ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ, ತಮ್ಮ ಗರ್ಭಾವಸ್ಥೆಯ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ರಾಂತಿ, ಬಟ್ಟೆಯ ಆಯ್ಕೆ, ಭಾಷೆಯ ಸಮಸ್ಯೆ ಮತ್ತು ಇಲ್ಲಿನ ಹವಾಮಾನದಂತಹ ವಿಷಯಗಳಲ್ಲಿ ತಮಗಾದ ವಿಚಿತ್ರ ಅನುಭವ ಹಾಗೂ ಸವಾಲುಗಳ ಬಗ್ಗೆ ಅವರು ವಿವರಿಸಿದ್ದಾರೆ.
ಗರ್ಭಿಣಿಯಾಗಿದ್ದಾಗ ಮಹಿಳೆಯರು ಖುಷಿಯ ಜೊತೆಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅದರಲ್ಲೂ ಬೇರೆ ದೇಶದಲ್ಲಿ ವಾಸವಾಗಿದ್ದರೆ, ಅಲ್ಲಿನ ಸಂಸ್ಕೃತಿ, ಪದ್ಧತಿಗಳಿಂದಾಗಿ ವಿಚಿತ್ರ ಅನುಭವಗಳೂ ಆಗಬಹುದು. ಸದ್ಯ ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ ಎಂಬ ಯುವತಿ, ತಮಗೆ ಗರ್ಭಾವಸ್ಥೆಯಲ್ಲಿ ಎದುರಾದ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ.
27
4 ಮುಖ್ಯ ವಿಷಯ
'ನನ್ನ ಮೊದಲ ಗರ್ಭಾವಸ್ಥೆ ಭಾರತದಲ್ಲಿರುವುದು ನನ್ನ ಅದೃಷ್ಟ. ಯಾಕಂದ್ರೆ, ಹೋಲಿಕೆ ಮಾಡಲು ನನಗೆ ಬೇರೆ ಅನುಭವಗಳಿಲ್ಲ. ಹಾಗಾಗಿ, ಬೇರೆ ದೇಶದಲ್ಲಿದ್ರೆ ಹೇಗಿರುತ್ತಿತ್ತೋ ಅಂತ ನಾನು ಯೋಚಿಸಲ್ಲ' ಎಂದು ಸೋಫಿಯಾ ಬರೆದುಕೊಂಡಿದ್ದಾರೆ. ಇದರ ಜೊತೆಗೆ, ಕಳೆದ ಕೆಲವು ತಿಂಗಳುಗಳಲ್ಲಿ ತಮಗೆ ವಿಚಿತ್ರ ಎನಿಸಿದ ಮತ್ತು ಕಿರಿಕಿರಿ ಉಂಟುಮಾಡಿದ 4 ಮುಖ್ಯ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.
37
1.ಕೇವಲ ವಿಶ್ರಾಂತಿ
ಭಾರತದಲ್ಲಿ ಗರ್ಭಿಣಿಯರು ಸಂಪೂರ್ಣವಾಗಿ ರೆಸ್ಟ್ ಮಾಡಬೇಕು, ಯಾವುದೇ ವ್ಯಾಯಾಮ ಮಾಡಬಾರದು ಅನ್ನೋದು ಸಾಮಾನ್ಯ ನಂಬಿಕೆ. ಆದರೆ, ಗರ್ಭಾವಸ್ಥೆಯನ್ನು ಒಂದು ಕಾಯಿಲೆಯಾಗಿ ನೋಡಲು ನನಗೆ ಇಷ್ಟವಿಲ್ಲ. ಯೋಗ, ವಾಕಿಂಗ್‌ನಂತಹ ಚಟುವಟಿಕೆಗಳು ನನಗೆ ಸಹಾಯ ಮಾಡುತ್ತಿವೆ ಅಂತ ಸೋಫಿಯಾ ಹೇಳುತ್ತಾರೆ.
ಗರ್ಭಿಣಿಯಾಗಿದ್ದಾಗ ಹಾಕುವ ಬಟ್ಟೆ ಬಗ್ಗೆನೂ ಜನ ಪ್ರಶ್ನೆ ಮಾಡ್ತಾರೆ. ಹೊಟ್ಟೆ ಕಾಣುವ ಹಾಗೆ ಕ್ರಾಪ್ ಟಾಪ್ ಹಾಕಿದಾಗ, 'ಯಾಕೆ ಹೀಗೆಲ್ಲಾ ಬಟ್ಟೆ ಹಾಕ್ತೀಯಾ?' ಅಂತ ಜನ ಕೇಳ್ತಾರಂತೆ. 'ಆದರೆ ನನ್ನ ದೇಹದಲ್ಲಿ ಆಗ್ತಿರೋ ಬದಲಾವಣೆಗಳನ್ನು ಮುಚ್ಚಿಡಲು ನನಗೆ ಇಷ್ಟವಿಲ್ಲ. ಈ ಸಮಯದಲ್ಲಿ ನನಗೆ ಇಷ್ಟವಾದ ಬಟ್ಟೆ ಹಾಕಿ ಖುಷಿಯಾಗಿರಲು ಬಯಸುತ್ತೇನೆ' ಎನ್ನುವುದು ಸೋಫಿಯಾ ಮಾತು.
57
3. ಭಾಷೆಯ ಸಮಸ್ಯೆ
ಇಲ್ಲಿನ ಭಾಷೆ ಗೊತ್ತಿಲ್ಲದೇ ಇರುವುದು ದೊಡ್ಡ ಸವಾಲಾಗಿದೆ. ಮೆಡಿಕಲ್ ರಿಪೋರ್ಟ್‌ಗಳನ್ನು ಓದಿ ಅರ್ಥಮಾಡಿಕೊಳ್ಳುವುದು, ವೈದ್ಯರ ಬಳಿ ಅನುಮಾನಗಳನ್ನು ಕೇಳುವುದು ತುಂಬಾ ಕಷ್ಟ. ರಿಪೋರ್ಟ್‌ಗಳನ್ನು ಮತ್ತೆ ಮತ್ತೆ ಓದುವುದು ಮಾನಸಿಕವಾಗಿ ಕುಗ್ಗಿಸುತ್ತದೆ ಅಂತಾನೂ ಅವರು ಹೇಳಿದ್ದಾರೆ.
67
4. ಭಾರತದ ಹವಾಮಾನ
ಭಾರತದ ಬಿಸಿಲು ಮತ್ತು ತೇವಾಂಶ ತುಂಬಿದ ವಾತಾವರಣ ಗರ್ಭಾವಸ್ಥೆಯಲ್ಲಿ ಇನ್ನಷ್ಟು ಕಷ್ಟ ಕೊಡುತ್ತಿದೆಯಂತೆ. 'ಬೆಳಗ್ಗಿನ ತಿಂಡಿ ಮಾಡುವಷ್ಟರಲ್ಲೇ ಪೂರ್ತಿ ಬೆವತು ಹೋಗ್ತೀನಿ. ದಿನಕ್ಕೆ ಹಲವು ಬಾರಿ ಸ್ನಾನ ಮಾಡಬೇಕಾಗುತ್ತೆ' ಅಂತ ಅವರು ವಿವರಿಸಿದ್ದಾರೆ.
77
ವಿಶ್ರಾಂತಿಗೆ ಸಲಹೆ
ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. 'ಭಾರತದಲ್ಲಿ ಅವಧಿಪೂರ್ವ ಜನನಗಳು ಹೆಚ್ಚಾಗಿರುವುದರಿಂದಲೇ ವಿಶ್ರಾಂತಿಗೆ ಸಲಹೆ ನೀಡುತ್ತಾರೆ' ಎಂದು ಒಬ್ಬರು ಹೇಳಿದ್ದಾರೆ. ಇನ್ನು ಕೆಲವರು, 'ಜನರು ಒಳ್ಳೆಯ ಉದ್ದೇಶದಿಂದಲೇ ಗರ್ಭಿಣಿಯರಿಗೆ ಇಂತಹ ಸಲಹೆಗಳನ್ನು ನೀಡುತ್ತಾರೆ' ಎಂದು ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.