ಮನೆಯಲ್ಲಿ ಅಡುಗೆ ಮನೆ, ಬಾತ್ರೂಮ್ ಸ್ವಚ್ಛ ಮಾಡೋದು ಕಷ್ಟ. ಬಾತ್ರೂಮ್ ಸ್ವಚ್ಛತೆಗೆ ಮಾರ್ಕೆಟ್ ನಲ್ಲಿ ರಾಸಾಯನಿಕಗಳು ಸಿಗುತ್ತವೆ. ಆದ್ರೆ ಇವುಗಳಿಂದ ಆರೋಗ್ಯಕ್ಕೆ ಹಾನಿ, ಪರಿಸರಕ್ಕೂ ಹಾನಿ. ಹಾಗಾಗಿ ರಾಸಾಯನಿಕಗಳಿಲ್ಲದೆ ಟೈಲ್ಸ್ ಸ್ವಚ್ಛ ಮಾಡೋದು ಹೇಗೆ ಅಂತ ತಿಳ್ಕೊಳ್ಳೋಣ.
ವಿನೆಗರ್, ಬೇಕಿಂಗ್ ಸೋಡಾ
ಎಂತಹಾ ಕಲೆಗಳನ್ನು ತೆಗೆಯಲು ವಿನೆಗರ್, ಬೇಕಿಂಗ್ ಸೋಡಾ ಪರಿಣಾಮಕಾರಿ. ವಿನೆಗರ್ ಒಂದು ನೈಸರ್ಗಿಕ ಕಲೆ ತೆಗೆಯುವ ದ್ರಾವಣ. ಇದರಲ್ಲಿ ಆಮ್ಲೀಯ ಗುಣಗಳಿವೆ. ಇವು ಬಾತ್ರೂಮ್ ಟೈಲ್ಸ್ ನಲ್ಲಿರುವ ಧೂಳು, ಮಣ್ಣು, ಸೋಪಿನ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತವೆ.
ಒಂದು ಬಾಟಲಿಯಲ್ಲಿ ವಿನೆಗರ್, ನೀರನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಟೈಲ್ಸ್ ಮೇಲೆ ಸಿಂಪಡಿಸಿ. ಸ್ವಲ್ಪ ಹೊತ್ತು ಬಿಟ್ಟು ಬ್ರಷ್ ಅಥವಾ ಸ್ಪಾಂಜ್ ನಿಂದ ಉಜ್ಜಿದರೆ ಕಲೆಗಳು ಮಾಯ. ಟೈಲ್ಸ್ ಮೇಲೆ ಸಿಂಪಡಿಸಿದ ಮೇಲೆ ಸ್ವಲ್ಪ ಹೊತ್ತು ಹಾಗೆ ಬಿಡಬೇಕು. ಹೋಗದ ಕಲೆಗಳಿಗೆ ವಿನೆಗರ್ ಸಿಂಪಡಿಸುವ ಮುಂಚೆ ಬೇಕಿಂಗ್ ಸೋಡಾ ಹಾಕಿ.