ಈ ವರ್ಷದ ಆರಂಭದಲ್ಲಿ, ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ತಮಿಳು ಚಲನಚಿತ್ರೋದ್ಯಮದಲ್ಲಿ ರಮೇಶ್ ತಮಿಳ್ಮಣಿ ನಿರ್ದೇಶನದ 'ಲೆಟ್ಸ್ ಗೆಟ್ ಮ್ಯಾರೀಡ್' (ಎಲ್‌ಜಿಎಂ) ನ್ನು ನಿರ್ಮಿಸಿತು. ಈ ಚಲನಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಸಿಂಪಲ್ ಮೂವಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ತಾಯಿ-ಮಗಳ ಜೋಡಿಯ ನಾಯಕತ್ವದಲ್ಲಿ ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಒಟ್ಟು 800 ಕೋಟಿ ರೂ. ವ್ಯವಹಾರ ನಡೆಸುತ್ತದೆ.