ಪ್ರಾಣಕ್ಕೆ ಕುತ್ತು ತರ್ಬಹುದು ಮೂಗು ಬೊಟ್ಟು, ಧರಿಸಿದ್ಮೇಲೆ ಈ ಕೆಲ್ಸ ಮರಿಬೇಡಿ

Published : Feb 21, 2026, 04:13 PM IST

Nose Pin Health Risk : ಮೂಗು ಚುಚ್ಚಿಕೊಳ್ಳೋದ್ರಿಂದ ಪಿರಿಯಡ್ಸ್ ನೋವು ನಿವಾರಣೆ ಸೇರಿದಂತೆ ನಾನಾ ಲಾಭವಿದೆ. ಆದ್ರೆ ಮೂಗಿನ ಬೊಟ್ಟು ಹಾಕಿಕೊಂಡ ಮಹಿಳೆಯರು ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಬೇಕು. ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಕಾಡ್ಬಹುದು. 

PREV
17
ಮೂಗಿನ ಅಂದ ಹೆಚ್ಚಿಸುವ ಬೊಟ್ಟು

ಮೂಗು ಚುಚ್ಚಿಕೊಳ್ಳೋದು ಭಾರತೀಯರ ಪ್ರಮುಖ ಸಂಪ್ರದಾಯಗಳಲ್ಲಿ ಒಂದು. ಹೆಣ್ಣು ಮಕ್ಕಳು ಚಿಕ್ಕವರಿರುವಾಗ್ಲೇ ಅವರಿಗೆ ಮೂಗು ಚುಚ್ಚುವ ಶಾಸ್ತ್ರ ನಡೆಯುತ್ತೆ. ಈಗಿನ ದಿನಗಳಲ್ಲಿ ಮೂಗಿನ ಬೊಟ್ಟು ಧರಿಸುವವರ ಸಂಖ್ಯೆ ಕಡಿಮೆ ಆದ್ರೂ ಅದೊಂದು ಫ್ಯಾಷನ್ ಆಗಿ ಬದಲಾಗಿದೆ. ಮೂಗಿನ ಬೊಟ್ಟು ಧರಿಸೋದ್ರಿಂದ ಲಾಭ ಸಾಕಷ್ಟಿದೆ. ಅದ್ರ ಜೊತೆ ಅನಾನುಕೂಲವೂ ಇದೆ.

27
ಮೂಗಿನಬೊಟ್ಟು ಅಪಾಯಕಾರಿ

ಸಾಮಾನ್ಯವಾಗಿ ಒಮ್ಮೆ ಮೂಗಿಗೆ ಹಾಕಿದ ಬೊಟ್ಟನ್ನು ಮಹಿಳೆಯರು ಪದೇ ಪದೇ ಬದಲಿಸೋದಿಲ್ಲ. 10 -11 ವರ್ಷಗಳ ಕಾಲ ಒಂದೇ ಬೊಟ್ಟು ಧರಿಸುವವರಿದ್ದಾರೆ. ತುಂಬಾ ವರ್ಷಗಳ ಕಾಲ ಬೊಟ್ಟು ಧರಿಸಿದ್ರೆ ಸ್ಕ್ರೂ ಸಡಿಲವಾಗೋ ಸಾಧ್ಯತೆ ಹೆಚ್ಚು. ಆದ್ರೆ ಮಹಿಳೆಯರು ಸ್ಕ್ರೂ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಸಡಿಲವಾಗಿದ್ರೂ ಅದನ್ನು ಅಲ್ಲೇ ಟೈಟ್ ಮಾಡಿ ಮತ್ತೆ ಬಳಸ್ತಾರೆ. ಈ ಸ್ಕ್ರೂ ಸಡಿಲವಾಗಿ ಕೆಳಗೆ ಬಿದ್ರೆ ತೊಂದ್ರೆ ಇಲ್ಲ, ಅದು ಒಳಗೆ ಸೇರಿದ್ರೆ ಅಪಾಯ.

37
ಕೊಲ್ಕತ್ತಾದಲ್ಲಿ ಕೇಸ್

ಹಿಂದಿನ ವರ್ಷ ಕೊಲ್ಕತ್ತಾದ ವರ್ಷಾ ಎನ್ನುವ ಮಹಿಳೆ ಮೂಗಿನ ಬೊಟ್ಟಿನ ಸ್ಕ್ರೂ ಆಕೆ ಶ್ವಾಸಕೋಶ ಸೇರಿತ್ತು. ವರ್ಷ, ಸ್ಕ್ರೂ ಇಲ್ದಿರೋದನ್ನು ಗಮನಿಸಿದ್ರು. ಅದು ಹೊಟ್ಟೆಯೊಳಗೆ ಹೋಗಿದೆ ಅಂತ ಭಾವಿಸಿದ್ರು. ಆದ್ರೆ ಅದು ಶ್ವಾಸಕೋಶ ಸೇರಿತ್ತು. ಆರಂಭದಲ್ಲಿ ಆರಾಮಾಗಿದ್ದ ವರ್ಷಾಗೆ ನಿಧಾನವಾಗಿ ಉಸಿರಾಟ ಸಮಸ್ಯೆ ಕಾಡಲು ಶುರುವಾಯ್ತು. ವಿಪರೀತ ಕೆಮ್ಮು, ನ್ಯುಮೋನಿಯಾ ಲಕ್ಷಣ ಕಾಣಿಸಿಕೊಂಡ್ತು. ಸ್ಕ್ರೂ ಶ್ವಾಸಕೋಶ ಸೇರಿದ್ದು ಪರೀಕ್ಷೆಯಲ್ಲಿ ಗೊತ್ತಾಗ್ತಿದ್ದಂತೆ ಬ್ರಾಂಕೋಸ್ಕೋಪಿ ಮಾಡಿ ಸ್ಕ್ರೂ ತೆಗೆಯಲಾಯ್ತು.

47
ಕೊಚ್ಚಿಯಲ್ಲೂ ಕೇಸ್

ಕೊಚ್ಚಿಯಲ್ಲೂ ಇಂಥ ಮೂರು ಕೇಸ್ ನಡೆದಿದೆ. ಮಹಿಳೆಯರ ಶ್ವಾಸಕೋಶಕ್ಕೆ ಸ್ಕ್ರೂ ಹೋಗಿತ್ತು. ಅವರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಡಿರಲಿಲ್ಲ. ವಿಪರೀತ ಕೆಮ್ಮಿನ ನಂತ್ರ ಪರೀಕ್ಷೆ ವೇಳೆ ಮೂಗಿನ ಬೊಟ್ಟು ಶ್ವಾಸಕೋಶ ಸೇರಿದ್ದು ಗೊತ್ತಾಗಿತ್ತು.

57
ಮೂಗಿನ ಬೊಟ್ಟು ಹಾಕ್ಬಾರದಾ?

ಇಂಥ ವಿಷ್ಯ ಕೇಳ್ತಿದ್ದಂತೆ ಮಹಿಳೆಯರು ಆತಂಕಕ್ಕೊಳಗಾಗ್ತಾರೆ. ಮೂಗಿನ ಬೊಟ್ಟು ಹಾಕೋದೇ ಬೇಡ್ವ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತದೆ. ತಜ್ಞರ ಪ್ರಕಾರ ನೀವು ಮೂಗಿನ ಬೊಟ್ಟನ್ನು ಹಾಕ್ಬಹುದು ಆದ್ರೆ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಬೇಕು. ನಿರಂತರ ಪರೀಕ್ಷೆ ಮಾಡ್ತಿರಬೇಕು.

67
ಬೊಟ್ಟು ಧರಿಸಿದೋರು ಏನು ಮಾಡ್ಬೇಕು?

ನೀವು ಈಗಾಗಲೇ ಮೂಗಿನ ಬೊಟ್ಟು ಧರಿಸಿದ್ದು, ಅದಕ್ಕೆ ಸ್ಕ್ರೂ ಇದ್ರೆ ಅದನ್ನು ಆಗಾಗ ಪರೀಕ್ಷೆ ಮಾಡ್ತಿರಿ. ಸ್ಕ್ರೂ ಸಡಿಲವಾಗಿದ್ರೆ ಅದನ್ನು ಬಿಗಿಗೊಳಿಸಿ. ತುಂಬಾ ದಿನಗಳ ಕಾಲ ಒಂದೇ ಬೊಟ್ಟನ್ನು ಹಾಕಿದಾಗ ಸ್ಕ್ರೂ ಸಡಿಲವಾಗುವ ಸಾಧ್ಯತೆ ಇರುತ್ತೆ. ಹಾಗಾಗಿ ಆಗಾಗ ಅದನ್ನು ಬದಲಿಸೋದು ಒಳ್ಳೆಯದು.

77
ರಾತ್ರಿ ಈ ಕೆಲ್ಸ ಮಾಡಿ

ನೀವು ವಿಶೇಷ ಸಮಾರಂಭಗಳಲ್ಲಿ ಮಾತ್ರ ಮೂಗಿನ ಬೊಟ್ಟು ಹಾಕಿಕೊಳ್ತಿರಿ ಅಂದ್ರೆ ಅದನ್ನು ರಾತ್ರಿ ತೆಗೆದಿಟ್ಟು ಮಲಗಿ. ರಾತ್ರಿ ಅಥವಾ ನೀವು ವೇಗವಾಗಿ ಉಸಿರೆಳೆದುಕೊಂಡಾಗ ಸ್ಕ್ರೂ ಒಳ ಸೇರುವ ಸಾಧ್ಯತೆ ಇರುತ್ತದೆ. ಹಾಗೆ ಮೂಗಿನ ಬಗ್ಗೆ ಗಮನ ಹರಿಸೋದು ಕೂಡ ಮುಖ್ಯ. ಮೂಗಿನ ಒಳಗೆ ಗಾಯ, ಪಸ್ ಕಾಣಿಸಿಕೊಂಡ್ರೆ ಅದ್ರ ಬಗ್ಗೆ ಜಾಗೃತಿ ಮುಖ್ಯ. ಮೂಗಿನ ಬೊಟ್ಟಿನ ಸ್ವಚ್ಛತೆ ಬಗ್ಗೆಯೂ ಗಮನ ನೀಡ್ಬೇಕಾಗುತ್ತದೆ. ಕೆಲವರಿಗೆ ಎಲ್ಲ ಮೆಟಲ್ ಮೂಗಿನ ಬೊಟ್ಟು ಹೊಂದಿಕೆ ಆಗೋದಿಲ್ಲ. ಅದ್ರಿಂದ ಅಲರ್ಜಿಯಾಗುವ ಸಾಧ್ಯತೆ ಇರುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories