ಗರ್ಭಾವಸ್ಥೆಯಲ್ಲಿ ಹಸಿವು ಆಗೋಲ್ವಾ? ಏನು ಮಾಡಬಹುದು?

First Published Jun 14, 2023, 5:48 PM IST

ಗರ್ಭಾವಸ್ಥೆಯಲ್ಲಿ ನಿಮ್ಮ ಹಸಿವು ಕಡಿಮೆಯಾಗಿದ್ದರೆ, ಅದು ಮಗುವಿನಲ್ಲಿ ಅಪೌಷ್ಟಿಕತೆಗೆ ಕಾರಣವಾಗಬಹುದು. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ನಿಮಗೆ ಈ ಬಗ್ಗೆ ಯೋಚನೆ ಇದ್ರೆ ಮುಂದೆ ಓದಿ… 
 

ಗರ್ಭಾವಸ್ಥೆಯಲ್ಲಿ ಹಸಿವಾಗದಿರುವುದು
ಗರ್ಭಾವಸ್ಥೆಯಲ್ಲಿ (pregnancy) ಹಸಿವಾಗದಿರುವುದು ಸಾಮಾನ್ಯ. ಈ ಸಮಯದಲ್ಲಿ, ಮಹಿಳೆಯರು ವಾಕರಿಕೆ, ಆಹಾರದ ನಿರಾಸಕ್ತಿ ಮತ್ತು ಇತರ ಅನೇಕ ಸಮಸ್ಯೆ ಹೊಂದಿರಬಹುದು, ಇದರಿಂದಾಗಿ ಅವರು ಕಡಿಮೆ ತಿನ್ನುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಪೌಷ್ಠಿಕಾಂಶ ಪಡೆಯಲು ಏನು ಮಾಡಬೇಕು?

ಕಡಿಮೆ ಸಮಯದಲ್ಲಿ ಕಡಿಮೆ ತಿನ್ನಿ (split your food)
ದಿನದಲ್ಲಿ ಮೂರು ಬಾರಿ ತುಂಬಾ ಊಟ ಮಾಡಬೇಡಿ. ಬದಲಾಗಿ ನಾಲ್ಕರಿಂದ ಐದು ಬಾರಿ ಸ್ವಲ್ಪ ಸ್ವಲ್ಪ ಊಟ ಮಾಡಿ. ಆಹಾರವನ್ನು ನಿಯಮಿತ ಅಂತರದಲ್ಲಿ ತಿನ್ನಿ. ಈ ರೀತಿಯಾಗಿ, ಆಹಾರ ಸೇವಿಸೋದರಿಂದ ಸರಿಯಾಗಿ ಆಹಾರ ಜೀರ್ಣವಾಗುತ್ತೆ. 

ಆರೋಗ್ಯಕರ ಆಯ್ಕೆ ಇರಲಿ (healthy food)
ಹಗಲಿನಲ್ಲಿ ನಿಮಗೆ ಹಸಿವಾದಾಗಲೆಲ್ಲಾ, ಬಾಳೆಹಣ್ಣು, ಮೊಸರು ಅಥವಾ ಸ್ಮೂಥಿಗಳು ಮತ್ತು ಧಾನ್ಯಗಳ ಸಲಾಡ್ ನಂತಹ ಆರೋಗ್ಯಕರ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸಿ. ಇದರಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರಬಹುದು. 

ಹೈಡ್ರೇಟ್ ಆಗಿರಿ (Hydrate)
ನಿಮ್ಮನ್ನು ಹೈಡ್ರೇಟ್ ಆಗಿಡಲು ಸಾಕಷ್ಟು ನೀರು ಮತ್ತು ಇತರ ದ್ರವಗಳನ್ನು ಕುಡಿಯಿರಿ. ಮನೆಯಲ್ಲಿ ತಯಾರಿಸಿದ ನಿಂಬೆರಸ, ಸ್ಮೂಥಿಗಳು ಮತ್ತು ತರಕಾರಿ ಜ್ಯೂಸ್ ಗಳನ್ನು ಕುಡಿಯಿರಿ. ಎಳನೀರು, ಮಜ್ಜಿಗೆ ಮತ್ತು ನೀರನ್ನು ಕುಡಿಯೋದು ಸಹ ತುಂಬಾನೆ ಉತ್ತಮ.

ಬಲವಾದ ವಾಸನೆ ಇರುವ ಆಹಾರಗಳಿಂದ ದೂರವಿರಿ
ಆಹಾರದ ವಾಸನೆಯನ್ನು (strong smell of food) ಸಹಿಸಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ಆ ಆಹಾರದಿಂದ ದೂರವಿರಿ. ಗರ್ಭಾವಸ್ಥೆಯಲ್ಲಿ, ಇದನ್ನು ಫುಡ್ ಎವರ್ಜನ್ ಎಂದು ಕರೆಯಲಾಗುತ್ತದೆ. ಇದರಿಂದ ವಾಂತಿ ಆಗುವ ಅಪಾಯ ಕೂಡ ಇದೆ. ಹಾಗಾಗಿ ಅದನ್ನ ಅವಾಯ್ಡ್ ಮಾಡಿ. 

ಅಪೌಷ್ಟಿಕತೆ (Malnutrition) 
ಇದು ಸಮಯದವರೆಗೆ ನಿಮಗೆ ಹಸಿವಾಗದೇ ಇರೋದು ಅಪೌಷ್ಟಿಕತೆಗೆ ಕಾರಣವಾಗಬಹುದು, ಇದು ಕಳಪೆ ಭ್ರೂಣದ ಬೆಳವಣಿಗೆ, ಕಡಿಮೆ ಜನನ ತೂಕ ಮತ್ತು ಅಕಾಲಿಕ ಹೆರಿಗೆಯ ಅಪಾಯಕ್ಕೆ ಕಾರಣವಾಗಬಹುದು. ಈ ಬಗ್ಗೆ ಎಚ್ಚರವಿರಲಿ.

ಪ್ರಿನೆಟಲ್ ಜೀವಸತ್ವಗಳನ್ನು ತೆಗೆದುಕೊಳ್ಳಿ (prenatal vitamins)
ಪ್ರಸವಪೂರ್ವ ಜೀವಸತ್ವಗಳನ್ನು ಪ್ರತಿದಿನ ತೆಗೆದುಕೊಳ್ಳಿ. ನಿಮ್ಮ ದೇಹದಲ್ಲಿ ಯಾವುದೇ ವಿಟಮಿನ್ ಕೊರತೆಯಿದ್ದರೆ, ಪೂರಕಗಳ ಸೇವನೆ ತುಂಬಾನೆ ಇಂಪಾರ್ಟಂಟ್. ಇದು ಮಗುವಿಗೆ ಬೇಕಾದ ಪೋಷಕ ಅಂಶಗಳನ್ನು ನೀಡಲು ನೆರವಾಗುತ್ತೆ. 

click me!