ಹೂವಿನಲ್ಲಿ ಬಗೆಬಗೆಯ ಮಾಲೆ, ವಿಶಿಷ್ಟ ಕಲೆ ಕರಗತ ಮಾಡಿಕೊಂಡ ಮಹಿಳೆಗೆ ಊರವರ ಶಹಬ್ಬಾಸ್‌

First Published | Jun 6, 2023, 12:49 PM IST

ಪ್ರಾಕೃತಿಕ ಹೂವುಗಳನ್ನು ಬಳಸಿಕೊಂಡು ಅಪರೂಪದ ಮಾಲೆಗಳನ್ನು ತಯಾರಿಸುವುದು ಕೂಡ ಒಂದು ಕಲೆ. ಕೆಲವರು ಸ್ವಂತ ಬಳಕೆಗೆ ಹೂಮಾಲೆ ಕಟ್ಟಿದರೆ, ಇನ್ನು ಅನೇಕರು ದೇವರ ಅರ್ಪಣೆಗೆ ಬಗೆ ಬಗೆಯ ಹೂಮಾಲೆ ಕಟ್ಟುತ್ತಾರೆ. ಅದರಲ್ಲೂ ಉಡುಪಿಯ   ವಿಶಾಲ ಮಹೇಶ್ ಎಂಬವರು ಹೂಕಟ್ಟುವ ವಿಶಿಷ್ಟ ಕಲೆ ಕರಗತ ಮಾಡಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅನೇಕರು ದೇವರ ಅರ್ಪಣೆಗೆ ಬಗೆ ಬಗೆಯ ಹೂಮಾಲೆ ಕಟ್ಟುತ್ತಾರೆ. ಆದರೆ ಎಲ್ಲರಿಗೆ ಅದನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಲು ಬರುವುದಿಲ್ಲ. ಆದರೆ ಉಡುಪಿಯ  ವಿಶಾಲ ಮಹೇಶ್ ಎಂಬವರು ಹೂಕಟ್ಟುವ ವಿಶಿಷ್ಟ ಕಲೆ ಕರಗತ ಮಾಡಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾವಿರಾರು ವರ್ಷಗಳ ಇತಿಹಾಸ ಇರುವ ಉಡುಪಿಯ ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿಅಮ್ಮನವರ ದೇವಸ್ಥಾನದಲ್ಲಿ  ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀ ಮಾಸ್ತಿದುರ್ಗಾ ಚಿಣ್ಣರ ಬಳಗ ಎನ್ನುವ ಚಿಕ್ಕ ಮಕ್ಕಳ ಭಜನಾ ತಂಡ ಕಾರ್ಯಾಚರಿಸುತ್ತಿದೆ.  

Tap to resize

ಕಳೆದ ನಾಲ್ಕು ವರ್ಷಗಳಿಂದ ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗ ಎನ್ನುವ ಮಹಿಳೆಯರ ಭಜನಾ ತಂಡ ಸಕ್ರಿಯವಾಗಿ ದೇವರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. 

ಈ ಮಹಿಳಾ ಭಜನಾ ಬಳಗದ ಅಧ್ಯಕ್ಷರಾದ ವಿಶಾಲ ಮಹೇಶ್ ಇವರು ಪ್ರತಿದಿನವೂ ವಿವಿಧ ಹೂವಿನ ಮಾಲೆ ತಯಾರಿಸಿ ಗಮನಸೆಳೆಯುತ್ತಾರೆ. ಮೊಗ್ಗಿನ ಸರ, ವೀಳ್ಯದೆಲೆ, ತುಳಸಿ, ಬಿಲ್ವಪತ್ರೆ, ಗರಿಕೆ ಮಾಲೆಗಳನ್ನು ರಚಿಸಿ ದೇವಸ್ಥಾನಕ್ಕೆ ಉಚಿತವಾಗಿ ನೀಡುತ್ತಿದ್ದಾರೆ. 

ತನ್ನ ಹತ್ತನೇ ವಯಸ್ಸಿನಿಂದಲೇ ಹಿರಿಯರಿಂದ ಹೂವು ಕಟ್ಟುವ ಕಲೆಯನ್ನು ಕಲಿತು, ಈಗ ಎಲ್ಲಾ ಜಾತಿಯ ಪುಷ್ಪಗಳನ್ನು, ಪತ್ರೆಯ ಮಾಲೆಗಳನ್ನು ರಚಿಸುವಂತವರಾಗಿದ್ದಾರೆ.

ಈ ವರ್ಷ ಹನೆಹಳ್ಳಿ ಗ್ರಾಮ ಪಂಚಾಯತಿನವರು ಮತದಾನವನ್ನು ಉತ್ತೇಜಿಸುವ ಸಲುವಾಗಿ ರಂಗವಲ್ಲಿ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇವರು ಉತ್ತಮವಾದ ಮತದಾನದ ರಂಗವಲ್ಲಿಯನ್ನು ಬಿಡಿಸಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. 

ಹಾಗೆಯೇ ಈ ವರ್ಷ ಹನೆಹಳ್ಳಿ ಮತಗಟ್ಟೆಯನ್ನು ಸಖಿ ಮತಗಟ್ಟೆ ಎಂದು ಚುನಾವಣ ಆಯೋಗ ಘೋಷಿಸಿರುವುದರಿಂದ ಅಲ್ಲಿ ವಿಶಾಲ  ಮತದಾನದ ವಿಶೇಷ ರಂಗವಲ್ಲಿ ರಚಿಸಿ ಮತದಾನಕ್ಕೆ ಆಗಮಿಸಿದ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ. 

ಇವರು ಕೂರಾಡಿ ಲಕ್ಷ್ಮೀ -ಬಸವ ಪೂಜಾರಿ ಇವರ ಸುಪುತ್ರಿಯಾಗಿದ್ದು, ಪತಿ ಮಹೇಶ್ ಹಾಗೂ ಪುತ್ರಿ ಮಾನ್ವಿಯೊಂದಿಗೆ ಮಾಸ್ತಿನಗರದಲ್ಲಿ ವಾಸವಾಗಿದ್ದಾರೆ. 
ಅತ್ತ್ಯುತ್ತಮವಾಗಿ ಭಜನೆಯನ್ನೂ ಹಾಡುತ್ತಾರೆ.

ಇವರ ಹೂವಿನ, ಮೊಗ್ಗಿನ, ಪತ್ರೆಯ ಮಾಲೆ ಅಲ್ಲದೇ ರಂಗವಲ್ಲಿ ಕಲೆಯನ್ನು ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಭಟ್ ಹಾಗೂ ದೇವಸ್ಥಾನದ ಎಲ್ಲಾ ಭಕ್ತರು ಮುಕ್ತ ಕಂಠದಿಂದ ಶ್ಲಾಘಿಸುತ್ತಾರೆ. 

ಕೈಯಲ್ಲೇ ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡಿರುವ ವಿಶಾಲ ಮಹೇಶ್ ಇವರಿಗೆ ಹೆಚ್ಚಿನ ಪ್ರಶಸ್ತಿ, ಪುರಸ್ಕಾರಗಳು ದೊರಕಲಿ ಎಂದು ಊರವರು ಹಾರೈಸಿದ್ದಾರೆ.

Latest Videos

click me!