Natural toilet freshener: ನಿಮ್ಮ ಸ್ನಾನಗೃಹದಿಂದ ದುರ್ವಾಸನೆ ಬರುತ್ತಿದೆಯೇ?, ಇದನ್ನು ತೆಗೆದುಹಾಕಲು ನೀವು ಮಾರುಕಟ್ಟೆಯಿಂದ ದುಬಾರಿ ಕ್ಲೀನರ್‌ಗಳನ್ನು ಖರೀದಿಸುವ ಅಗತ್ಯವಿಲ್ಲ. 5 ಸುಲಭ ಮಾರ್ಗಗಳೊಂದಿಗೆ ಈ ವಾಸನೆಯನ್ನು ನೀವೇ ತೆಗೆದುಹಾಕಬಹುದು.
ಹವಮಾನ ಬದಲಾಗುತ್ತಿದೆ. ಅಡುಗೆಮನೆಯಿಂದ ಸ್ನಾನಗೃಹದವರೆಗೆ ಅದರ ಪರಿಣಾಮ ಎಲ್ಲೆಡೆ ಗೋಚರಿಸುತ್ತಿದೆ. ತಾಪಮಾನ ಹೆಚ್ಚು ಕಡಿಮೆಯಾದಂತೆ ತೇವಾಂಶವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸ್ನಾನಗೃಹದಲ್ಲಿ ಮತ್ತು ಶೌಚಾಲಯದ ಸೀಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಒಂದು ವೇಳೆ ಶಾಖ ಹೆಚ್ಚಾದರೆ ಶೌಚಾಲಯದಲ್ಲಿ ಅನೇಕ ರೀತಿಯ ಅಪಾಯಕಾರಿ ಅನಿಲಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ, ಇದು ತುಂಬಾ ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಮೋಡ್ ಸಿಡಿಯುವ ಪ್ರಕರಣಗಳು ಬೆಳಕಿಗೆ ಬರುತ್ತಿರುವುದನ್ನು ನೀವೆಲ್ಲ ನೋಡಿರಬಹುದು. ಇಂತಹ ಅವಘಡಗಳೆಲ್ಲಾ ಉಂಟಾಗುವುದೇ ಶಾಖದಿಂದಾಗಿ. ಇದರೊಂದಿಗೆ ಶೌಚಾಲಯದ ದುರ್ವಾಸನೆಯೂ ಹೆಚ್ಚಾಗಲು ಪ್ರಾರಂಭಿಸುತ್ತದೆ.
26
ಏರ್ ಫ್ರೆಶ್ನರ್ ಅಗತ್ಯವಿಲ್ಲ
ನಿಮ್ಮ ಶೌಚಾಲಯ ಮತ್ತು ಕಮೋಡ್ ನಿಂದ ಸಹ ಹೀಗೆ ದುರ್ವಾಸನೆ ಬರುತ್ತಿದ್ದರೆ ಇದನ್ನು ಹೋಗಲಾಡಿಸಲು ನೀವು ಮಾರುಕಟ್ಟೆಯಿಂದ ಏರ್ ಫ್ರೆಶ್ನರ್ ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿ ಇರುವ ಕೆಲವು ವಸ್ತುಗಳ ಸಹಾಯದಿಂದ ಶೌಚಾಲಯದಿಂದ ಬರುವ ವಾಸನೆಯನ್ನು ನಿಯಂತ್ರಿಸಬಹುದು. ಹಾಗಾದರೆ ಮತ್ತೇಕೆ ತಡ, ಶೌಚಾಲಯದ ದುರ್ವಾಸನೆಯನ್ನು ಹೇಗೆ ತೆಗೆದುಹಾಕುವುದು ಎಂದು ತಿಳಿಯೋಣ ಬನ್ನಿ...
36
ಕಿಟಕಿಗಳನ್ನು ತೆರೆದಿಡಿ
ಸ್ನಾನಗೃಹದಲ್ಲಿ ಗಾಳಿಯ ಪ್ರಸರಣದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಂದರೆ ಈ ಜಾಗದಲ್ಲಿ ಯಾವಾಗಲೂ ಕಿಟಕಿಗಳನ್ನು ತೆರೆದಿಡಿ ಮತ್ತು ಎಕ್ಸಾಸ್ಟ್ ಫ್ಯಾನ್ ಅನ್ನು ಆನ್‌ನಲ್ಲಿ ಇರಿಸಿ. ಇದು ತೇವಾಂಶ ಮತ್ತು ದುರ್ವಾಸನೆಯನ್ನು ದೂರವಿಡುತ್ತದೆ.
ಕಮೋಡ್‌ನಿಂದ ಬರುವ ವಾಸನೆಗೆ ನಿಜವಾದ ಕಾರಣ ಕೊಳಕು. ಇಂತಹ ಸಮಯದಲ್ಲಿ ವಾರಕ್ಕೆ ಕನಿಷ್ಠ ಎರಡು ಬಾರಿ ಶೌಚಾಲಯದ ಸೀಟನ್ನು ಆಳವಾಗಿ ಸ್ವಚ್ಛಗೊಳಿಸಿ. ಇದಕ್ಕಾಗಿ, ನೀವು ಬಿಸಿನೀರು ಮತ್ತು ಅಡುಗೆ ಸೋಡಾದ ದ್ರಾವಣವನ್ನು ಬಳಸಬಹುದು. ಇದು ಬ್ಯಾಕ್ಟೀರಿಯಾಗಳನ್ನು ಸಹ ದೂರವಿಡುತ್ತದೆ. ಸಿಂಕ್ ಮತ್ತು ನೆಲದ ಚರಂಡಿಗಳನ್ನು ಸಹ ಸ್ವಚ್ಛಗೊಳಿಸುತ್ತದೆ.
56
ಅಡುಗೆ ಸೋಡಾ, ವಿನೆಗರ್, ನಿಂಬೆಹಣ್ಣು
ಶೌಚಾಲಯದ ವಾಸನೆಯನ್ನು ತೆಗೆದುಹಾಕಲು ಅಡುಗೆ ಸೋಡಾ ಮತ್ತು ವಿನೆಗರ್ ದ್ರಾವಣವನ್ನು ತಯಾರಿಸಿ. ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರಲ್ಲಿ ಹಾಕಿ. ಈ ದ್ರಾವಣವು ನೈಸರ್ಗಿಕ ವಾಸನೆಯನ್ನು ತೆಗೆದುಹಾಕುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದು ವಾಸನೆಯನ್ನು ಹೀರಿಕೊಳ್ಳುತ್ತದೆ. ರಾತ್ರಿ ಮಲಗುವ ಮೊದಲು, ಈ ದ್ರಾವಣವನ್ನು ಶೌಚಾಲಯದ ಸೀಟಿನ ಮೇಲೆ ಹಾಕಿ ಬಿಡಿ. ಇದು ಕಮೋಡ್‌ನ ವಾಸನೆಯನ್ನು ಸಹ ತೆಗೆದುಹಾಕುತ್ತದೆ.
66
ಸಾರಭೂತ ತೈಲ ದಿ ಬೆಸ್ಟ್
ಸಾರಭೂತ ತೈಲಗಳು ಕೆಟ್ಟ ವಾಸನೆಯನ್ನು ತೆಗೆದುಹಾಕುವುದಲ್ಲದೆ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿವೆ. ಕೆಟ್ಟ ವಾಸನೆಯನ್ನು ತೆಗೆದುಹಾಕಲು ನೀವು ಲೆಮನ್ ಗ್ರಾಸ್, ಲ್ಯಾವೆಂಡರ್, ಪುದೀನಾ ಅಥವಾ ಟೀ ಟ್ರೀ ಆಯಿಲ್ ಸಹ ಬಳಸಬಹುದು. ಇನ್ನು ಕಮೋಡ್‌ನಿಂದ ಬರುವ ವಾಸನೆಯಿಂದಲೂ ನೀವು ಬೇಸತ್ತಿದ್ದರೆ ನಿಂಬೆ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಸ್ಪ್ರೇ ತಯಾರಿಸಿ. ಅದನ್ನು ಶೌಚಾಲಯದಾದ್ಯಂತ ಸಿಂಪಡಿಸಿ. ಇದರ ನಂತರ, ಹುರಿದ ಕಾಫಿ ಬೀಜಗಳನ್ನು ಒಂದು ಬಟ್ಟಲಿನಲ್ಲಿ ಬಿಡಿ. ಇದು ಎಂಥ ಕೆಟ್ಟ ವಾಸನೆಯನ್ನು ಚೆನ್ನಾಗಿ ತೆಗೆದುಹಾಕುತ್ತದೆ.