ಆಲ್ಕೋಹಾಲ್ (alcohol) ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅಂತಹ ಪರಿಸ್ಥಿತಿಯಲ್ಲಿ, ಕೆಲವರು ವೈನ್ ಕುಡಿಯಲು ಪ್ರಾರಂಭಿಸುತ್ತಾರೆ. ಯಾಕಂದ್ರೆ ವೈನ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುತ್ತೆ . ಇದನ್ನ ಕುಡಿಯೋದ್ರಿಂದ ಆರೋಗ್ಯ ಚೆನ್ನಾಗಿರುತ್ತೆ ಎಂದು ಹೇಳಲಾಗುತ್ತೆ. ಆದರೆ ನಿರ್ದಿಷ್ಟವಾಗಿ, ರೆಡ್ ವೈನ್ ಸೇವನೆಯ ಬಗ್ಗೆ ವಿವಿಧ ವಾದಗಳಿವೆ, ಮಿತವಾಗಿ ಅದರ ಸೇವನೆಯು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಗುಣಲಕ್ಷಣಗಳನ್ನು ಹೊಂದಿರುತ್ತದೆ.
ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಸಹ ವೈನ್ (drink wine) ಸೇವಿಸಲು ಪ್ರಾರಂಭಿಸಿದ್ದಾರೆ . ಇದು ಅವರ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಮಹಿಳೆಯರು ಹೆಚ್ಚು ವೈನ್ ಸೇವಿಸಿದರೆ, ಅದು ದೇಹದಲ್ಲಿನ ಹಾರ್ಮೋನುಗಳ ಸಮತೋಲನವನ್ನು ತೊಂದರೆಗೊಳಿಸುತ್ತೆ, ಇದು ಭವಿಷ್ಯದಲ್ಲಿ ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ದೇಹದಲ್ಲಿನ ಹಾರ್ಮೋನುಗಳ ಸಮತೋಲನದಿಂದಾಗಿ ಅನಿಯಮಿತ ಋತುಚಕ್ರ, ಈ ಸಮಯದಲ್ಲಿ ತೀವ್ರ ನೋವು ಮತ್ತು ಸೆಳೆತ, ಪಿಸಿಒಎಸ್, ಗರ್ಭಾವಸ್ಥೆಯಲ್ಲಿ ತೊಂದರೆ, ಥೈರಾಯ್ಡ್ ಮತ್ತು ಮೂಡ್ ಸ್ವಿಂಗ್ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ವೈನ್ ಕುಡಿಯುವುದರಿಂದ ಮಹಿಳೆಯರಲ್ಲಿ ಹಾರ್ಮೋನುಗಳ ಸಮತೋಲನದ (hormone balance) ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಮಹಿಳೆಯರು ವೈನ್ ಏಕೆ ಸೇವಿಸಬಾರದು ಅನ್ನೋದ್ರ ಬಗ್ಗೆ ಡೀಟೈಲ್ ಆಗಿ ತಿಳಿಯೋಣ.
ಮಹಿಳೆಯರು ವೈನ್ ಏಕೆ ಕುಡಿಯಬಾರದು: ವೈನ್ ಕುಡಿಯುವುದರಿಂದ ಈಸ್ಟ್ರೊಜೆನ್ (estrogen) ಮಟ್ಟ ಹೆಚ್ಚುತ್ತೆ: ಇದು ಅನಿಯಮಿತ ಋತುಚಕ್ರ ಮತ್ತು ಅದರ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಇದು ಅವರ ತೂಕದ ಮೇಲೂ ಪರಿಣಾಮ ಬೀರಬಹುದು.
ಪ್ರೊಜೆಸ್ಟರಾನ್ ಕಡಿಮೆಯಾಗುತ್ತದೆ: ಮಹಿಳೆಯರಲ್ಲಿ ಈ ಹಾರ್ಮೋನ್ ಮಟ್ಟವು ಕಡಿಮೆಯಿದ್ದರೆ, ಅದು ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗರ್ಭಧರಿಸಲು (problem in getting pregnancy) ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.
ಥೈರಾಯ್ಡ್ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ (effect on thyroid): ಥೈರಾಯ್ಡ್ ಗ್ರಂಥಿ ಟಿ 3 ಮತ್ತು ಟಿ 4 ಹಾರ್ಮೋನುಗಳನ್ನು ಉಂಟು ಮಾಡುತ್ತದೆ, ಇದು ಚಯಾಪಚಯವನ್ನು ಆರೋಗ್ಯಕರವಾಗಿಡಲು ಬಹಳ ಮುಖ್ಯ. ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಚಯಾಪಚಯವು ಬಹಳ ಮುಖ್ಯ. ಇದು ಖಿನ್ನತೆ ಮತ್ತು ಆಯಾಸದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
ಪ್ರೊಲ್ಯಾಕ್ಟಿನ್ ಹೆಚ್ಚುತ್ತೆ : ದೇಹದಲ್ಲಿ ಈ ಹಾರ್ಮೋನಿನ ಹೆಚ್ಚಿನ ಮಟ್ಟವು ಅನಿಯಮಿತ ಋತುಚಕ್ರ, ಯೋನಿ ಶುಷ್ಕತೆಗಳಿಗೆ ಕಾರಣವಾಗಬಹುದು.
ಉರಿಯೂತವನ್ನು ಹೆಚ್ಚಿಸುತ್ತದೆ: ವೈನ್ ಸ್ವಭಾವದಲ್ಲಿ ಆಮ್ಲೀಯವಾಗಿದೆ, ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದು ಹಾರ್ಮೋನುಗಳ ಸಮತೋಲನವನ್ನು ಹಾಳು ಮಾಡುತ್ತೆ.
ನೀವು ಸಹ ವೈನ್ ಕುಡಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ.
1. ಮಿತವಾಗಿ ಮಾತ್ರ ಕುಡಿಯಿರಿ. ತಿಂಗಳಿಗೊಮ್ಮೆ ಒಂದು ಸಣ್ಣ ಕಪ್ ಸೇವಿಸಬಹುದು.
2. ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ, ಏಕೆಂದರೆ ಆಲ್ಕೋಹಾಲ್ ಆಮ್ಲೀಯವಾಗಿದೆ.
3. ವೈನ್ ಕುಡಿದ ನಂತರ ಸಾಕಷ್ಟು ನೀರು ಕುಡಿಯಿರಿ. 2-3 ಲೋಟ ಕುಡಿಯಿರಿ.
4. ವೈನ್ ಕುಡಿಯುವಾಗ, ಪ್ರೋಟೀನ್ ಭರಿತ ತಿಂಡಿಗಳನ್ನು ಅದರೊಂದಿಗೆ ತೆಗೆದುಕೊಳ್ಳಿ.
5. ಮರುದಿನ ಬೆಳಿಗ್ಗೆ ಡಿಟಾಕ್ಸ್ ಡ್ರಿಂಕ್ ಕುಡಿಯಿರಿ.