ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಟ್ಟೆ ನೋವು, ಸೆಳೆತ, ಮೂಡ್ ಸ್ವಿಂಗ್, ಆಯಾಸ, ದೌರ್ಬಲ್ಯ ಸಮಸ್ಯೆ. ಮೊದಲಾದವು. ಈ ಎಲ್ಲಾ ಸಮಸ್ಯೆಯಿದ್ದರೂ ಪಿರಿಯಡ್ ಟೈಮ್ ನಲ್ಲಿ ನೈರ್ಮಲ್ಯವನ್ನು ಪಾಲಿಸಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮುಟ್ಟಿನ ಸಮಯದಲ್ಲಿ ದೇಹದಿಂದ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತವೆ. ಅದರಲ್ಲೂ ಪ್ರತಿ 4 ಗಂಟೆಗೊಮ್ಮೆ ಸ್ಯಾನಿಟರಿ ಪ್ಯಾಡ್ ಬದಲಾಯಿಸದಿದ್ದರೆ ಹಲವು ಕಾಯಿಲೆಗಳು ಕಾಡಬಹುದು.