ಇತಿಹಾಸದಲ್ಲಿ ಇದೇ ಮೊದಲು ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಇಬ್ಬರು ಟ್ರಾನ್ಸ್‌ಜೆಂಡರ್‌ ಗಳು!

Published : Oct 15, 2023, 06:40 PM IST

ಮುಂಬರುವ 72ನೇ ವಿಶ್ವ ಸುಂದರಿ ಸ್ಪರ್ಧೆಯು 2023 ರಲ್ಲಿ ನಡೆಯಲಿದ್ದು, ಈ ಬಾರಿ ಐತಿಹಾಸಿಕ ಕ್ಷಣವಾಗಿದೆ ಏಕೆಂದರೆ ಇಬ್ಬರು ಟ್ರಾನ್ಸ್‌ಜೆಂಡರ್‌  ಸ್ಪರ್ಧಿಗಳಾದ ಮಿಸ್ ಪೋರ್ಚುಗಲ್‌ನ ಮರೀನಾ ಮ್ಯಾಚೆಟ್ ಮತ್ತು ಮಿಸ್ ನೆದರ್‌ಲ್ಯಾಂಡ್‌ನ ರಿಕ್ಕಿ ಕೊಲ್ಲೆ ಅವರು ಅಸ್ಕರ್ ಕಿರೀಟಕ್ಕಾಗಿ ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದ್ದಾರೆ.

PREV
110
ಇತಿಹಾಸದಲ್ಲಿ ಇದೇ ಮೊದಲು ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಇಬ್ಬರು ಟ್ರಾನ್ಸ್‌ಜೆಂಡರ್‌ ಗಳು!
ಮರೀನಾ ಮ್ಯಾಚೆಟ್

ಮ್ಯಾಚೆಟ್ ಅಥವಾ ಕೊಲ್ಲೆ ಗೆದ್ದರೆ, ಅವರು ಮಿಸ್ ಯೂನಿವರ್ಸ್ ಕಿರೀಟವನ್ನು ಧರಿಸಿದ ಮೊದಲ ಟ್ರಾನ್ಸ್ ವುಮನ್ ಆಗುವ ಮೂಲಕ ಇತಿಹಾಸವನ್ನು ನಿರ್ಮಿಸಲಿದ್ದಾರೆ.

210

ಮರೀನಾ ಮ್ಯಾಚೆಟ್ ಅವರು ಟ್ರಾನ್ಸ್‌ಜೆಂಡರ್‌  ಆಗಿ ಎದುರಿಸಿದ ಸವಾಲುಗಳನ್ನು ಬಹಿರಂಗವಾಗಿ ಚರ್ಚಿಸಿದ್ದಾರೆ ಮತ್ತು ಅವರ ಕುಟುಂಬದ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

310

ಪೋರ್ಚುಗೀಸ್ ಸ್ಪರ್ಧೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಟ್ರಾನ್ಸ್ ಮಹಿಳೆಯಾಗಿ ತನ್ನ ಪ್ರಯಾಣದಲ್ಲಿ ಕಮ್ಯುನಿಟಿ ಬಗೆಗಿನ ಅಜ್ಞಾನದ ಮೇಲೆ ಪ್ರೀತಿಯು ಜಯಗಳಿಸಿದೆ ಎಂದು ಹೇಳಿದ್ದಾರೆ.

410

ಮರೀನಾ ಮ್ಯಾಚೆಟ್ ಮತ್ತು ರಿಕ್ಕಿ ವ್ಯಾಲೆರಿ ಕೊಲ್ಲೆ ಇಬ್ಬರಿಗೂ ಮುನ್ನ ಸ್ಪೇನ್‌ನ ಏಂಜೆಲಾ ಪೊನ್ಸ್  2018 ರಲ್ಲಿ ಜಾಗತಿಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಮೊದಲ ಟ್ರಾನ್ಸ್ ಮಹಿಳೆಯಾಗಿದ್ದಾರೆ. ಮಿಸ್ ಯೂನಿವರ್ಸ್ ಫೈನಲ್‌ಗೆ ಅವರು ಆಯ್ಕೆಯಾಗದಿದ್ದರೂ ಏಂಜೆಲಾ ಪೊನ್ಸ್ ಪ್ರಪಂಚದಾದ್ಯಂತದ ಜನರ ಹೃದಯವನ್ನು ಗೆದ್ದರು. ಮತ್ತು ಪ್ರಸಿದ್ಧ ಸ್ಪರ್ಧೆಯಲ್ಲಿ ಇತರ ಟ್ರಾನ್ಸ್ ಮಹಿಳೆಯರಿಗೆ ಬುನಾದಿ ಹಾಕಿಕೊಟ್ಟರು.

510
ರಿಕ್ಕಿ ಕೊಲ್ಲೆ

ರಿಕ್ಕಿ ಕೊಲ್ಲೆ, ಮಿಸ್ ನೆದರ್ಲ್ಯಾಂಡ್ಸ್ ಆಗುವ ಮೊದಲು, ಟ್ರಾನ್ಸ್ಜೆಂಡರ್ ವ್ಯಕ್ತಿಯಾಗಿ ತನ್ನ ವೈಯಕ್ತಿಕ ಹೋರಾಟಗಳನ್ನು ಹಂಚಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ ಬಗ್ಗೆ ಕೇಳಿದಾಗ ಆಕೆ ತನ್ನನ್ನು ವಿವರಿಸಲು "ವಿಜಯ" ಎಂಬ ಪದ ಬಳಸಿದ್ದಾರೆ.

610

ಚಿಕ್ಕ ಹುಡುಗನಾಗಿದ್ದಾಗ ಸವಾಲುಗಳನ್ನು ಜಯಿಸುವ ಮೂಲಕ ಬಲವಾದ, ಸಬಲೀಕರಣ ಮತ್ತು ಆತ್ಮವಿಶ್ವಾಸದ ಟ್ರಾನ್ಸ್ ಮಹಿಳೆಯಾಗುವವರೆಗಿನ ತನ್ನ ಪ್ರಯಾಣವನ್ನು ವಿವರಿಸಿದರು.  ರಿಕ್ಕಿ ಕೊಲ್ಲೆ ಅವರ ಸಂದೇಶವು ಏಕತೆ ಮತ್ತು ಸ್ವಯಂ-ಸಬಲೀಕರಣವಾಗಿದೆ. ಇತರರು ತಮ್ಮ ಕನಸುಗಳನ್ನು ಬಿಟ್ಟುಕೊಡದಂತೆ ಮತ್ತು ತಮ್ಮನ್ನು ತಾವು ಉತ್ತಮ ಆವೃತ್ತಿಯಾಗಲು ಶ್ರಮಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. 

710

ಮಿಸ್ ಯೂನಿವರ್ಸ್ ಆರ್ಗನೈಸೇಶನ್ ತನ್ನ ನಿಯಮಗಳನ್ನು 2012 ರಲ್ಲಿ  ಮಾರ್ಪಡಿಸಿತು, ಟ್ರಾನ್ಸ್ ಸ್ಪರ್ಧಿಗಳು ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು.  ವೈವಿಧ್ಯತೆಯನ್ನು ಉತ್ತೇಜಿತು. ವರ್ಷದಿಂದ ವರ್ಷಕ್ಕೆ ಸಂಸ್ಥೆಯು ವಿಕಸನಗೊಳ್ಳುವುದನ್ನು ಮುಂದುವರೆಸಿದೆ, ಮತ್ತಷ್ಟು ನಿಯಮ ಬದಲಾವಣೆಗಳನ್ನು ಮಾಡುತ್ತಿದೆ.

810

ಗಮನಾರ್ಹವಾಗಿ, ವಿಚ್ಛೇದಿತ, ಗರ್ಭಿಣಿ ಅಥವಾ ಮಕ್ಕಳನ್ನು ಹೊಂದಿರುವ ಮಹಿಳೆಯರು ಈಗ ವಿಶ್ವ ಸುಂದರಿ ಕಿರೀಟಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ, ಇದು ಈ ಹಿಂದಿನ ನಿರ್ಬಂಧಗಳಿಂದ ಗಮನಾರ್ಹವಾದ ಬದಲಾವಣೆಯನ್ನು ಸೂಚಿಸುತ್ತದೆ. 

910

ಇದಲ್ಲದೆ, 2024 ರಿಂದ  ವಯಸ್ಸಿನ ಮಿತಿ ಮಾನದಂಡಗಳನ್ನು ತೆಗೆದು ಹಾಕುವ ಯೋಜನೆಗಳಿವೆ, ಪ್ರಪಂಚದಾದ್ಯಂತದ ವಯಸ್ಕ ಮಹಿಳೆಯರಿಗೆ ಸ್ಪರ್ಧೆ ನಡೆಸುವ ಯೋಜನೆ ಕೂಡ ಇದೆ. ಇದು ಉತ್ತೇಜಿಸಲು ಮತ್ತು ವ್ಯಾಪಕ ಶ್ರೇಣಿಯ ಸ್ಪರ್ಧಿಗಳನ್ನು ಸ್ವೀಕರಿಸಲು ಸಂಸ್ಥೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.

1010

ವಿಶ್ವ ಸುಂದರಿ 2023 ಸ್ಪರ್ಧೆ 72 ನೇ ವಿಶ್ವ ಸುಂದರಿ ಸ್ಪರ್ಧೆಯಾಗಿದ್ದು, 18 ನವೆಂಬರ್ 2023 ರಂದು ಮಧ್ಯ ಅಮೆರಿಕಾದಲ್ಲಿರುವ ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ನ್ಯಾಷನಲ್ ಜಿಮ್ನಾಷಿಯಂನಲ್ಲಿ ನಡೆಯಲಿದೆ. ಈವೆಂಟ್‌ನ ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಆರ್'ಬೋನಿ ಗೇಬ್ರಿಯಲ್ ಅವರು ತಮ್ಮ ಉತ್ತರಾಧಿಕಾರಿಯಾಗಿ ಈ ಬಾರಿ ಕಿರೀಟ ಗೆದ್ದ ಸ್ಪರ್ಧಿಗೆ ತೊಡಿಸಲಿದ್ದಾರೆ. 

click me!

Recommended Stories