ಪ್ರತಿ ಹೆಣ್ಣೂ ತಾಯಿಯಾಗಲು ಹಂಬಲಿಸುತ್ತಾಳೆ. ಆದರೆ, ಒಮ್ಮೆ ತಾಯಿಯಾದ ಬಳಿಕ ನಿದ್ದೆಯೂ ಸರಿಯಿಲ್ಲದೆ, ಹಗಲೂ ರಾತ್ರಿ ಮಗುವಿನ ಕಾಳಜಿ ಮಾಡುವುದು, ಮುಂಚಿನಂತೆ ಹೊರಗೆ ಓಡಾಡಲಾಗದಿರುವುದು, ಜೊತೆಗೆ ದೈಹಿಕ ಸಮಸ್ಯೆಗಳು ಆಕೆಯನ್ನು ಹೈರಾಣಾಗಿಸುತ್ತವೆ. ಇದೊಂತೂ ಒತ್ತಡ ಎನಿಸಲಾರಂಭಿಸುತ್ತದೆ.
ಪ್ರತಿ ಮಹಿಳೆ ಮೊದಲ ಬಾರಿಗೆ ತಾಯಿಯಾದ ನಂತರ ಸಂತೋಷವನ್ನು ಅನುಭವಿಸುತ್ತಾಳೆ, ಆದರೆ ಇದರೊಂದಿಗೆ ದೊಡ್ಡ ಜವಾಬ್ದಾರಿಗಳು ಅವಳ ಮೇಲೆ ಬೀಳುತ್ತವೆ. ಇದಲ್ಲದೇ ಸವಾಲುಗಳೂ ಹೆಚ್ಚುತ್ತವೆ. ವಾಸ್ತವವಾಗಿ, ಗರ್ಭಿಣಿಯು ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ದುರ್ಬಲವಾಗಿರುತ್ತಾಳೆ.
ಮಗುವಿನ ಜನನದ ನಂತರ, ಹಾರ್ಮೋನುಗಳ ಅಸಮತೋಲನದ ಜೊತೆಗೆ, ನವಜಾತ ಶಿಶುವಿನ ಆರೈಕೆಯ ಒತ್ತಡವು ಹೆಚ್ಚಾಗುತ್ತದೆ. ಇದಲ್ಲದೇ ಜನರ ನಿರೀಕ್ಷೆಗಳೂ ಹೆಚ್ಚಾಗುತ್ತವೆ ಮತ್ತು ದೇಹದಲ್ಲಾಗುವ ಬದಲಾವಣೆಗಳ ಅರಿವೂ ಇರುವುದಿಲ್ಲ. ಈ ಕಾರಣದಿಂದಾಗಿ, ಈ ಅವಧಿಯು ಅವರಿಗೆ ತುಂಬಾ ಕಷ್ಟಕರವಾಗಿದೆ. ಹಾಗಾಗಿ ನೀವು ಮಾತೃತ್ವವನ್ನು ಆನಂದಿಸಲು ಬೇಕಾದ ಸಲಹೆಗಳು ಇಲ್ಲಿವೆ..
ತಪ್ಪುಗಳು ವೈಫಲ್ಯವಲ್ಲ
ಹೆರಿಗೆಯ ನಂತರದ ಆರಂಭಿಕ ತಿಂಗಳು ಹೊಸ ತಾಯಿಗೆ ತುಂಬಾ ಒತ್ತಡವನ್ನುಂಟು ಮಾಡುತ್ತದೆ. ಮಕ್ಕಳ ಆರೈಕೆಯಿಂದ ಹಿಡಿದು ಮನೆ ಶುಚಿಗೊಳಿಸುವವರೆಗೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಅವಳು ಬಯಸುವುದಿಲ್ಲ. ಆದಾಗ್ಯೂ, ಮಗುವಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವುದು ಅವಳ ಗುರಿಯಾಗಿರುತ್ತದೆ. ಆದರೆ ಈ ಎಲ್ಲ ಪ್ರಕ್ರಿಯೆಯಲ್ಲಿ ಅವಳು ತನ್ನ ಮೇಲೆ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಾಳೆ.
ಅವಳು ತಪ್ಪುಗಳನ್ನು ಸಹ ಮಾಡುತ್ತಾಳೆ. ನೀವು ಸಹ ಹೊಸ ತಾಯಿಯಾಗಿದ್ದರೆ, ಯಾವಾಗಲೂ ಪರಿಪೂರ್ಣರಾಗಲು ಪ್ರಯತ್ನಿಸಬೇಡಿ. ಮೊದಲಿನಂತೆ ನಿಮ್ಮ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಿ. ಮಗು ಅಳುತ್ತಿದ್ದರೆ ಮತ್ತು ನೀವು ಅವನನ್ನು ಶಾಂತಗೊಳಿಸಲು ಸಾಧ್ಯವಾಗದಿದ್ದರೆ, ಅದನ್ನು ವೈಫಲ್ಯವೆಂದು ನೋಡಬೇಡಿ. ನಿಧಾನವಾಗಿ ಮಗುವನ್ನು ನಿಭಾಯಿಸುವ ಹೊಣೆಗೆ ಹೊಂದಿಕೊಳ್ಳಲು ಸಮಯಾಕಾಶವನ್ನು ಸ್ವತಃ ಕೊಟ್ಟುಕೊಳ್ಳಿ.
ಮಗು ನೋಡಿಕೊಳ್ಳುವವರಿದ್ದರೆ ಅವರ ಜೊತೆ ಜವಾಬ್ದಾರಿ ಹಂಚಿಕೊಳ್ಳಿ
ಮನೆಯಲ್ಲಿ ಮತ್ಯಾರೋ ಮಗುವನ್ನು ನೋಡಿಕೊಳ್ಳುತ್ತಾರೆಂದಾದಾಗ ಹಲವು ಹೊಸ ತಾಯಿಯರು ಕಂಗಾಲಾಗುತ್ತಾರೆ. ತಮ್ಮ ಮಗು ತಮಗಿಂತ ಹೆಚ್ಚು ಅವರನ್ನು ಹಚ್ಚಿಕೊಂಡರೆ ಎಂಬ ದಿಗಿಲು ಅನುಭವಿಸುತ್ತಾರೆ. ಆದರೆ, ಮಗುವಿಗೆ ಯಾವತ್ತೂ ತಾಯಿಯೇ ಮೊದಲಾಗಿರುತ್ತಾಳೆ ಎಂಬುದನ್ನು ನೆನಪಿಡಿ ಮತ್ತು ಮಗುವನ್ನು ಆಡಿಸಲು ಮನೆ ಮಂದಿಗೆಲ್ಲ ಅವಕಾಶ ಕೊಡಿ.
ಬಾಣಂತನ
ಹಿರಿಯರಿಂದ ಚೆನ್ನಾಗಿ ಬಾಣಂತನ ಮಾಡಿಸಿಕೊಳ್ಳಿ. ವಿಶೇಷವಾಗಿ ಆ ಮಸಾಜ್, ಸ್ನಾನ ಎಲ್ಲವೂ ನಿಮ್ಮ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡುತ್ತವೆ. ಇಷ್ಟಕ್ಕೂ ಬಾಣಂತನ ಮುಗಿದ ನಂತರ ಯಾರೂ ನಿಮಗೆ ಮಸಾಜ್ ಮಾಡುವುದಾಗಲೀ, ಸ್ನಾನ ಮಾಡಿಸಲಾಗಲೀ ಬರುವುದಿಲ್ಲ. ಹಾಗಾಗಿ, ಯಾವಾಗ ಎಲ್ಲ ಕಾಳಜಿ ವಹಿಸುತ್ತಾರೋ, ಅದನ್ನು ಪೂರ್ಣ ಮನಸ್ಸಿನಿಂದ ಆನಂದಿಸಿ.
ಉದ್ವೇಗವು ನಿಮ್ಮನ್ನು ಆವರಿಸಲು ಬಿಡಬೇಡಿ
ಹೆರಿಗೆಯ ನಂತರ, ತನ್ನ ಮಗುವಿನೊಂದಿಗೆ ಸಮಯ ಕಳೆಯುವಾಗ ಅವಳು ಸಂತೋಷವಾಗಿರುತ್ತಾಳೆ, ಆದರೆ ಅನೇಕ ವಿಷಯಗಳ ಬಗ್ಗೆ ಯೋಚಿಸುವಾಗ ಅವಳು ಒತ್ತಡಕ್ಕೊಳಗಾಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೈದ್ಯರು ಅಥವಾ ಸ್ನೇಹಿತರೊಂದಿಗೆ ಮಾತನಾಡಿ, ಇದು ನಿಮಗೆ ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ. ಮಗು ಮಲಗಿದಾಗ ಮಲಗಿಬಿಡಿ.
ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ಪ್ರತಿ ಮಹಿಳೆಯ ದೇಹದಲ್ಲಿ ಬಹಳಷ್ಟು ಬದಲಾವಣೆಗಳು ನಡೆಯುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ತೂಕ ತುಂಬಾ ಹೆಚ್ಚಾಗುತ್ತದೆ, ಇದರಿಂದಾಗಿ ಸೌಂದರ್ಯವು ಕಡಿಮೆಯಾಗುತ್ತದೆ ಮತ್ತು ಆರೋಗ್ಯವೂ ಹದಗೆಡುತ್ತದೆ. ಅದರ ಬಗ್ಗೆ ಸ್ವಲ್ಪವೂ ಯೋಚಿಸಬೇಡಿ. ಮಗು ಹಾಲು ಕುಡಿದಂತೆಲ್ಲ ಸಾಕಷ್ಟು ತೂಕ ಕಡಿಮೆಯಾಗುತ್ತಾ ಹೋಗುತ್ತದೆ.
ಕೆಲ ತಿಂಗಳು ಕಳೆದ ಮೇಲೆ ಯೋಗ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ಮಗುವನ್ನೂ ನಿಮ್ಮ ಚಟುವಟಿಕೆಗಳ ಸಮಯದಲ್ಲಿ ಜೊತೆಗಿರಿಸಿಕೊಳ್ಳಿ.