ತಾಯಿಯಾಗಿ ವಿಶ್ವ ದಾಖಲೆ ಬರೆದ ಅತೀ ಕುಬ್ಜ ಮಹಿಳೆ!

First Published Sep 12, 2020, 5:14 PM IST

ಕೇವಲ 2 ಅಡಿ 10 ಇಂಚುಗಳ ಎತ್ತರದ ಮಹಿಳೆ ಕಥೆ ಇದು. ಇದಾಹೊ ಮೂಲದ 31 ವರ್ಷದ ಮಹಿಳೆ ಎತ್ತರದಲ್ಲಿ ತುಂಬಾ ಸಣ್ಣಗಿದ್ದರೂ, ಆತ್ಮ ವಿಶ್ವಾಸಕ್ಕೇನೂ ಕಡಿಮೆ ಇಲ್ಲ. ದೈಹಿಕವಾಗಿ ಅಂಗವಿಕಲರಾದ ನಂತರವೂ ಮಗುವಿಗೆ ಜನ್ಮ ನೀಡಿ, ಗಂಡನೊಂದಿಗೆ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾಳೆ ತ್ರಿಶಾ ಟೇಲರ್‌. 2 ಮಿಸ್‌ ಕ್ಯಾರೇಜ್‌ ಹೊರತಾಗಿಯೂ, ಧೈರ್ಯ ಕಳೆದುಕೊಳ್ಳದ ತ್ರಿಶಾ ವಿಶ್ವದ ಅತ್ಯಂತ  ಕುಬ್ಜ ತಾಯಿ ಎಂದು ದಾಖಲೆಯನ್ನು ಹೊಂದಿದ್ದಾಳೆ.

31 ವರ್ಷದ ತ್ರಿಶಾ ಟೇಲರ್ ಹುಟ್ಟುವಾಗಲೇ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಎಂಬ ಕಾಯಿಲೆಗೆ ಗುರಿಯಾಗಿದ್ದಳು. ಹುಟ್ಟಿದ ಕೂಡಲೇ ಆಕೆಯ ದೇಹದಲ್ಲಿ 150ಕ್ಕೂ ಹೆಚ್ಚು ಫ್ರಾಕ್ಚರ್‌ ಆಗಿತ್ತು. ಡಾಕ್ಟರ್‌ ಆಕೆಯ ಪ್ರಾಣ ಉಳಿಸಲು ತುಂಬಾ ಕಷ್ಟ ಪಟ್ಟಿದ್ದರು.
undefined
ಬದುಕುಳಿದ ತ್ರಿಶಾಳ ಎತ್ತರ 2 ಅಡಿ 10 ಇಂಚುಗಳಿಗಿಂತ ಹೆಚ್ಚಾಗಲಿಲ್ಲ. ಅಲ್ಲದೇ, ಈಕೆ ದೇಹ ಅದೆಷ್ಟು ದುರ್ಬಲವಾಗಿದೆ ಎಂದರೆ ಸೀನಿದರೂ ಫ್ಯಾಕ್ಚರ್ ಆಗುವಂತಿದೆ.
undefined
ಆದರೆ, ತ್ರಿಶಾ ಎಂದಿಗೂ ಧೈರ್ಯಗೆಡಲಿಲ್ಲ. ಎಲ್ಲಾ ಕಠಿಣ ಪರಿಶ್ರಮದ ಹೊರತಾಗಿಯೂ, ಸಂತೋಷದಿಂದ ನಗುತ್ತಾ ತಮ್ಮ ಜೀವನವನ್ನು ಕಳೆಯುತ್ತಿದ್ದಾಳೆ.
undefined
ನಂತರ ಅವಳು 6 ಅಡಿ 1 ಇಂಚು ಎತ್ತರದ ಮೈಕೆಲ್ ಎಂಬಾತನನ್ನು ಮದುವೆಯಾದಳು. ಮೈಕೆಲ್ ಎಂದಿಗೂ ತ್ರಿಶಾಳನ್ನು ಡಿಫ್ರೆಂಟ್‌ ಎಂದು ಭಾವಿಸಲಿಲ್ಲ. ಎಲ್ಲೆಡೆ ಮಗುವಿನಂತೆ ಅವಳನ್ನು ಎತ್ತಿಕೊಂಡು ಹೋಗುತ್ತಾನೆ.
undefined
ಪ್ರತಿಯೊಬ್ಬ ಮಹಿಳೆ ಮದುವೆಯ ನಂತರ, ಮಗುವಿಗಾಗಿ ಪರಿತಪಿಸುತ್ತಾರೆ.ತ್ರಿಶಾ ಕೂಡ ಮಗು ಹೊಂದಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದಳು. ಆದರೆ ಅವಳ ವೀಕ್‌ ಆದ ದೇಹದಿಂದಾಗಿ ಇದು ಅಸಾಧ್ಯವಾಗಿತ್ತು.
undefined
ಸೋಲು ಒಪ್ಪಿಕೊಳ್ಳದ ತ್ರಿಶಾ 2 ಬಾರಿ ಗರ್ಭಪಾತವಾದ ನಂತರವೂ ಮಗುವಿಗೆ ಜನ್ಮ ನೀಡಿದಳು. ಆ ಸಮಯದಲ್ಲಿ, ಅವಳ ಎಲ್ಲಾ ಮೂಳೆಗಳು ಸಹ ಮುರಿಯಬಹುದು ಎಂದು ವೈದ್ಯರು ಎಚ್ಚರಿಸಿದರು.
undefined
ಎರಡು ಗರ್ಭಪಾತದ ನಂತರ, ತನ್ನ ಮಗುವನ್ನು ಗರ್ಭದಲ್ಲಿ 32 ವಾರಗಳವರೆಗೆ ಇಟ್ಟುಕೊಂಡು ನಂತರ ಸಿ-ಸೆಕ್ಷನ್ ಮೂಲಕ ಜನ್ಮ ನೀಡಿದರು.
undefined
ಮಗುವಿಗೆ ಮಾವೆನ್ ಎಂದು ಹೆಸರಿಟ್ಟಿದ್ದಾರೆ. ತ್ರಿಶಾ ಮಾವೆನ್‌ಗೆ ಜನ್ಮ ನೀಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
undefined
ತ್ರಿಶಾ ಮತ್ತು ಮಗ ಮಾವೆನ್ಇಬ್ಬರೂ ಒಂದೇ ಮಗುವಿನ ಗಾಡಿಯಲ್ಲಿ ಒಟ್ಟಿಗೆ ಸಂಚರಿಸುತ್ತಾರೆ. ಅನೇಕ ಬಾರಿ ಅವರು ಒಂದೇ ಸೈಜ್‌ನ ಬಟ್ಟೆಗಳನ್ನು ಧರಿಸುತ್ತಾರೆ.
undefined
click me!