2023 ರ ಬಜೆಟ್‌ನಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಎಂಬ ವಿಶೇಷ ಉಳಿತಾಯ ಯೋಜನೆಯನ್ನು ಪರಿಚಯಿಸಿದ್ದಾರೆ. ಈ ಸಣ್ಣ ಉಳಿತಾಯ ಯೋಜನೆಯು ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
28
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೀಸಲಾಗಿರುವ ವಿವಿಧ ಯೋಜನೆಗಳೊಂದಿಗೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ನಡುವಿನ ಉತ್ತಮ ಆಯ್ಕೆ ಯಾವುದು ಎಂಬ ಪ್ರಶ್ನೆ ಮೂಡುತ್ತದೆ. ಈ ಹಿನ್ನೆಲೆ ಎರಡೂ ಯೋಜನೆಗಳ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ..
38
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ
• ಹೂಡಿಕೆಯ ಅವಧಿ: ಎರಡು ವರ್ಷಗಳು.
• ಹೂಡಿಕೆ ಶ್ರೇಣಿ: ಕನಿಷ್ಠ 1000 ರೂ. ನಿಂದ ಗರಿಷ್ಠ 2 ಲಕ್ಷ ರೂ.
• ಬಡ್ಡಿ ದರ: ಸರ್ಕಾರವು 7.5% ಬಡ್ಡಿಯನ್ನು ನೀಡುತ್ತದೆ, ತ್ರೈಮಾಸಿಕ ಅವಧಿಯಲ್ಲಿ ಒಮ್ಮೆ ಬಡ್ಡಿ ಹಾಕಲಾಗುತ್ತೆ
48
• ಹಿಂಪಡೆಯುವಿಕೆ: ಮೊದಲ ವರ್ಷದ ನಂತರ, ಖಾತೆದಾರರು ತಮ್ಮ ಹೂಡಿಕೆ ಮೊತ್ತದ 40% ವರೆಗೆ ಹಿಂಪಡೆಯಬಹುದು.
• ಖಾತೆ ಮುಕ್ತಾಯ: ಅಕ್ಟೋಬರ್ 2023 ರಲ್ಲಿ ತೆರೆದರೆ, ಖಾತೆಯು ಅಕ್ಟೋಬರ್ 2025 ರಲ್ಲಿ ಮೆಚ್ಯೂರ್ ಆಗುತ್ತದೆ
• ಅರ್ಹತೆ: ಯಾವುದೇ ವಯಸ್ಸಿನ ಮಹಿಳೆಯರು ಅಕೌಂಟ್ ಓಪನ್ ಮಾಡಬಹುದು
• ಅಕೌಂಟ್ ಓಪನ್ ಮಾಡೋದೇಗೆ: ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ, ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಿ, KYC ದಾಖಲೆಗಳನ್ನು (ಆಧಾರ್ ಮತ್ತು PAN) ಒದಗಿಸಿ ಮತ್ತು ನಗದು ಅಥವಾ ಚೆಕ್ ಮೂಲಕ ಹಣವನ್ನು ಠೇವಣಿ ಮಾಡಿ.
58
ಸುಕನ್ಯಾ ಸಮೃದ್ಧಿ ಯೋಜನೆ
• ಅರ್ಹತೆ: 10 ವರ್ಷ ಹಾಗೂ ಚಿಕ್ಕ ಹೆಣ್ಣು ಮಕ್ಕಳಿಗೆ ಮಾತ್ರ ಈ ಅಕೌಂಟ್
• ಬಡ್ಡಿ ದರ: ಠೇವಣಿ ಮಾಡಿದ ಮೊತ್ತದ ಮೇಲೆ 8% ಬಡ್ಡಿ.
• ಹೂಡಿಕೆಯ ಶ್ರೇಣಿ: ವಾರ್ಷಿಕವಾಗಿ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷ ರೂ.
68
• ಹೂಡಿಕೆಯ ಅವಧಿ: ಹೆಣ್ಣು ಮಗುವಿಗೆ 15 ವರ್ಷ ತುಂಬುವವರೆಗೆ ಹೂಡಿಕೆ ಮಾಡಬಹುದು.
• ಹಿಂತೆಗೆದುಕೊಳ್ಳುವಿಕೆ: 18 ರ ವಯಸ್ಸಲ್ಲಿ ಅಧ್ಯಯನಕ್ಕಾಗಿ 50% ಹಿಂಪಡೆಯುವಿಕೆ; 21 ಕ್ಕೆ, ಸಂಪೂರ್ಣ ವಾಪಸಾತಿ
• ತೆರಿಗೆ ಪ್ರಯೋಜನ: ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.50 ಲಕ್ ರೂ. ರವರೆಗೆ ವಿನಾಯಿತಿ.
• ಅಕೌಂಟ್ ಓಪನ್ ಮಾಡೋದೇಗೆ: ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಅಕೌಂಟ್ ಓಪನ್ ಮಾಡಬಹುದು.
3. ಹೂಡಿಕೆ ಗುರಿ: ನಿಮ್ಮ ಹೂಡಿಕೆ ಗುರಿ, ಅಲ್ಪಾವಧಿ ಅಥವಾ ದೀರ್ಘಾವಧಿಯ ಆಧಾರದ ಮೇಲೆ ಆಯ್ಕೆ ಮಾಡಿ.
88
MSSC ಮತ್ತು SSY ನಡುವೆ ತಿಳುವಳಿಕೆಯುಳ್ಳ ನಿರ್ಧಾರವನ್ನು ಮಾಡಲು ನಿಮ್ಮ ಹಣಕಾಸಿನ ಗುರಿಗಳು ಮತ್ತು ಆದ್ಯತೆಗಳ ಮೌಲ್ಯಮಾಪನ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.