ಬಡತನದಲ್ಲಿ ಬೆಳೆದು ಬಂದ ಅದೆಷ್ಟೋ ಮಂದಿ ಕಷ್ಟಪಟ್ಟು ಹಣ ಗಳಿಸಿ ಶ್ರೀಮಂತರಾಗಿ ಜೀವನದಲ್ಲಿ ಯಶಸ್ವಿಯಾದ ಅದೆಷ್ಟೋ ಉದಾಹರಣೆಗಳಿವೆ. ಶೂನ್ಯದಿಂದ ಉದ್ಯಮ ಆರಂಭಿಸಿ ಬಿಲಿಯನೇರ್‌ಗಳಾದವರಿದ್ದಾರೆ. ಇವರೂ ಸಹ ಹೀಗೆ ಕಡುಬಡತನದಲ್ಲಿ ಬೆಳೆದು ಬಂದ ಮಹಿಳೆ. ಈಗ ಬೃಹತ್ ಕಂಪೆನಿಯ ಸಿಇಒ. ಕೋಟಿ ಕೋಟಿ ವ್ಯವಹಾರ ನಡೆಸೋ ಬಿಸಿನೆಸ್‌ನ ಒಡತಿ.
ಆ ಮಹಿಳೆ ಮತ್ಯಾರೂ ಅಲ್ಲ ಜ್ಯೋತಿ ರೆಡ್ಡಿ. ಬಿಲಿಯನ್ ಡಾಲರ್ ಸಾಫ್ಟ್‌ವೇರ್ ಕಂಪನಿಯ ಸಿಇಒ. ಜ್ಯೋತಿ ರೆಡ್ಡಿ ಬಾಲ್ಯದಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಕಂಡಿದ್ದರು. ಡ ಕುಟುಂಬದಲ್ಲಿ ಜನಿಸಿದ ಐದು ಮಕ್ಕಳಲ್ಲಿ ಎರಡನೆಯವರು ಜ್ಯೋತಿ ರೆಡ್ಡಿ. ಮನೆಯಲ್ಲಿ ಬಡತನವಿದ್ದ ಕಾರಣ, ಕೂಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಸಾಕಲು ಕಷ್ಟವಾಗಿ ಜ್ಯೋತಿ ಅವರನ್ನು ಅನಾಥಾಶ್ರಮಕ್ಕೆ ಸೇರಿಸಿದರು.
ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಜ್ಯೋತಿ, ಸರ್ಕಾರಿ ಶಾಲೆಯಲ್ಲಿ ಓದಿದರು. ಕಲಿಕೆಯಲ್ಲಿ ಆಸಕ್ತಿಯಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ ಾವರಿಗೆ ಮದುವೆ ಮಾಡಲಾಯಿತು. 18ನೇ ವಯಸ್ಸಿನಲ್ಲಿ ಜ್ಯೋತಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು. ದಿನೇ ದಿನೇ ಹಣಕಾಸಿನ ಸಮಸ್ಯೆ ಹೆಚ್ಚಾದ ಕಾರಣ ಆ ದಿನಗಳಲ್ಲಿ ಜ್ಯೋತಿ ಕೇವಲ 5 ರೂ.ಗಾಗಿ ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು.
ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಅವರ ಜೀವನದಲ್ಲಿ ಸ್ಪಲ್ಪ ಬದಲಾವಣೆಯಾಯಿತು. ಕಲಿಕೆಗೂ ಸಮಯವಿಡಲು ಪ್ರಾರಂಭಿಸಿದರು. ಜೊತೆಗೆ ಟೈಲರಿಂಗ್ ಕೆಲಸವನ್ನೂ ಮಾಡುತ್ತಿದ್ದರು. ಜ್ಯೋತಿ 1994ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಿಂದ ಬಿಎ ಪದವಿ ಮತ್ತು 1997ರಲ್ಲಿ ಕಾಕತೀಯ ವಿಶ್ವವಿದ್ಯಾನಿಲಯದಲ್ಲಿ ಪಿಜಿ ಪದವಿ ಪಡೆದರು.
ಹೆಚ್ಚಿನ ವಿದ್ಯಾಭ್ಯಾಸ ಜ್ಯೋತಿ ರೆಡ್ಡಿ, ಅವರಿಗೆ ಹೆಚ್ಚು ಗಳಿಕೆ ಮಾಡಲು ನೆರವಾಯಿತು. ಆದರೆ ತಿಂಗಳಿಗೆ ಕೇವಲ 398 ರೂ. ಸಿಗುತ್ತಿದ್ದ ಕಾರಣ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿರಲ್ಲಿಲ್ಲ. ಸಂಬಂಧಿಯೊಬ್ಬರು USನಿಂದ ಭೇಟಿ ನೀಡಿದಾಗ ಅವರ ಜೀವನದಲ್ಲಿ ಮತ್ತಷ್ಟು ಬದಲಾವಣೆಗಳಾದವು. ಇದರಿಂದ ಆಕೆಗೆ ವಿದೇಶದಲ್ಲಿ ಸಿಗುವ ಅವಕಾಶಗಳ ಅರಿವಾಯಿತು.
ಜ್ಯೋತಿ ರೆಡ್ಡಿ, ಕಂಪ್ಯೂಟರ್ ಕೋರ್ಸ್‌ಗಳನ್ನು ಪೂರ್ತಿಗೊಳಿಸಿದರು. ನಂತರ ವಿದೇಶದಲ್ಲಿ ಕೆಲಸ ಮಾಡಲು ಅರ್ಹರಾದ ಕಾರಣ ಯುಎಸ್‌ಗೆ ತೆರಳಿದರು. ಆದರೆ ಆಕೆ ಇದಕ್ಕಾಗಿ ತನ್ನ ಹೆಣ್ಣು ಮಕ್ಕಳನ್ನು ಭಾರತದಲ್ಲಿ ಬಿಟ್ಟು ಹೋಗಬೇಕಾಯಿತು. ಆದರೆ ಯುಎಸ್‌ನಲ್ಲಿ ಅವರ ದಿನಗಳು ಸುಲಭವಾಗಿರಲ್ಲಿಲ್ಲ. ಪೆಟ್ರೋಲ್ ಪಂಪ್, ಬೇಬಿ ಸಿಟ್ಟರ್‌ನಲ್ಲಿ ಕೆಲಸ ಮಾಡಬೇಕಾಯ್ತು.
ಹಲವಾರು ದಿನಗಳು ಕಷ್ಟಪಟ್ಟ ನಂತರ ಮೊದಲ ಬಾರಿ ನೇಮಕಾತಿ ವೃತ್ತಿಪರರಾಗಿ ಕೆಲಸಕ್ಕೆ ಸೇರಿಕೊಂಡರು. 2021ರಲ್ಲಿ, 40,000 ಉಳಿತಾಯದೊಂದಿಗೆ ಅವಳು ತನ್ನ ಸ್ವಂತ ವ್ಯವಹಾರವಾದ ಕೀ ಸಾಫ್ಟ್‌ವೇರ್ ಪರಿಹಾರಗಳನ್ನು ಪ್ರಾರಂಭಿಸಿದಳು.
ಕಂಪನಿಯು ಕ್ರಮೇಣವಾಗಿ 15 ಮಿಲಿಯನ್ ವಹಿವಾಟು ಮತ್ತು ಅಂತಿಮವಾಗಿ 2017ರಲ್ಲಿ ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಯಿತು. ಪ್ರಸ್ತುತ ಜ್ಯೋತಿ ರೆಡ್ಡಿ, ಕೋಟಿ ಕೋಟಿ ಕಂಪೆನಿಗಳನ್ನು ಮುನ್ನಡೆಸುತ್ತಿದ್ದಾರೆ.