ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಯಾವ ಸ್ಥಳದಲ್ಲೂ ಸುರಕ್ಷಿತರಲ್ಲ. ಹಾಗಂತ ಮನೆಯಲ್ಲೇ ಇರೋದು ಅಸಾಧ್ಯವಾದ ಮಾತು. ಕೆಲ್ಸ, ಕಾಲೇಜು ಅಂತ ಹೊರಗೆ ಹೋಗುವ ಹುಡುಗಿಯರು ಕ್ಯಾಬ್ ಅಥವಾ ರಿಕ್ಷಾ ಹತ್ತುವ ಮೊದಲೇ ಕೆಲ ಸೇಫ್ಟಿ ರೂಲ್ಸ್ ಫಾಲೋ ಮಾಡ್ಬೇಕು.
ಕ್ಯಾಬ್ ಹತ್ತಿದ ತಕ್ಷಣ ಅಥವಾ ಪ್ರಯಾಣ ಆರಂಭವಾಗುವ ಮುನ್ನ ನಿಮ್ಮ ಲೈವ್ ಲೊಕೇಶನ್ (Live Location) ಅನ್ನು ಕುಟುಂಬದ ಸದಸ್ಯರು ಅಥವಾ ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ನಿಮ್ಮ ಪ್ರಯಾಣದ ಮಾಹಿತಿ ಅವರಿಗೆ ತಲುಪಿರುತ್ತದೆ.
24
ಎಸ್ ಒಎಸ್ (SOS) ಅಥವಾ ಎಮರ್ಜೆನ್ಸಿ ಆಯ್ಕೆ
ಮೊಬೈಲ್ ಅಥವಾ ಕ್ಯಾಬ್ ಆ್ಯಪ್ನಲ್ಲಿರುವ SOS / Emergency ಬಟನ್ ಎಲ್ಲಿದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ತುರ್ತು ಪರಿಸ್ಥಿತಿಯಲ್ಲಿ ಸಮಯ ವ್ಯರ್ಥವಾಗದೆ ಸಹಾಯ ಕೇಳಲು ಇದು ನೆರವಾಗುತ್ತದೆ. ತುರ್ತು ಸಂದರ್ಭದಲ್ಲಿ ನೀವು ಇದನ್ನು ಪ್ರೆಸ್ ಮಾಡ್ಬೇಕು.
34
ಚಾಲಕ ಮತ್ತು ವಾಹನದ ವಿವರ ಪರಿಶೀಲಿಸಿ
ಕ್ಯಾಬ್ಗೆ ಹತ್ತುವ ಮೊದಲು ಚಾಲಕರ ಹೆಸರು, ವಾಹನದ ನಂಬರ್, ಫೋಟೋ ಹಾಗೂ ಟ್ರಿಪ್ ವಿವರಗಳು ಆ್ಯಪ್ನಲ್ಲಿ ತೋರಿಸಿರುವ ಮಾಹಿತಿಗೆ ಹೊಂದಿಕೆಯಾಗುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಅನುಮಾನ ಕಂಡುಬಂದರೆ ಪ್ರಯಾಣ ಆರಂಭಿಸಬೇಡಿ.
ಈ ಅಭ್ಯಾಸಗಳು ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಮಕ್ಕಳು, ಹಿರಿಯರು, ಪುರುಷರು ಸೇರಿದಂತೆ ಪ್ರತಿಯೊಬ್ಬರೂ ಅನುಸರಿಸಬಹುದಾದ ಸರಳ ಆದರೆ ಪರಿಣಾಮಕಾರಿ ಸುರಕ್ಷತಾ ಕ್ರಮಗಳಾಗಿವೆ. ಎಚ್ಚರಿಕೆಯಿಂದಿರುವುದು ಭಯದಿಂದ ಬದುಕುವುದು ಎಂದಲ್ಲ. ಅದು ಜವಾಬ್ದಾರಿಯುತವಾಗಿ ಮತ್ತು ಆತ್ಮವಿಶ್ವಾಸದಿಂದ ಪ್ರಯಾಣಿಸುವ ಮಾರ್ಗವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.