ಗರ್ಭಧಾರಣೆ ಸಮಯದಲ್ಲಿ ಯಾವೆಲ್ಲಾ ಸೋಂಕು ಕಾಡಬಹುದು?
ಯೋನಿ ಸೋಂಕುಗಳು, ಯೀಸ್ಟ್ ಸೋಂಕುಗಳು (yeast infection) ಅಥವಾ ಯೋನಿಯಲ್ಲಿ ಕ್ಯಾಂಡಿಡಿಯಾಸಿಸ್, ಮೂತ್ರದ ಸೋಂಕುಗಳು, ಇನ್ಫ್ಲುಯೆನ್ಸ, ಮಲೇರಿಯಾ ಮತ್ತು ಜಿಕಾ ಗರ್ಭಿಣಿಯರಿಗೆ ಸಂಭವಿಸಬಹುದಾದ ಕೆಲವು ಸೋಂಕುಗಳಾಗಿವೆ. ಇದಲ್ಲದೆ, ರುಬೆಲ್ಲಾ, ಸೈಟೊಮೆಗಲೋವೈರಸ್, ಟಾಕ್ಸೊಪ್ಲಾಸ್ಮೋಸಿಸ್ ಮತ್ತು ಹರ್ಪಿಸ್ನಂತಹ ಸೋಂಕುಗಳು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಯಾವುದೇ ರೀತಿಯ ಸೋಂಕನ್ನು ಮುಂಚಿತವಾಗಿ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಮಹಿಳೆಯರು ನಿಯಮಿತವಾಗಿ ಪ್ರಸವಪೂರ್ವ ತಪಾಸಣೆ ಮಾಡಿಸೋದು ಬಹಳ ಮುಖ್ಯ.