ನಗು ಮತ್ತು ಸರಳತೆಯನ್ನೇ ಆಭರಣವನ್ನಾಗಿಸಿಕೊಂಡ ಇನ್ಪೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ನೂರಾರು ಪುಸ್ತಕಗಳ ಲೇಖಕಿಯೂ ಹೌದು. ಪ್ರತಿಯೊಂದೂ ಪುಸ್ತಕದಲ್ಲಿಯೂ ಅವರು ಒಂದಲ್ಲೊಂದು ಜೀವನ ಪಾಠಗಳನ್ನು ಹೇಳುತ್ತಾ ಹೋಗುತ್ತಾರೆ. ಸಾಮಾನ್ಯರಲ್ಲಿ ಅಸಾಮಾನ್ಯರು, ಮಹಾಶ್ವೇತಾ, ಯಶಸ್ವಿ, ತುಮುಲ, ಗುಟ್ಟೊಂದ ಹೇಳುವೆ, ಮನದ ಮಾತು, ಡಾಲರ್ ಸೊಸೆ ಸೇರಿ ಮಕ್ಕಳು ಹಾಗೂ ಹಿರಿಯರಿಗಾಗಿಯೇ ಅನೇಕ ಪುಸ್ತಕಗಳನ್ನು ಬರೆದಿರುವ ಇನ್ಫೋಸಿಸ್ ಸಂಸ್ಥಾಪಕಿ, ಸಮಾಜ ಸೇವಕಿ ಸುಧಾ ಮೂರ್ತಿ ತಮ್ಮ ಪ್ರತಿ ಕೃತಿಯಲ್ಲೂ ಜೀವನದ ಮೌಲ್ಯಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಕೆಲವು ಇವು.
ಯಶಸ್ಸಿಗೆ ಶಿಕ್ಷಣವೇ ಮೂಲ: ಜೀವನದಲ್ಲಿ ಯಶಸ್ಸು ನಿಮ್ಮ ಕೈ ಹಿಡಿದು, ಬಡತನ ತೊಲಗಬೇಕಾದರೆ ಎಲ್ಲರೂ ಸುಶಿಕ್ಷಿತರಾಗಿರಬೇಕು. ಶಿಕ್ಷಣದ ಮೂಲಕವೇ ಬದುಕನ್ನು ಬದಲಾಯಿಸಿಕೊಂಡ ಹಲವರ ಬದುಕಿನ ಕಥೆಯನ್ನು ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ನವೀರಾಗಿ ಹೇಳುತ್ತಾರೆ.
213
ಕರುಣೆ ಮತ್ತು ಸಹಾನುಭೂತಿ: ಇನ್ನೊಬ್ಬರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡೋ ಗುಣ ಪ್ರತಿಯೊಬ್ಬರಲ್ಲಿಯೂ ಇರಬೇಕು. ಜಗತ್ತನಲ್ಲಿ ಧನಾತ್ಮಕ ಬದಲಾವಣೆ ತರಲು, ಪ್ರತಿಯೊಬ್ಬ ಮನುಷ್ಯನೂ ಇನ್ನೊಬ್ಬರ ಮೇಲೆ ದಯೆ ತೋರಬೇಕು.
313
ಸರಳತೆ ಮತ್ತು ನಮ್ರತೆ ಜೀವನದ 2 ಶಕ್ತಿಗಳು: ನಾವೆಷ್ಟು ಜೀವನದಲ್ಲಿ ಸರಳತೆ ರೂಢಿಸಿಕೊಳ್ಳುತ್ತೇವೋ ಅಷ್ಟೇ ನಮ್ರತೆಯನ್ನೂ ಕಲಿತು ಬಿಟ್ಟರೆ ಮಾನಸಿಕ ದೃಢತೆ ಸಾಧಿಸೋದು ಸುಲಭ. ಲೌಕಿಕ ವಸ್ತುಗಳೆಡೆಗೆ ಒಂದು ರೀತಿಯ ವಿಕರ್ಷಣೆ ಇದ್ದರೆ ಬದುಕು ಒಂದೇ ರೀತಿಯಲ್ಲಿ ಇರುತ್ತದೆ. ಪ್ರಕೃತಿಯೊಂದಿಗೆ ನಂಟು ಬೆಳೆಸಿಕೊಂಡು, ಇನ್ನೊಬ್ಬರಿಗೆ ಸಹಾಯ ಮಾಡ್ಕೊಂಡು ಜೀವನ ನಡೆಸುವಷ್ಟು ಸುಖ ಮತ್ಯಾವುದರಲ್ಲಿಯೂ ಇಲ್ಲ ಎನ್ನುತ್ತಾರೆ ಸುಧಾ ಮೂರ್ತಿ
413

513
ಸಮಚಿತ್ತತೆ, ಅವಿರತ ಯತ್ನ ಎಂಥದ್ದೇ ಚಾಲೆಂಜ್ ಎದುರಾದರೂ ಎದುರಿಸುವಂತೆ ಮಾಡುತ್ತದೆ. ಈ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಗೆದ್ದವರ ಕಥೆ ಹೇಳುತ್ತಾರೆ ಸುಥಾ ಮೂರ್ತಿ. ತಮ್ಮ ಮಹಾಶ್ವೇತೆ ಸೇರಿ ಅನೇಕ ಪುಸ್ತಕಗಳಲ್ಲಿ ಮನುಷ್ಯ ಜೀವನದಲ್ಲಿಟ್ಟುಕೊಂಡ ಗುರಿ ಸಾಧಿಸಲು ಇರುವ ಅಡೆ ತಡೆಗಳನ್ನು ಎದುರಿಸುವಂತೆ ಸ್ಫೂರ್ತಿ ನೀಡುತ್ತಾರೆ.
613
ಸಮಾಜಕ್ಕೆ ಕೊಡುಗೆ: ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದು ಬಹಳ ಮುಖ್ಯ. ಇದರಿಂದ ವಿಶ್ವವನ್ನೇ ಬದಲಿಸುವಂಥ ಸುಧಾರಣೆಗಳನ್ನು ತರಬಹುದು. ಅಷ್ಟೇ ಅಲ್ಲ, ಮನಸ್ಸಿಗೆ ತುಂಬಾ ಖುಷಿ ನೀಡುವಂಥ ಕೆಲಸವಿದು.
713
ಸಮಾಜಕ್ಕೆ ಕೊಡುಗೆ: ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದು ಬಹಳ ಮುಖ್ಯ. ಇದರಿಂದ ವಿಶ್ವವನ್ನೇ ಬದಲಿಸುವಂಥ ಸುಧಾರಣೆಗಳನ್ನು ತರಬಹುದು. ಅಷ್ಟೇ ಅಲ್ಲ, ಮನಸ್ಸಿಗೆ ತುಂಬಾ ಖುಷಿ ನೀಡುವಂಥ ಕೆಲಸವಿದು.
813
ಸಣ್ಣ ಸಣ್ಣ ವಿಷಯದಲ್ಲಿಯೂ ಸಂತೋಷ ಕಾಣುವುದ ಕಲೀರಿ. ಸಹಜವಾಗಿಯೇ ಮಾಡೋ ಕೆಲಸಗಳು, ಕೆಲವು ಘಟನೆಗಳಿಂದಲೂ ಖುಷ್ ಖುಷಿಯಾಗಿರೋದು ಕಲೀಬೇಕು. ಆಗ ಜೀವನದಲ್ಲಿ ಏನೇ ಆದರೂ ಎದುರಿಸುವ ಧೈರ್ಯ ಬರೋ ಜೊತೆಗೆ, ಖುಷಿ ಕಾಣುವ ವಿಷಯಗಳು ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಿ, ಆರೋಗ್ಯವನ್ನೂ ವೃದ್ಧಿಸುತ್ತದೆ.
913
ಇನ್ನೊಬ್ಬರಿಗೆ ದಯೆ ತೋರುವುದನ್ನು ಸಣ್ಣ ವಿಷಯವೆಂದು ಇಗ್ನೋರ್ ಮಾಡಬೇಡಿ. ಇನ್ನೊಬ್ಬರ ಮೇಲೆ ತೋರಿಸುವ ಸಣ್ಣ ವಿಷಯವೂ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಜಗತ್ತನ್ನೇ ಬದಲಾಯಿಸಬೇಕು ಅಂದ್ರೆ ಕರುಣೆ ತೋರಿ. ಇನ್ನೊಬ್ಬರನ್ನು ಗೌರವಿಸಿ, ಪ್ರೀತಿಸಿ.
1013
ನಿಮ್ಮ ಕನಸಿನ ಮೇಲೆ ನಂಬಿಕೆ ಇಡಿ. ನಿಮ್ಮ ಕನಸನ್ನು ಈಡೇರಿಸಿಕೊಳ್ಳುವ ಗುರಿಯೆಡೆಗೆ ಗಮ್ಯವಿರಲಿ. ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಕಡಿಮೆಯಾಗೋದು ಬೇಡ. ಗುರಿಯನ್ನು ಅನುರಾಗದಿಂದ ತಲುಪಲು ಯತ್ನಿಸಿ.
1113
ಭಯವನ್ನು ಧೈರ್ಯದಿಂದ ಎದುರಿಸಿ. ಒಮ್ಮೊಮ್ಮೆ ಫೇಲೂರ್ ಆದಾಗ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡಿ. ಧೈರ್ಯವಾಗಿ ಮುನ್ನಡಿ ಇಡಿ. ಗೆಲವು ನಿಮ್ಮದೇ ಆಗುತ್ತೆ.
1213
ಸಮಾಜದಲ್ಲಿ ಬದಲಾವಣೆ ತನ್ನಿ: ಲೈಫಲ್ಲಿ ಯಾವತ್ತೂ ನಂಬಿಕೆ ಕಳೆದುಕೊಳ್ಳಬೇಡಿ. ಸ್ವಾವಲಂಬಿಯಾಗಿರಿ. ಸದಾ ನಿಮ್ಮ ಸುತ್ತಮುತ್ತಲೂ ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯಿಂದ ಪಾಸಿಟಿವ್ ವೈಬ್ಸ್ ಸೃಷ್ಟಿಯಾಗುವಂತೆ ನೋಡಿಕೊಳ್ಳಿ.
1313
ಒಟ್ಟಿನಲ್ಲಿ ಸುಧಾ ಅಮ್ಮ ಅವರು ಹೇಳಿರುವ ಜೀವನದ ಪಾಠಗಳನ್ನು ಅಳವಡಿಸಿಕೊಂಡರೆ ಖುಷಿ ಖುಷಿಯಿಂದ ಇರೋದು ಸಾಧ್ಯ ಎನ್ನೋದು ಸ್ಪಷ್ಟ.