ಫೋಟೊಗಳಿಂದಾನೇ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ 'ನ್ಯೂಡ್ ಯೋಗ ಗರ್ಲ್' !

First Published Sep 1, 2020, 5:39 PM IST

ಇನ್‌ಸ್ಟಾಗ್ರಾಮ್‌ನಲ್ಲಿ ‘ನ್ಯೂಡ್ ಯೋಗ ಗರ್ಲ್’ಎಂದು ಜನಪ್ರಿಯವಾಗಿರುವ ಯೋಗ ಹುಡುಗಿ ಫೋಟೋಗಳು ಸಖತ್‌ ವೈರಲ್‌ ಆಗಿವೆ. ನಗ್ನವಾಗಿ ಯೋಗದ ಆಸನಗಳ ಪೋಟೋವನ್ನು ಶೇರ್ ಮಾಡುವ 26 ವರ್ಷದ ಈ ಹುಡುಗಿ ಯಾರು ಎಂದು ತಿಳಿದಿಲ್ಲ. ಆಕೆ ನ್ಯೂಯಾರ್ಕಿನ ನಗ್ನ ಯೋಗ ಅಲಿಯಾಸ್ ನ್ಯೂಡ್‌ ಯೋಗ ಪಂಥo ಶಿಷ್ಯೆಯಂತೆ. ನಗ್ನ ಯೋಗ ಅಥವಾ ನ್ಯೂಡ್‌ ಯೋಗ ಎಂಬುದೊಂದು ಟ್ರೆಂಡ್‌. ನ್ಯೂಯಾರ್ಕಿನಲ್ಲಿ ಇದನ್ನು ಕಲಿಸುವ ಒಂದು ಸ್ಕೂಲ್ ಅಥವಾ ಪಂಥವೇ ಇದೆ. ಇಲ್ಲಿ ಹತ್ತಾರು ಮಂದಿ ಪ್ರತಿದಿನ ಸೇರಿ ಮುಕ್ತವಾಗಿ ಯೋಗಾಸನಗಳನ್ನು ಕಲಿಯುತ್ತಾರೆ.

ಅತ್ಯಂತ ಸುಲಭವಾಗಿ ಮತ್ತು ಪರ್ಫೆಕ್ಟ್‌ ಆಗಿ, ನಗ್ನವಾಗಿ ಆಸನಗಳನ್ನು ಮಾಡುವ ಈ ಹುಡುಗಿಯ ಪೋಟೋಗಳು ಲಕ್ಷಾಂತರ ಲೈಕ್‌ಗಳನ್ನು ಗಿಟ್ಟಿಸಿವೆ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾವಿರಾರು ಕಾಮೆಂಟ್‌ಗಳು ತುಂಬಿವೆ,
undefined
ಇನ್‌ಸ್ಟಾಗ್ರಾಮ್‌ನಲ್ಲಿ ನ್ಯೂಡ್‌ ಯೋಗ ಗರ್ಲ್‌ ಎಂಬ ಅಕೌಂಟ್‌ಇದೆ. ನ್ಯೂಯಾರ್ಕಿನ ನಗ್ನ ಯೋಗ ಅಲಿಯಾಸ್ ನ್ಯೂಡ್‌ ಯೋಗ ಪಂಥದ ಶಿಷ್ಯೆ ಈಕೆ.ಆದರೆ ಈಕೆ ಯಾರೆಂಬುದು ಯಾರಿಗೂ ಗೊತ್ತಿಲ್ಲ.
undefined
ಈಕೆ ಇನ್‌ಸ್ಟಗ್ರಾಮ್‌ನಲ್ಲಿ ಈಗ ಎಲ್ಲರ ಹಾಟ್‌ ಫೇವರಿಟ್‌.
undefined
ಹೆಚ್ಚಿನ ಅವಳ ಫೋಟೋಗಳನ್ನು ಕ್ಲಿಕ್ ಮಾಡುವುದು ಅವಳ ಬಾಯ್‌ಫ್ರೆಂಡ್‌. ಆಕೆ ಎಲ್ಲೂ ತನ್ನ ಪರಿಚಯ ಬಿಟ್ಟುಕೊಡದೆ ಅನಾಮಧೇಯತೆಯನ್ನು ಕಾಪಾಡಿಕೊಂಡಿದ್ದಾಳೆ.
undefined
ಬಾಲಿವುಡ್‌ನ ಟಾಪ್‌ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ ಮತ್ತು ಸಾರಾ ಅಲಿ ಖಾನ್ ನ್ಯೂಡ್ ಯೋಗ ಗರ್ಲ್ ಅನ್ನು ಫಾಲೋ ಮಾಡುತ್ತಿದ್ದಾರೆ. ಫೋಟೋಗಳಿಗೆ ಆಗಾಗ ಕಾಮೆಂಟ್‌ ಮಾಡಿದ್ದಾರೆ.
undefined
ಸ್ಟನ್ನಿಂಗ್‌ ಹಾಗೂ ಪರ್ಫೆಕ್ಟ್‌ ಭಂಗಿಗಳೊಂದಿಗೆ ಬಾಡಿ ಪಾಸಿಟಿವ್‌ ಮೇಸಜ್‌ ಹರಡುವ ಗುರಿಯನ್ನು ಹೊಂದಿದ್ದಾಳೆ, ನಗ್ನ ಯೋಗವನ್ನು ಅಭ್ಯಾಸ ಮಾಡುವುದರಿಂದ ಆಕೆಗೆ ಸ್ವಾತಂತ್ರ್ಯ ಮತ್ತು ವಿಶ್ರಾಂತಿ ಸಿಗುತ್ತದೆ ಎಂದು ಹೇಳಿದ್ದಾಳೆ.
undefined
26 ವರ್ಷದ ಯೋಗಿನಿ 'ಯೋಗವು ಒಳಗಿನ ಭಾವನೆ ಹಾಗೂ ನಿಮ್ಮ ದೇಹ ಮತ್ತು ಮನಸ್ಸಿನ ನಡುವಿನ ಸಂಪರ್ಕಎಂದು ಅರ್ಥಮಾಡಿಕೊಂಡಾಗ ಪ್ರತಿದಿನ ಯೋಗಮಾಡಲು ಪ್ರಾರಂಭಿಸಿದೆ' ಎಂದು ಹೇಳಿದ್ದಾಳೆ.
undefined
'ಯೋಗ ನನಗೆ ಅತಿ ಅಪರೂಪದ ಸ್ವಾತಂತ್ರ್ಯ ಕೊಡುತ್ತದೆ. ಎಲ್ಲ ಒತ್ತಡಗಳಿಂದ, ಬೇಡಿಕೆಗಳಿಂದ, ನಿಯಮಗಳಿಂದ, ನಿರೀಕ್ಷೆಗಳಿಂದ ನನ್ನನ್ನು ಪಾರು ಮಾಡುತ್ತದೆ. ನಿತ್ಯವೂ ನಾನು ಯೋಗ ಮಾಡುವಾಗ ಆರೋಗ್ಯದ ಫೀಲ್‌ ಆಗುತ್ತದೆ. ನಾನು ವಿಶ್ವದೊಂದಿಗೆ ಒಂದಾದ ಹಾಗೆ ಅನಿಸುತ್ತದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ
undefined
'ನಾನು ಈ ರೀತಿಯ ಫೋಟೋಗಳನ್ನು ಮೊದಲ ಬಾರಿಗೆ ಯತ್ನಿಸಿದಾಗ ಅದು ತುಂಬಾ ಸಾಮಾನ್ಯವಾದ ಭಾನುವಾರವಾಗಿತ್ತು. ತುಂಬಾ ಆರ್ಟಿಸ್ಟಿಕ್‌ ಮತ್ತು ಮಾನವ ದೇಹವನ್ನು ಲೈಂಗಿಕ ರೀತಿಯಲ್ಲಿ ತೋರಿಸಲಿಲ್ಲ.ಎಂದು ಭಾವಿಸಿದೆ' ಎಂದು ಈಹುಡುಗಿ ಹೇಳಿದ್ದಾಳೆ.
undefined
'ಹಿಂದೆ, ನಾನು ನನ್ನ ದೇಹದೊಂದಿಗೆ ತುಂಬಾ ಇನ್‌ಸೆಕ್ಯೂರ್‌ ಆಗಿದ್ದೆ ಮತ್ತು ಅದರ ಭಾಗಗಳನ್ನು ಯಾವಾಗಲೂ ಚೇಂಜ್‌ ಮಾಡಲುಬಯಸುತ್ತಿದ್ದೆ. ನನ್ನನ್ನು ನಾನು ಕಂಡುಕೊಳ್ಳಲು ಮತ್ತು ನನ್ನ ದೇಹವನ್ನು ಪ್ರೀತಿಸಲು ಯೋಗ ನನಗೆ ಸಹಾಯ ಮಾಡಿದೆ. ನೀವು ಹೇಗೆ ಕಾಣುತ್ತೀರಿ ಎಂಬುದು ಮುಖ್ಯವಲ್ಲ, ಪ್ರತಿಯೊಬ್ಬರೂ ತಮ್ಮ ದೇಹದದೋಷಗಳನ್ನು ಕಂಡುಕೊಳ್ಳಬಹುದು. ಏಕೆಂದರೆ ಇವೆಲ್ಲವೂ ನಮ್ಮ ಮನಸ್ಸಿನಲ್ಲಿ ಪ್ರಾರಂಭವಾಗುತ್ತದೆ. ನೀವು ಹೇಗಿದ್ದೀರೋ ಹಾಗೆ ನೀವು ಸುಂದರವಾಗಿದ್ದೀರಿ ಎಂಬುವುದು ನಮ್ಮ ಅರಿವಿಗೆ ಬರಬೇಕು,' ಎಂದಿದ್ದಾಳೆ.
undefined
ಈ ಹುಡುಗಿಯಿಂದ ಸ್ಫೂರ್ತಿ ಪಡೆದ ಇನ್ನೂ ಹಲವರು ಇದೇ ರೀತಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಗ್ನ ದೇಹದ ಯೋಗ ಭಂಗಿಯ ಫೊಟೋಗಳನ್ನು ಶೇರ್‌ ಮಾಡಿದ್ದಾರೆ ಆದರೆ ಈ ಅನಾಮಿಕ ಯೋಗಿನಿಯನ್ನು ಮೀರಿಸುವಲ್ಲಿ ಸೋತಿದ್ದಾರೆ.
undefined
click me!