ಫೇಸ್‌ಬುಕ್‌ಲ್ಲಿ ಸೆಲ್ಫಿಗೆ ಕಡಿಮೆ ಲೈಕ್‌ - ನೇಣಿಗೆ ಶರಾಣಾದ ಹುಡುಗಿ

First Published Aug 22, 2020, 4:50 PM IST

ಸಾಮಾಜಿಕ ಮಾಧ್ಯಮ ಜೀವನವನ್ನು  ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಸ್ಥಳವಾಗಿದೆ.  ದೂರದಲ್ಲಿ ವಾಸಿಸುವ ಜನರ ನಡುವೆ ಸಂಪರ್ಕ ಹೊಂದಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅನಾನುಕೂಲಗಳಿವೆ.ಇದರಿಂದ ಜನರು ಖಿನ್ನತೆಗೆ ಕೂಡ  ಒಳಗಾಗುತ್ತಾರೆ.  ಇದೇ ರೀತಿ  ಹುಡುಗಿ ತನ್ನ ಜೀವನವನ್ನು ಕೊನೆಗೊಳಿಸಿದಳು. ಆತ್ಮಹತ್ಯೆಗೆ ಕಾರಣ ಬಹಿರಂಗವಾದಾಗ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಫೇಸ್‌ಬುಕ್‌ನಲ್ಲಿ ತನ್ನಸೆಲ್ಫಿ ಕಡಿಮೆ ಲೈಕ್‌ಗಳನ್ನು ಪಡೆದುದ್ದರಿಂದ ಹುಡುಗಿ ಅಸಮಾಧಾನಗೊಂಡು  ಜೀವನವನ್ನು ಕೊನೆಗೊಳಿಸಿ ಕೊಂಡಿದ್ದಾಳೆ. ಈಗ ಹುಡುಗಿಯ ತಾಯಿ ಸೋಶಿಯಲ್ ಮೀಡಿಯಾದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಗಳ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ.  

ಈ ಆತ್ಮಹತ್ಯೆ ಪ್ರಕರಣ ಕಳೆದ ವರ್ಷ ಡಿಸೆಂಬರ್ ನೆಡೆದಿದೆ. ಲ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದ 19 ವರ್ಷದ ಕ್ಲೋಯ್ ಡೇವಿಸನ್‌ ತನ್ನ ಸ್ವಂತ ಮನೆಯಲ್ಲಿ ನೇಣಿಗೆ ಬಲಿಯಾದಳು. ಆದರೆ ಆತ್ಮಹತ್ಯೆ ಪತ್ರವೂ ಇರಲಿಲ್ಲ. ಸಾವಿಗೆ ಕಾರಣವೇನು ಎಂದು ಯಾರಿಗೂ ಅರ್ಥವಾಗಿರಲಿಲ್ಲ.
undefined
ಆತ್ಮಹತ್ಯೆಯ ಕೆಲವು ದಿನಗಳ ನಂತರ, ಪ್ರಕರಣವು ಬಹಿರಂಗಗೊಂಡಿದೆ. ವಾಸ್ತವವಾಗಿ, ಕ್ಲೋಯ್ ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ತನ್ನ ಸೆಲ್ಫಿಗೆ ಕಡಿಮೆ ಲೈಕ್‌ಗಳನ್ನು ಪಡೆದ ಬಗ್ಗೆ ಅಸಮಾಧಾನಗೊಂಡಿದ್ದಳು. ಆ ದುಃಖದಲ್ಲಿ ತನ್ನ ಜೀವವನ್ನು ಬಲಿ ಕೊಟ್ಟಳು.
undefined
ಕ್ಲೋಯ್ ತುಂಬಾ ಸುಂದರವಾಗಿದ್ದಳು ಹಾಗೂ ಹೋಟೆಲ್‌ನಲ್ಲಿ ವೈಯ್ಟರ್‌ ಆಗಿ ಕೆಲಸ ಮಾಡುತ್ತಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್‌ ಆಗಲು ಪ್ರತಿದಿನ ತನ್ನ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಳು. ಆದರೆ ಡಿಸೆಂಬರ್‌ನಲ್ಲಿ ತನ್ನ ಫೋಟೋ ಅಪ್‌ಲೋಡ್ ಮಾಡಿದಾಗ ಆಕೆಗೆ ಹೆಚ್ಚು ಲೈಕ್‌ಗಳು ಸಿಗಲಿಲ್ಲ.
undefined
ಇದರ ನಂತರ ಅವಳು ತುಂಬಾ ಅಸಮಾಧಾನಗೊಂಡಳು. ತನ್ನ ಸ್ನೇಹಿತರೊಬ್ಬರಿಗೆ ಕಾಲ್‌ ಮಾಡಿ ವಿಷಯ ಹಂಚಿಕೊಂಡಳು. ಮಾತನಾಡುವಾಗ ಅವಳು ತುಂಬಾ ಅಳುತ್ತಿದ್ದಳು. ಯಾರೂ ನನ್ನನ್ನು ಪ್ರೀತಿಸುವುದಿಲ್ಲ ಅಥವಾ ಇಷ್ಟಪಡುವುದಿಲ್ಲ ಎಂದು ಹೇಳಿ,ಫೋನ್ ಸಂಪರ್ಕ ಕಡಿತಗೊಳಿಸಿದ್ದಳಂತೆ.
undefined
ಕ್ಲೋಯ್‌ನ ಸ್ನೇಹಿತ ತಕ್ಷಣ ತಾಯಿಗೆ ಕಾಲ್‌ ಮಾಡಿ ಹೇಳಿದ್ದಾಗ, ಅವರು ಹೋಗಿ ನೋಡಿದರೆ ಕ್ಲೋಯ್ ನೇಣು ಹಾಕಿಕೊಂಡಿರುವುದನ್ನು ಕಂಡರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆಗಲೇ ಮೃತಪಟ್ಟಿದ್ದಳು.
undefined
ಈಗ ಕ್ಲೋಯ್ ತಾಯಿ ಸೋಶಿಯಲ್ ಮೀಡಿಯಾದ ಪರಿಣಾಮಗಳನ್ನು ಜನರಿಗೆ ಹೇಳುತ್ತಿದ್ದಾರೆ. ಅವಳು ಯುವಕರಿಗೆ ಎಚ್ಚರಿಕೆ ನೀಡುತ್ತಿದ್ದಾಳೆ. ತನ್ನ ಮಗಳಿಗೆ ಏನಾಯಿತು ಅದು ಯಾರಿಗೂ ಆಗಬಾರದು ಎಂದು ಅವರು ಹೇಳುತ್ತಾರೆ.
undefined
ಕ್ಲೋಯ್ ತುಂಬಾ ಖು‍ಷಿಯ ಹುಡುಗಿಯಾಗಿದ್ದಳು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇತರರು ತಮ್ಮನ್ನು ಒಪ್ಪಿಕೊಳ್ಳಬೇಕೆಂಬ ಹಂಬಲದಿಂದ ಪ್ರಾಣವನ್ನು ಕಳೆದುಕೊಂಡಳು
undefined
'ಜೀವನವು ತುಂಬಾ ಮೌಲ್ಯಯುತವಾಗಿದೆ .ಇದನ್ನು ಈ ರೀತಿ ವ್ಯರ್ಥ ಮಾಡಬಾರದು. ವರ್ಚುವಲ್ ಅಲ್ಲ, ನಿಜವಾದ ಸ್ನೇಹಿತರನ್ನು ಮಾಡಿಕೊಳ್ಳಿ' ಎಂದು ಕ್ಲೋಯ್ ತಾಯಿ ಯುವಕರಿಗೆ ವಿವರಿಸಿದರು.
undefined
click me!