ಬಿಳಿ ಬಟ್ಟೆಯ ಮೇಲಾದ ಅಚಾನಕ್ ಕಲೆಗಳನ್ನು ಹೀಗೆ ಹೋಗಲಾಡಿಸಿ

Published : Oct 30, 2024, 03:12 PM ISTUpdated : Oct 30, 2024, 03:19 PM IST

ಬಿಳಿ ಬಟ್ಟೆಯ ಮೇಲಾಗುವ ಅಚಾನಕ್ ಕಲೆಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ, ಇದೇ ಕಾರಣಕ್ಕೆ ಅನೇಕರು ಚಂದ ಕಂಡರು ಬಿಳಿ ಬಣ್ಣದ ಬಟ್ಟೆಗಳನ್ನು ಖರೀದಿಸಲು ಹೋಗುವುದಿಲ್ಲ. ಆದರೆ ನಿಮಗೆ ಗೊತ್ತೆ ಇದೊಂದು ಟಿಪ್ಸ್‌ನಿಂದ ಬಟ್ಟೆ ಮೇಲಾದ ಕಲೆಗಳನ್ನು ನೀವು ಸುಲಭವಾಗಿ ಹೋಗಲಾಡಿಸಬಹುದು.

PREV
14
ಬಿಳಿ ಬಟ್ಟೆಯ ಮೇಲಾದ ಅಚಾನಕ್ ಕಲೆಗಳನ್ನು ಹೀಗೆ ಹೋಗಲಾಡಿಸಿ

ಬಿಳಿ ಬಟ್ಟೆ ಮೇಲೆ ಬೇಗನೇ ಕಲೆ ಆಗುತ್ತದೆ. ಅದಕ್ಕೆ ಪರಿಹಾರ ಇಲ್ಲಿದೆ.. ಒಂದು ಚಮಚ ಬಿಳಿ ವಿನೆಗರ್, ಒಂದು ಚಮಚ ಡಿಶ್‌ವಾಶ್ ಲಿಕ್ವಿಡ್ ಮಿಕ್ಸ್ ಮಾಡಿ ಕಲೆ ಇರುವ ಜಾಗದಲ್ಲಿ 30 ನಿಮಿಷ ನೆನೆಸಿಟ್ಟರೆ ಕಲೆಗಳು ಮಾಯವಾಗುತ್ತವೆ. ಆದರೆ ಈ ವಿಧಾನಕ್ಕೆ ವಿನೆಗರ್ ಬೇಕಾಗುತ್ತದೆ. ಆದರೆ ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಕಡಿಮೆ ಖರ್ಚಿನಲ್ಲಿ ಕಲೆಗಳನ್ನು ತೆಗೆಯಬಹುದು.

24

ಲೈಫ್‌ಬಾಯ್ ಸೋಪಿನಿಂದ ಕೈಗಳನ್ನು ತೊಳೆದರೆ ಕೀಟಾಣುಗಳಿಂದ ರಕ್ಷಣೆ ಸಿಗುತ್ತದೆ ಎಂದು ಹಲವು ಜಾಹೀರಾತುಗಳಲ್ಲಿ ನೋಡಿರುತ್ತೇವೆ. ಆದರೆ ಲೈಫ್‌ಬಾಯ್ ಸೋಪ್‌ನಿಂದ ಇನ್ನೂ ಅನೇಕ  ಪ್ರಯೋಜನ ಇದೆ ಎಂಬ ವಿಚಾರ ನಿಮಗೆ ಗೊತ್ತ. ಪೂಜೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಬಟ್ಟೆಗಳ ಮೇಲೆ ಹಳದಿ ಕಲೆ ಆಗುವ ಸಾಧ್ಯತೆ ಹೆಚ್ಚು ಈ ಕಲೆಯನ್ನು ಎಷ್ಟೇ ಉಜ್ಜಿದರೂ ಬಟ್ಟೆ ಹರಿದು ಹೋಗುತ್ತದೆಯೇ ಹೊರತು ಕಲೆ ಮಾತ್ರ ಹೋಗುವುದಿಲ್ಲ.

34

ಕಲೆಗಳನ್ನು ತೆಗೆಯಲು ಹೆಚ್ಚು ಉಜ್ಜುವುದು ಬಹಳಷ್ಟು ಜನರ ಅಭ್ಯಾಸ. ಆದರೆ ಹೀಗೆ ಉಜ್ಜುವುದರಿಂದ ಬಟ್ಟೆ ಹಾಳಾಗುತ್ತದೆ. ಹಳೆಯ ಬಟ್ಟೆಗಳಂತೆ ಮಂಕಾಗುತ್ತದೆ. ಹೊಸ ಬಟ್ಟೆಗಳು ಕೂಡ ಹಳೆಯದರಂತೆ ಕಾಣುತ್ತವೆ. ಆದರೆ ಲೈಫ್‌ಬಾಯ್ ಸೋಪ್ ಬಳಸಿ ಸ್ವಚ್ಛಗೊಳಿಸಿದರೆ ಬಟ್ಟೆಗೆ ಯಾವುದೇ ಹಾನಿಯಾಗುವುದಿಲ್ಲ ಎಂಬ ವಿಚಾರ ನಿಮಗೆ ಗೊತ್ತ.

 

44

ಹಳದಿ ಕಲೆಯಿರುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿ. ಅದರ ಮೇಲೆ ಲೈಫ್‌ಬಾಯ್ ಸೋಪ್ ಹಚ್ಚಿ ಚೆನ್ನಾಗಿ ಉಜ್ಜಿ. ಹೀಗೆ ಮಾಡುವುದರಿಂದ ಬಿಳಿ ಬಟ್ಟೆ ಕೆಂಪಗಾಗುತ್ತದೆ. ಹಾಗಾಗಿ ಭಯಪಡಬೇಡಿ. ಅದನ್ನು ನೀರಿನಲ್ಲಿ ತೊಳೆದು ಒಣಗಿಸಿ. ಬಟ್ಟೆ ಒಣಗಿದ ನಂತರ ಹಳದಿ ಕಲೆ ಮಾಯವಾಗುತ್ತದೆ. ಸೋಪಿನ ಕೆಂಪು ಬಣ್ಣವೂ ಕಾಣಿಸುವುದಿಲ್ಲ. ಈ ವಿಧಾನದಲ್ಲಿ ಮಕ್ಕಳ ಮಲದ ಕಲೆಗಳನ್ನು ತೆಗೆಯಬಹುದು. ಹಳದಿ ಕಲೆ ಇರುವುದಿಲ್ಲ.

click me!

Recommended Stories