾಮಾನ್ಯ. ಹಲವು ಬಾರಿ ಅವಸರದಲ್ಲಿ ಚೇರ್ ಸರಿ ಮಾಡಿ ಇಡುವ ವ್ಯವಧಾನ ಇರುವುದಿಲ್ಲ. ಪರಿಣಾಮ ಕಚೇರಿಯ ಎಲ್ಲಾ ಚೇರ್‌ಗಳು ಚೆಲ್ಲಾಪಿಲ್ಲಿಯಾಗಿರುವ ದೃಶ್ಯ ಉದ್ಯೋಗಿಗಳಿಗೆ ಹೊಸದೇನಲ್ಲ. ಇದೀಗ ಈ ಸಮಸ್ಯೆಗೆ ಉತ್ತರವಾಗಿ ನಿಸಾನ್ ಆಟೋಮೊಬೈಲ್ ಹೊಸ ಇಂಟಿಲಿಜೆಂಟ್ ಪಾರ್ಕಿಂಗ್ ಚೇರ್ ಬಿಡುಗಡೆ ಮಾಡಿದೆ. ಈ ಕುರ್ಚಿಯನ್ನು ಎದ್ದ ಬಳಿಕ ಸರಿಯಾದ ಜಾಗದಲ್ಲಿ ಇಡಬೇಕಿಲ್ಲ. ಕೇವಲ ಒಂದೇ ಒಂದು ಚಪ್ಪಾಳೆ ತಟ್ಟಿದರೆ ಸಾಕು, ಆಟೋಮ್ಯಾಟಿಕ್ ಆಗಿ ಕುರ್ಚಿ ಸರಿಯಾದ ಸ್ಥಳದಲ್ಲಿ ನಿಲ್ಲಲಿದೆ.
ಆಟೋಮ್ಯಾಟಿಕ್ ಕಾರ್ ಪಾರ್ಕಿಂಗ್‌ನಿಂದ ಪ್ರೇರಿತ
ನಿಸಾನ್ ಮೊಟ್ಟ ಮೊದಲ ಇಂಟಲಿಜೆಂಟ್ ಪಾರ್ಕಿಂಗ್ ಚೇರ್ ಲಾಂಚ್ ಮಾಡಿದೆ. ಇದು ಕಾರುಗಳ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ ತಂತ್ರಜ್ಞಾನದಿಂದ ಪ್ರೇರಿತವಾಗಿರುವ ಚೇರ್ ಆಗಿದೆ. ಇಂಟಲಿಜೆಂಟ್ ಪಾರ್ಕಿಂಗ್ ಚೇರ್ 360 ಡಿಗ್ರಿ ಚಲಿಸುತ್ತದೆ. ಎಲ್ಲೇ ಇದ್ದರೂ ಚಪ್ಪಾಳೆ ತಟ್ಟಿದರೆ ಮೂಲ ಸ್ಥಾನ ಅದಲ ಸರಿಯಾದ ಸ್ಥಳಧಲ್ಲಿ ನಿಲ್ಲಲಿದೆ. ಚೇರ್ ಆರಂಭದಲ್ಲಿ ಇಡುವಾಗ ಟಾರ್ಗೆಟ್ ಸ್ಥಳವನ್ನು ಗುರತಿಸದರೆ ಸಾಕು. ಅಂದರೆ ಚೇರ್ ಇಡುವಾಗ ಟಾರ್ಗೆಟ್ ಪ್ಲೇಸ್ ಬಟನ್ ಕ್ಲಿಕ್ ಮಾಡಿದರೆ ಸಾಕು. ಬಳಿಕ ಈ ಚೇರ್ ಕಚೇರಿಯ ಯಾವುದೇ ಮೂಲೆಯಲ್ಲಿದ್ದರೂ ಚಪ್ಪಾಳೆ ತಟ್ಟಿದರೆ ಸರಿಯಾದ ಸ್ಥಳಕ್ಕೆ ಬಂದು ನಿಲ್ಲಲಿದೆ.
ಅತೀ ಹೆಚ್ಚು ಜನ ಡೌನ್ಲೋಡ್ ಮಾಡಿದ ಆ್ಯಪ್ ಇದು, ಇನ್‌ಸ್ಟಾಗ್ರಾಂ ಹಿಂದಿಕ್ಕಿ ನಂ.1
ಚೇರ್ ಸೆಟ್ ಮಾಡಲು ಸಿಬ್ಬಂದಿ ಬೇಡ
ಎಐ ತಂತ್ರಜ್ಞಾವನ್ನು ಬಳಸಲಾಗಿದೆ. ಇನ್ನು ಚೇರ್ ಇಟ್ಟ ಕಚೇರಿ ಕೋಣೆಯೊಳಗೆ ಬರ್ಡ್ ಐ ಕ್ಯಾಮೆರಾ ಬಳಸಲಾಗಿದೆ. ಈ ವೈಯರ್‌ಲೆ ಕ್ಯಾಮೆರಾಗಳು ಚೇರ್ ಸ್ಥಳವನ್ನು ಗುರುತಿಸಲಿದೆ. ಇನ್ನು ಸುಲಭವಾಗಿ ತನ್ನ ಸ್ಥಾನಕ್ಕೆ ಮರಳಲು ನೆರವು ನೀಡಲಿದೆ. ಇದರಿಂದ ಕಚೇರಿಯಲ್ಲಿ ಉದ್ಯೋಗಿಗಳು ಹೋದ ಬಳಿಕ ಮತ್ತೆ ಚೇರ್ ಸೆಟ್ ಮಾಡಲು ಮತ್ತೊಬ್ಬ ಸಿಬ್ಬಂದಿಯನ್ನು ಇಡಬೇಕಾಗಿಲ್ಲ. ಕೇವಲ ಒಂದು ಚಪ್ಪಾಳೆ ತಟ್ಟಿದರೆ ಸಾಕು ಎಲ್ಲವೂ ಮೊದಲಿನ ಜಾಗಕ್ಕೆ ಬರಲಿದೆ.
ಕುಳಿತುಕೊಂಡಿದ್ದರೆ ಚೇರ್ ಚಲಿಸುವುದಿಲ್ಲ
ಚೇರ್ ತನ್ನ ಮೊದಲಿನ ಸ್ಥಾನದಲ್ಲಿ ಇಲ್ಲ ಎಂದು ಯಾರಾದರೂ ಕುಳಿತಿರುವಾಗ ಚಪ್ಪಾಳೆ ತಟ್ಟಿದರೇ ಈ ಚೇರ್ ಮೊದಲಿನ ಸ್ಥಾನಕ್ಕೆ ಚಲಿಸುವುದಿಲ್ಲ. ಚೇರ್ ಮೇಲೆ ಯಾರೂ ಕುಳಿತಿರದಿದ್ದರೆ ಮಾತ್ರ ಚಪ್ಪಾಳೆ ತಟ್ಟಿದಾಗ ಚೇರ್ ಮೊದಲಿನ ಸ್ಥಾನಕ್ಕೆ ಬಂದು ತಲಪಲಿದೆ.
ಚೀನಾದ ಡೀಪ್‌ಸೀಕ್‌ಗೆ ಮೆಟಾ ಕೌಂಟರ್, ಅತ್ಯಾಧುನಿಕ ಲಾಮ 4 AI ಬಿಡುಗಡೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.