ದುಬಾರಿ ಆಭರಣ ಧರಿಸೋದ್ರಲ್ಲಿ ಇಶಾ, ನೀತಾ ಅಂಬಾನಿಗೇ ಸ್ಪರ್ಧೆ ಒಡ್ಡಿದ ಪ್ರಿಯಾಂಕಾ ಚೋಪ್ರಾ! ಈ ನೆಕ್ಲೇಸ್ ಬೆಲೆ ಇಷ್ಟೊಂದಾ!

Published : May 23, 2024, 04:00 PM IST

ರೋಮ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಭಾರೀ ದುಬಾರಿ ನೆಕ್ಲೇಸ್ ಧರಿಸಿದ್ದು, ಈ 140-ಕ್ಯಾರೆಟ್ ಡೈಮಂಡ್ ನೆಕ್ಲೇಸ್ ತಯಾರಿಸಲು 2,800 ಗಂಟೆ ತಗುಲಿದೆ.

PREV
111
ದುಬಾರಿ ಆಭರಣ ಧರಿಸೋದ್ರಲ್ಲಿ ಇಶಾ, ನೀತಾ ಅಂಬಾನಿಗೇ ಸ್ಪರ್ಧೆ ಒಡ್ಡಿದ ಪ್ರಿಯಾಂಕಾ ಚೋಪ್ರಾ! ಈ ನೆಕ್ಲೇಸ್ ಬೆಲೆ ಇಷ್ಟೊಂದಾ!

ರೋಮ್‌ನಲ್ಲಿ ನಡೆದ ಬಲ್ಗಾರಿ ಡೈಮಂಡ್ ಜ್ಯುವೆಲ್ಲರಿ ಈವೆಂಟ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಶಾರ್ಟ್ ಹೇರ್ ಹಾಗೂ ಧರಿಸಿದ್ದ ದುಬಾರಿ ವಜ್ರದ ನೆಕ್ಲೇಸ್ ಕಾರಣದಿಂದ ಎಲ್ಲರ ಗಮನ ಸೆಳೆದರು.

211

ಚಿತ್ರಗಳು ಮತ್ತು ವೀಡಿಯೊಗಳಲ್ಲಿ, ಅವರು ಆಫ್ ಶೋಲ್ಡರ್ ಕ್ರೀಮ್ ಮತ್ತು ಕಪ್ಪು ಉಡುಪು ಧರಿಸಿದ್ದು, ಶಾರ್ಟ್ ಹೇರ್‌ಕಟ್‌ನಲ್ಲಿ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ.

311

ನಟಿಯ ಈ ಬಾಬ್ ಕಟ್, ಆಕೆ ಧರಿಸಿದ್ದ 140-ಕ್ಯಾರೆಟ್ ಡೈಮಂಡ್ ನೆಕ್ಲೇಸ್ ‌ನ್ನು ಅದ್ಬುತವಾಗಿ ಪ್ರದರ್ಶಿಸಿದೆ. ಇದೀಗ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಈ ನೆಕ್ಲೇಸ್ ಕುರಿತ ಚರ್ಚೆ ಜೋರಾಗಿ ನಡೆಯುತ್ತದೆ.
 

411

ಇದಕ್ಕೆ ಕಾರಣ ಈ ನೆಕ್ಲೇಸ್ ಬೆಲೆ. ಸಾಮಾನ್ಯವಾಗಿ ಅಂಬಾನಿ ಕುಟುಂಬದ ಮಹಿಳೆಯರು ದುಬಾರಿ ಅಭರಣಗಳನ್ನು ಧರಿಸಿ, ಅವುಗಳ ಬೆಲೆಯ ಕಾರಣದಿಂದ ಸುದ್ದಿಯಲ್ಲಿರುತ್ತಿದ್ದರು. ಈ ಬಾರಿ ಪ್ರಿಯಾಂಕಾ ಚೋಪ್ರಾ ಸರದಿ.

511

ಪೀಸೀ ಧರಿಸಿದ್ದ ಬಲ್ಗಾರಿ ಸರ್ಪೆಂಟಿ ಎಟರ್ನಾ ನೆಕ್ಲೇಸ್ ತಯಾರಿಕೆಗೆ  2,800 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಅದರ ತಯಾರಿಕಾ ಕಂಪನಿ ಬಲ್ಗಾರಿ ಹೇಳಿದೆ. 

611

ವೋಗ್ ಪ್ರಕಾರ, 140-ಕ್ಯಾರೆಟ್‌ನ ಈ ಡೈಮಂಡ್ ನೆಕ್ಲೇಸ್ 43 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ, ಭಾರತೀಯ ರುಪಾಯಿಯಲ್ಲಿ ಇದರ ಮೌಲ್ಯ 350 ಕೋಟಿ ಆಗಿದೆ.

711

ಇದು ಬಲ್ಗಾರಿಯು ಇದುವರೆಗೂ ರಚಿಸಿದ ತನ್ನೆಲ್ಲ ಆಭರಣಗಳಲ್ಲೇ ಅತಿ ದುಬಾರಿಯದಾಗಿದ್ದು, ನೋಡಲು ಕೂಡಾ ಅಸಾಮಾನ್ಯವಾಗಿದೆ. ಇದನ್ನು ಕಂಪನಿಯು ಮಾಸ್ಟರ್‌ಪೀಸ್ ಎಂದು ಹೇಳಿಕೊಂಡಿದೆ.

811

ಅಂದ ಹಾಗೆ ಪ್ರಿಯಾಂಕಾ ಚೋಪ್ರಾ ಈ ನೆಕ್ಲೇಸ್ ಖರೀದಿಸಿಲ್ಲ. ಬದಲಿಗೆ, ಬಲ್ಗಾರಿ ಆಭರಣಗಳ ಜಾಗತಿಕ ಅಂಬಾಸಿಡರ್ ಆಗಿ ಪ್ರದರ್ಶನಕ್ಕಾಗಿ ಧರಿಸಿದ್ದಾಳೆ.

911

ಅಂದ ಮೇಲೆ ಈ ಆಭರಣ ಸಧ್ಯದಲ್ಲೇ ನೀತಾ ಅಂಬಾನಿ ಜುಲೈನಲ್ಲಿ ಮನೆಗೆ ಬರಲಿರುವ ಸೊಸೆಗೆ ಉಡುಗೊರೆಯಾಗಿ ಕೊಟ್ಟರೂ ಅಚ್ಚರಿ ಇಲ್ಲ!

1011

ಏತನ್ಮಧ್ಯೆ, ನಟನೆಯ ಮುಂಭಾಗದಲ್ಲಿ, ಪ್ರಿಯಾಂಕಾ ಇತ್ತೀಚೆಗೆ ಹೆಚ್ಚು ನಿರೀಕ್ಷಿತ ಚಿತ್ರ ಹೆಡ್ಸ್ ಆಫ್ ಸ್ಟೇಟ್‌ನ ಚಿತ್ರೀಕರಣವನ್ನು ಮುಗಿಸಿದರು. ಇದು ಆಕ್ಷನ್ ಕಾಮಿಡಿಯಾಗಿದೆ.
 

1111

ಇದಲ್ಲದೇ, ಫ್ರಾಂಕ್ ಇ ಫ್ಲವರ್ಸ್ ನಿರ್ದೇಶಿಸಿದ ದಿ ಬ್ಲಫ್‌ನಲ್ಲಿ ಕೂಡಾ ನಟಿ ಕಾಣಿಸಿಕೊಳ್ಳಲಿದ್ದಾಳೆ. ಬಾಲಿವುಡ್‌ನಲ್ಲಿ, ಅವರು ಕೊನೆಯ ಬಾರಿಗೆ 2019 ರಲ್ಲಿ ಬಿಡುಗಡೆಯಾದ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಫರ್ಹಾನ್ ಅಖ್ತರ್ ಎದುರು ಕಾಣಿಸಿಕೊಂಡರು.

Read more Photos on
click me!

Recommended Stories