ಭಾರತದ ಟಾಪ್ 10 ಬ್ಯುಸಿನೆಸ್‌ ಮಹಿಳೆಯರು ಇವರು

First Published Aug 26, 2020, 7:20 PM IST

ವ್ಯಾಪಾರ ಜಗತ್ತಿನಲ್ಲಿ ಪುರುಷರು ಯಶಸ್ವಿಯಾಗುತ್ತಾರೆ, ಮಹಿಳೆಯರು ಹೆಚ್ಚಿನ ಯಶಸ್ಸನ್ನು ಸಾಧಿಸುವುದು ಕಷ್ಟ ಎಂಬುವುದು ಕಾಮನ್ ಅಭಿಪ್ರಾಯ. ಏಕೆಂದರೆ ಈ ಕ್ಷೇತ್ರದಲ್ಲಿ ಮಹಿಳೆ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ. ವ್ಯವಹಾರದ ವಿಷಯಗಳು ಬಹಳ ಜಟಿಲ. ಆದರೆ ವಿಶ್ವ ಮಟ್ಟದಲ್ಲಿ ಹಲವು ಮಹಿಳೆಯರು ಈ ಕಲ್ಪನೆಯೇ ತಪ್ಪೆಂದು ಸಾಬೀತುಪಡಿಸಿದ್ದಾರೆ. ಅದರಲ್ಲಿಯೂ ಭಾರತದ ಈ ಟಾಪ್‌ 10 ಬ್ಯುಸಿನೆಸ್‌ ಮಹಿಳೆಯರು ಇದನ್ನು ಸಾಧಿಸಿ ತೋರಿಸಿದ್ದಾರೆ ನೋಡಿ.

ಜಿಯಾ ಮೋದಿ -ಭಾರತದ ಪ್ರಸಿದ್ಧ ಕಾರ್ಪೊರೇಟ್ ವಕೀಲರಾಗಿರುವ ಜಿಯಾ ಮೋದಿ ವಿಶ್ವದ ಅನೇಕ ಪ್ರಸಿದ್ಧ ಕಾರ್ಪೊರೇಟ್ ಕಂಪನಿಗಳ ಕೇಸ್‌ಗಳನ್ನು ಇತ್ಯರ್ಥಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ಏರ್‌ಟೆಲ್, ಟೆಲಿನರ್ ಗ್ರೂಪ್, ಶೆನೈಡರ್ ಎಲೆಕ್ಟ್ರಿಕ್ ಆಂಡ್‌ ಎಲೆಕ್ಟ್ರಿಕ್ ಮತ್ತು ಲಾರ್ಸೆನ್ ಆಂಡ್‌ ಟರ್ಬೊಗಳ ಆಟೋಮೆಷನ್ ಬ್ಯುಸಿನೆಸ್‌ಗೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುವಲ್ಲಿಯಶಸ್ವಿಯಾಗಿದ್ದಾರೆ. ಜಿಯಾ ಮೋದಿಯ ಕಾನೂನು ಸಂಸ್ಥೆ ಭಾರತದ ಅತ್ಯಂತ ಯಶಸ್ವಿ ಕಂಪನಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತದೆ.
undefined
ಕಿರಣ್ ಮಜುಂದಾರ್ ಶಾ -ಕಿರಣ್ ಮಜುಂದಾರ್ ಶಾ ಸ್ವಯಂ ನಿರ್ಮಿತ ಬ್ಯುಸಿನೆಸ್‌ ವುಮನ್‌. ಇಂದು ಅವರು ಭಾರತದ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಫೋರ್ಬ್ಸ್ ಪಟ್ಟಿಯಲ್ಲಿ ಸಹ ಸ್ಥಾನ ಗಳಿಸಿದ್ದರು. ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಆಕಸ್ಮಿಕವಾಗಿ ಅವರು ವ್ಯವಹಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದಂತೆ. 1978ರಲ್ಲಿ ಬಯೋಕಾನ್ ಎಂಬ ಜೈವಿಕ ಔಷಧೀಯ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯು ಔಷಧೀಯ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಕಂಪನಿ.
undefined
ಸುನೀತಾ ರೆಡ್ಡಿ -ಅಪೊಲೊ ಹಾಸ್ಪೆಟಲ್‌ ಚೈನ್‌ ಸ್ಥಾಪಿಸುವಲ್ಲಿ ಸುನೀತಾ ರೆಡ್ಡಿಯದ್ದು ಪ್ರಮುಖ ಪಾತ್ರ. ಇದು ದೇಶದ ಅತಿ ದೊಡ್ಡ ಆಸ್ಪತ್ರೆ ಸರಪಳಿಯಾಗಿದ್ದು, ವೇಗವಾಗಿ ಬೆಳೆಯುತ್ತಿದ್ದು, ಹೆಚ್ಚಿನ ಆದಾಯ ಗಳಿಸುತ್ತಿದೆ. ಅಪೊಲೊ ಫಾರ್ಮಸಿ ವ್ಯವಹಾರವೂ ವೇಗವಾಗಿ ಬೆಳೆಯುತ್ತಿದೆ. ಕಂಪನಿಯು ಇತ್ತೀಚಗೆ ಫೋರ್ಟಿಸ್ ಹೆಲ್ತ್‌ಕೇರ್ ಅನ್ನು ಸ್ವಾಧೀನ ಪಡಿಸಿಕೊಂಡಿತು. ಈ ಒಪ್ಪಂದದ ರೂವಾರಿಯಾಗಿದ್ದಾರೆ ಸುನೀತಾ ರೆಡ್ಡಿ.
undefined
ಆಲಿಸ್ ಜಿ. ವೈದ್ಯನ್ -ಆಲಿಸ್ ಜಿ. ವೈದ್ಯನ್ ಜನರಲ್ ಇನ್ಷುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಜಿಐಸಿ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು. ಮಾರ್ಚ್ 2019ರಲ್ಲಿ ವರ್ಷದ ಸಿಇಒ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಫಾರ್ಚೂನ್ ಇಂಡಿಯಾದ 2019ರಲ್ಲಿ ಮೋಸ್ಟ್‌ ಪವರ್‌ಫುಲ್‌ ವುಮನ್‌ ಎಂದು ಆಯ್ಕೆ ಆಗಿದ್ದರು.
undefined
ಮಲ್ಲಿಕಾ ಶ್ರೀನಿವಾಸನ್ -ಮಲ್ಲಿಕಾ ಶ್ರೀನಿವಾಸನ್ ಟ್ರ್ಯಾಕ್ಟರ್ ಮತ್ತು ಫಾರ್ಮ್ ಸಲಕರಣೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಿ. TAFE ಅನ್ನು ವಿಶ್ವದ ಮೂರನೇ ಅತಿದೊಡ್ಡ ಕಂಪನಿಯನ್ನಾಗಿ ಮಾಡುವಲ್ಲಿ ಇವರ ಶ್ರಮವಿದೆ. ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಜಾಗತಿಕ ಮಂಡಳಿಯಲ್ಲಿದ್ದಾರೆ ಹಾಗೂ ಎಜಿಸಿಒ ಕಾರ್ಪೊರೇಷನ್ ಆಫ್ ಅಮೇರಿಕಾ ಮತ್ತು ಟಾಟಾ ಸ್ಟೀಲ್ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
undefined
ಜರಿನ್ ದಾರುವಾಲಾ -ಜರೀನ್ ದಾರುವಾಲಾ ಭಾರತದ ಪ್ರಸಿದ್ಧ ಬ್ಯಾಂಕರ್. 2018 ರಲ್ಲಿ ಬ್ಯಾಂಕರ್‌ಗಳ rankingನಲ್ಲಿ ಪ್ರಥಮ ಸ್ಥಾನ ಪಡೆದ ಜರಿನ್ 2016ರಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕಿನ ಸಿಇಒ ಆದರು. ಮೊದಲ ಎರಡು ದಶಕಗಳ ಕಾಲಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡಿದ್ದಾರೆ. ಕೇವಲ 2 ವರ್ಷಗಳಲ್ಲಿ ಐಸಿಐಸಿಐ ಬ್ಯಾಂಕ್ ಹೆಚ್ಚು ಲಾಭದಾಯಕ ಬ್ಯಾಂಕ್ ಆಗಿ ಮಾಡಿದ ಕೀರ್ತಿ ಇವರದ್ದು.
undefined
ಕಾಕು ನಖಾಟೆ -ಕಾಕು ನಖಾಟೆ ಭಾರತದ ಬ್ಯಾಂಕರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಲವು ಅಂತಾರಾಷ್ಟ್ರೀಯ ಮಟ್ಟದ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿರುವ ಇವರು ಲೀಡರ್‌ಶಿಪ್‌ನಲ್ಲಿ ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ಭಾರತದಲ್ಲಿ ಮಾತ್ರವಲ್ಲ, ಇಡೀ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರಬಲವಾಗಿದೆ. ಇನ್ಫ್ರಾಟೆಲ್, ಸಿಂಧೂ ಮತ್ತು ಐಡಿಯಾ ಸೆಲ್ಯುಲಾರ್‌ನ ಸಿಂಧೂ ಟವರ್ಸ್‌ನಲ್ಲಿ ಬಹು ಲಾಭದಾಯಕ ವಿಲೀನದಲ್ಲಿ ಕಾಕು ನಖಾಟೆ ದೊಡ್ಡ ಪಾತ್ರ ವಹಿಸಿದ್ದಾರೆ.
undefined
ಶೋಭನಾ ಭಾರ್ತಿಯಾ -ಶೋಭನಾ ಭಾರ್ತಿಯಾ ಎಂಬುದು ಭಾರತೀಯ ಮೀಡಿಯಾ ಜಗತ್ತಿನಲ್ಲಿ ಫೇಮಸ್‌ಹೆಸರು. ಹಿಂದೂಸ್ತಾನ್ ಟೈಮ್ಸ್ ಸಂಪಾದಕೀಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಹಿಂದೂಸ್ತಾನ್ ಟೈಮ್ಸ್ ಗ್ರೂಪ್‌ನ ಹಲವಾರು ಹಿಂದಿ ಮಾಧ್ಯಮಗಳನ್ನು ಪ್ರಾರಂಭಿಸಿದರು. ಅವರ ನಾಯಕತ್ವದಲ್ಲಿ ಕಂಪನಿಯ ಲಾಭವು 2017-18ರಲ್ಲಿ 213 ಕೋಟಿಗೆ ಏರಿತು.
undefined
ರೇಣುಕಾ ರಾಮನಾಥ್ -ಖಾಸಗಿ ವಲಯದಲ್ಲಿ ಸ್ವತಂತ್ರ ಇಕ್ವಿಟಿ ಪ್ಲಾಟ್‌ಫಾರ್ಮ್ ಸ್ಥಾಪಿಸಿದ ಮತ್ತು ಸುಮಾರು 1 ಬಿಲಿಯನ್‌ಕ್ಕಿಂತ ಹೆಚ್ಚು ಆಸ್ತಿಯನ್ನು ನಿರ್ವಹಿಸಿದ ಭಾರತದ ಮೊದಲ ಮಹಿಳೆ ರೇಣುಕಾ ರಾಮನಾಥ್.
undefined
ಶಿಖಾ ಶರ್ಮಾ -ಶಿಖಾ ಶರ್ಮಾ ದೇಶದ ಅತ್ಯಂತ ಯಶಸ್ವಿ ಮತ್ತು ಗೌರವಾನ್ವಿತ ಬ್ಯಾಂಕರ್‌ಗಳಲ್ಲಿ ಒಬ್ಬರು. ಇವರು ಆಕ್ಸಿಸ್ ಬ್ಯಾಂಕ್ ಸಿಇಒ. ಜೂನ್ 2009 ರಿಂದ ಆಗಸ್ಟ್ 2018 ರವರೆಗೆ, ಆಕ್ಸಿಸ್ ಬ್ಯಾಂಕಿನ ಷೇರು ಬೆಲೆಗಳು ಇವರ ಲೀಡರ್‌ಶಿಪ್‌ನಲ್ಲಿ 4 ಪಟ್ಟು ಹೆಚ್ಚಾಗಿದೆ.
undefined
click me!