ಬಾಲಿವುಡ್‌ನ ಟಾಪ್‌ ಹೀರೋಯಿನ್; ನೇಮ್‌, ಫೇಮ್ ಎಲ್ಲಾ ಬಿಟ್ಟು ಖಾಸಗಿ ಸಂಸ್ಥೆಯ ಜಾಬ್‌ಗೆ ಜಾಯಿನ್ ಆದ್ಲು!

Published : Sep 24, 2023, 10:56 AM ISTUpdated : Sep 24, 2023, 11:21 AM IST

ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಎಲ್ಲಾ ಯುವಕ-ಯುವತಿಯರು ಹಾತೊರೆಯುತ್ತಾರೆ. ಆದರೆ ಆ ಯುವತಿ ಮಾತ್ರ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಟಾಪ್‌ ಸ್ಟಾರ್‌ಗಳ ಜೊತೆ ನಟಿಸಿ, ಭರ್ಜರಿಯಾಗಿ ಮಿಂಚುತ್ತಿದ್ದರೂ ಚಿತ್ರೋದ್ಯಮ ತೊರೆದು ಹೋದಳು. ಯಾರಾಕೆ?

PREV
18
ಬಾಲಿವುಡ್‌ನ ಟಾಪ್‌ ಹೀರೋಯಿನ್; ನೇಮ್‌, ಫೇಮ್ ಎಲ್ಲಾ ಬಿಟ್ಟು ಖಾಸಗಿ ಸಂಸ್ಥೆಯ ಜಾಬ್‌ಗೆ ಜಾಯಿನ್ ಆದ್ಲು!

ಬಾಲಿವುಡ್ ಅಥವಾ ಹಿಂದಿ ಚಲನಚಿತ್ರೋದ್ಯಮದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಎಲ್ಲಾ ಯುವಕ-ಯುವತಿಯರು ಹಾತೊರೆಯುತ್ತಾರೆ. ಮಾಡೆಲ್ಸ್, ಸೀರಿಯಲ್ ನಟಿಯಂದಿರು ಬಿಟೌನ್‌ನಲ್ಲಿ ನೆಲಯೂರಲು ಯತ್ನಿಸುತ್ತಾರೆ. ಆದರೆ ಬಾಲಿವುಡ್‌ನಲ್ಲಿ ನಟಿಸಲು ಅವಕಾಶ ಸಿಕ್ಕಾಗಲೂ ಮುಲಾಜಿಲ್ಲದೆ ತಿರಸ್ಕರಿಸುವವರುಂಟೇ. ಆದರೆ ಆಕೆ ಹಾಗೆ ಮಾಡಿದ್ದಳು.

28

ಗೂಗಲ್‌ನಲ್ಲಿ ತನ್ನ ಕನಸಿನ ಜಾಬ್‌ ಮಾಡಲು ಆಕೆ ಬಾಲಿವುಡ್‌ನ್ನು ತೊರೆದಳು. ಎಲ್ಲಾ ಟಾಪ್‌  ನಟರ ಜೊತೆ ನಟಿಸಿದ್ದರೂ, ಯಶಸ್ಸಿನ ಉತ್ತುಂದಲ್ಲಿ ಇರುವಾಗಲೇ ನಟನೆಯನ್ನು ತೊರೆದಳು. ಆಕೆ ಮತ್ಯಾರೂ ಅಲ್ಲ. ಮಯೂರಿ ಕಾಂಗೋ. 

38

ಯಾರಾದರೂ ಬಾಲಿವುಡ್ ತೊರೆದು ಬೇರೆ ಉದ್ಯೋಗವನ್ನು ಆರಿಸಿಕೊಳ್ಳುತ್ತಾರೆ ಎಂದು ಸಾಮಾನ್ಯ ಜನರು ಊಹಿಸಲೂ ಸಾಧ್ಯವಿಲ್ಲ. ಒಂದು ಕಾಲದಲ್ಲಿ ಯಶಸ್ವಿ ನಟಿಯಾಗಿದ್ದ ಮಯೂರಿ ಕಂಗೊ ಗ್ಲಾಮರ್ ಪ್ರಪಂಚದಿಂದ ದೂರ ಸರಿದು ಗೂಗಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು.

48

'ಪಾಪಾ ಕೆಹ್ತೆ ಹೈ' ಮತ್ತು ಹಿಟ್ ಹಾಡು 'ಘರ್ ಸೆ ನಿಕಲ್ತೇ ಹೈ' ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಮಯೂರಿ ಹಿಂದಿ ಚಲನಚಿತ್ರೋದ್ಯಮದ ಉದಯೋನ್ಮುಖ ತಾರೆಯಾಗಿದ್ದರು. 

58

2000ದಲ್ಲಿ ವಂಶಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಮಯೂರಿ ಕಾಂಗೋ ನರ್ಗೀಸ್, ಥೋಡ ಘಮ್ ಥೋಡಿ ಖುಷಿ, ಡಾಲರ್ ಬಾಬು ಮತ್ತು ಕಿಟ್ಟಿ ಪಾರ್ಟಿಯಂತಹ ದೂರದರ್ಶನ ಕಾರ್ಯಕ್ರಮಗಳನ್ನು ಸಹ ಮಾಡಿದ್ದಾರೆ.

68

2003ರಲ್ಲಿ, ಮಯೂರಿ ಗ್ಲಿಟ್ಜ್ ಮತ್ತು ಗ್ಲಾಮರ್ ಜೀವನದಿಂದ ಹೊರನಡೆದು ತನ್ನ ಪತಿಯೊಂದಿಗೆ ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ಅವರು ಬರೂಚ್ ಕಾಲೇಜ್ ಜಿಕ್ಲಿನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಮಾರ್ಕೆಟಿಂಗ್ ಮತ್ತು ಫೈನಾನ್ಸ್‌ನಲ್ಲಿ MBA ಮಾಡಿದರು. 2004 ಮತ್ತು 2012 ರ ನಡುವೆ ಅಮೆರಿಕಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 

78

ವರದಿಗಳ ಪ್ರಕಾರ, ಅವರು IIT ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ನಂತರ IIT ಕಾನ್ಪುರದಲ್ಲಿ ಆಯ್ಕೆಯಾದರು. ಆದರೆ ಚಲನಚಿತ್ರೋದ್ಯಮದಲ್ಲಿ ಮುಂದುವರಿಸಲು ಬಯಸಿದ್ದ ಕಾರಣ, ಪ್ರವೇಶಾತಿ ಮಾಡಿಕೊಳ್ಳಲ್ಲಿಲ್ಲ. 2013ರಲ್ಲಿ ಭಾರತಕ್ಕೆ ಹಿಂತಿರುಗಿದರು

88

ಭಾರತಕ್ಕೆ ಹಿಂತಿರುಗಿದ ಬಳಿಕ ಪರ್ಫಾರ್ಮಿಕ್ಸ್ ಎಂಬ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿಕೊಂಡರು. ನಂತರ ಅವರು ಗೂಗಲ್ ಇಂಡಿಯಾವನ್ನು ಸೇರಲು ಹೋದರು. 2019ರಲ್ಲಿ ಇಂಡಸ್ಟ್ರಿ ಹೆಡ್ ಆದರು. ಅವರು 2019ರಿಂದ ಗೂಗಲ್ ಇಂಡಿಯಾದಲ್ಲಿ ಇಂಡಸ್ಟ್ರಿ-ಏಜೆನ್ಸಿ ಪಾಲುದಾರಿಕೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Read more Photos on
click me!

Recommended Stories