ಪಿಸಿಓಎಸ್ ಎಂಬುದು ಹಾರ್ಮೋನುಗಳಿಂದಾಗಿ ಉಂಟಾಗುವ ಸಮಸ್ಯೆಯಾಗಿ ಹದಿಹರೆಯದವರು, ಚಿಕ್ಕ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ, ಮಹಿಳೆಯ ದೇಹದಲ್ಲಿ ಅನೇಕ ವಿಚಿತ್ರ ಬದಲಾವಣೆಗಳಾಗುತ್ತವೆ. ದೇಹದ ಅನೇಕ ಭಾಗಗಳಲ್ಲಿ ಅನಗತ್ಯ ಕೂದಲು ಬೆಳೆಯುವುದು, ದೇಹದ ತೂಕವೂ ಹೆಚ್ಚುತ್ತದೆ.
ನ್ಯೂಯಾರ್ಕ್‌ನ 27 ವರ್ಷದ ಯುವತಿ ಕಳೆದ 8 ವರ್ಷಗಳಿಂದ ಪಿಸಿಓಎಸ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆಯಿಂದ ಪ್ರತಿ ಎರಡು ದಿನಗಳಿಗೊಮ್ಮೆ ಕ್ಷೌರ ಮಾಡಬೇಕಾಗಿತ್ತು. ಆದರೆ ಈಗ ತನ್ನ ಸ್ಥಿತಿ ಒಪ್ಪಿಕೊಂಡು ಗಡ್ಡವನ್ನು ಬೆಳೆಸಲು ಪ್ರಾರಂಭಿಸಿದ್ದಾಳೆ ಈಕೆ. ತನ್ನ ಈ ನಿರ್ಧಾರವನ್ನು ತನ್ನ ಜೀವನದ ಅತ್ಯುತ್ತಮ ನಿರ್ಧಾರ ಎನ್ನುತ್ತಾಳೆ ಈ ಯುವತಿ.
ನ್ಯೂಯಾರ್ಕ್‌ನಲ್ಲಿ ವಾಸಿಸುವ 27 ವರ್ಷದ ಎಲ್ಮಾ ಟೊರೆಸ್‌ನಲ್ಲಿ 15 ನೇ ವಯಸ್ಸಿನಲ್ಲಿ ಪಿಸಿಓಎಸ್ ಕಾಯಿಲೆ ಕಾಣಿಸಿಕೊಂಡಿತು. ನಂತರ ಎಂಟು ವರ್ಷ ಈಕೆ ಕ್ಷೌರ, ವ್ಯಾಕ್ಸಿಂಗ್ ಮತ್ತು ಬ್ಲೀಚಿಂಗ್ ಮಾಡುತ್ತಲೇ ಇದ್ದರು.
ವಾಸ್ತವದಲ್ಲಿ ಹಾರ್ಮೋನುಗಳ ಕಾರಣದಿಂದಾಗಿ ಯುವತಿ ಮುಖದ ಮೇಲೆ ಸಾಕಷ್ಟು ಕೂದಲು ಬೆಳೆಯುತ್ತಿತ್ತು. ಮೊದಲಿಗೆ ಅವಮಾನದಿಂದ ತಪ್ಪಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ನಂತರ ವಾಸ್ತವವನ್ನು ಒಪ್ಪಿಕೊಂಡಳು. ಗಡ್ಡವನ್ನು ಬೆಳೆಸಲು ನಿರ್ಧರಿಸಿದಳು.
ನಾಲ್ಕು ವರ್ಷಗಳ ಹಿಂದೆ, ಎಲ್ಮಾ ಕ್ಷೌರವನ್ನು ನಿಲ್ಲಿಸಿದಳು. ಪುರುಷರಂತೆ ಮುಖದ ಮೇಲೆ ಪೂರ್ಣ ಗಡ್ಡ ಬೆಳೆಯಿತು. ಆದರೂ ವ್ಯಾಕ್ಸ್ ಮಾಡುವ ಗೋಜಿಗೆ ಹೋಗಲಿಲ್ಲ ಎಲ್ಮಾ. ತನ್ನ ಕಥೆಯನ್ನು ಎಲ್ಮಾ ಮಹಿಳೆಯರೊಂದಿಗೆ ಹಂಚಿಕೊಳ್ಳುತ್ತಾಳೆ. ಇದರಿಂದ ಅವರು ಕೂಡ ರೋಗದ ಖಿನ್ನತೆಯಿಂದ ಹೊರ ಬರುತ್ತಾರೆ.15 ವರ್ಷದವಳಿದ್ದಾಗ ತನ್ನ ಸಹಪಾಠಿಗಳು ಅವಳನ್ನು ಗೇಲಿ ಮಾಡುತ್ತಿದ್ದರು ಎಂದು ಎಲ್ಮಾ ತನ್ನ ಅನುಭವವನ್ನು ಹೇಳುತ್ತಾಳೆ.
ಇದು ಅವರ ಸತ್ಯ ಎಂದು ಎಲ್ಮಾ ಇತರ ಮಹಿಳೆಯರಿಗೆ ಸೂಚಿಸಿದರು. ಅನಾರೋಗ್ಯದ ಕಾರಣದಿಂದ ಇದು ಸಂಭವಿಸುತ್ತದೆ ಮತ್ತು ಇದು ನೈಸರ್ಗಿಕವಾಗಿದೆ. ಖಿನ್ನತೆಗೆ ಹೋಗುವ ಬದಲು ಅದನ್ನು ಅಳವಡಿಸಿಕೊಳ್ಳಿ. ಪಿಸಿಓಎಸ್‌ನಿಂದಾಗಿ ಮಹಿಳೆಯರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಮಾಜದ ಒತ್ತಡವು ಅವರನ್ನು ಮತ್ತಷ್ಟು ಕುಗ್ಗಿಸುತ್ತದೆ.
ಎಲ್ಮಾ ತನ್ನ ಗಡ್ಡದೊಂದಿಗೆ ಹಲವಾರು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರು ಅವರ ಆತ್ಮವಿಶ್ವಾಸವನ್ನು ಮೆಚ್ಚಿದ್ದಾರೆ. ಅನೇಕ ಜನರು ಎಲ್ಮಾಳನ್ನು ಹೊಗಳಿದ್ದಾರೆ. ಯಾವುದೇ ಮಹಿಳೆ ತನ್ನ ಕಥೆಯಿಂದ ಕಲಿತರೆ ಆಕೆಯ ಜೀವನ ಯಶಸ್ವಿಯಾಗುತ್ತದೆ ಎಂದು ಎಲ್ಮಾ ಹೇಳುತ್ತಾರೆ.
ನಿಮ್ಮ ವಿಶ್ವಾಸ ನಿಮ್ಮ ಕೈಯಲ್ಲಿದೆ ಎಂದು ಎಲ್ಮಾ ಹೇಳಿದ್ದಾಳೆ. ನಿಮ್ಮ ಬಗ್ಗೆ ನೀವೇ ಹಿಂಜರಿಯುತ್ತಿದ್ದರೆ ಜನರು ನಿಮ್ಮನ್ನು ಗೇಲಿ ಮಾಡುವ ಮೂಲಕ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಆದ್ದರಿಂದ, ನಿಮ್ಮ ಸ್ಥಿತಿಯನ್ನು ಒಪ್ಪಿಕೊಂಡು ಅದನ್ನು ಸ್ವೀಕರಿಸಿ ಎಂದಿದ್ದಾರೆ.