ಗರ್ಭಾವಸ್ಥೆಯಲ್ಲಿ Weight ಹೆಚ್ಚಾಗೋದು ಎಷ್ಟು ಕಾಮನ್?

Published : Sep 02, 2022, 05:44 PM IST

ಗರ್ಭಧಾರಣೆಯು ಯಾವುದೇ ಮಹಿಳೆಗೆ ತುಂಬಾ ಸೂಕ್ಷ್ಮ ಮತ್ತು ಪ್ರಮುಖ ಸಮಯವಾಗಿದೆ. ಒಬ್ಬ ಗರ್ಭಿಣಿ ಮಹಿಳೆ ತನ್ನೊಳಗೆ ಮಗುವನ್ನು ಬೆಳೆಸುತ್ತಾಳೆ, ಅದು ಒಂಬತ್ತು ತಿಂಗಳ ನಂತರ ಜಗತ್ತಿಗೆ ಬರುತ್ತೆ. ಈ ಸಮಯದಲ್ಲಿ ಖುಷಿ ಜೊತೆಗೆ, ಏನೋ ಒಂದು ರೀತಿಯ ಭಯ ಆವರಿಸಿರುತ್ತೆ. ಗರ್ಭಾವಸ್ಥೆಯಲ್ಲಿ ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳೂ ಸಹ ಮೂಡುತ್ತವೆ. ಮಗು ಹೇಗೆ ಬೆಳೆಯುತ್ತೆ? ಆರೋಗ್ಯವಾಗಿರುತ್ತಾ? ಇಲ್ವಾ? ನಾನೇನು ತಿನ್ನಬೇಕು, ತಿನ್ನಬಾರದು ಎನ್ನುವ ಬಗ್ಗೆ ಸಾಲು ಸಾಲು ಪ್ರಶ್ನೆಗಳಿರುತ್ತವೆ. ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಸಹ ಉಂಟಾಗುತ್ತವೆ. ಈ ಬದಲಾವಣೆಗಳು ಗರ್ಭಿಣಿ ಮಹಿಳೆಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ.

PREV
17
ಗರ್ಭಾವಸ್ಥೆಯಲ್ಲಿ Weight ಹೆಚ್ಚಾಗೋದು ಎಷ್ಟು ಕಾಮನ್?

ಗರ್ಭಿಣಿ ಮಹಿಳೆಯ(Pregnant women) ತೂಕ ಹೆಚ್ಚಾಗೋದು ಸಾಮಾನ್ಯ. ಆದರೆ ಪ್ರತಿಯೊಬ್ಬ ಮಹಿಳೆಯ ಮನಸ್ಸಿನಲ್ಲಿ ಉಳಿಯುವ ಒಂದು ಪ್ರಶ್ನೆಯೆಂದರೆ ತೂಕ ಹೆಚ್ಚಳವು ಎಷ್ಟು ಸರಿ? ಗರ್ಭಧಾರಣೆಯಲ್ಲಿ ಅಧಿಕ ತೂಕದ ಹೆಚ್ಚಳವು ಪ್ರಸವದ (Deliver) ಸಮಯದಲ್ಲಿ ತೊಂದರೆಯನ್ನು ಉಂಟುಮಾಡಬಹುದೇ? ಎಷ್ಟು ತೂಕ ಹೆಚ್ಚಿಸಿಕೊಳ್ಳೋದು ಉತ್ತಮ. ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ. ನಿಮ್ಮ ಮನಸಿನಲ್ಲಿಯೂ ಈ ಪ್ರಶ್ನೆ ಮೂಡಿದ್ದರೆ, ಇಲ್ಲಿದೆ ನಿಮಗೆ ಸರಿಯಾದ ಸಲಹೆಗಳು. 

27

ಮೊದಲ ಬಾರಿಗೆ ತಾಯಂದಿರಾಗಲಿರುವ ಮಹಿಳೆಯರು ತೂಕ ಹೆಚ್ಚಳದ ಬಗ್ಗೆ ಚಿಂತಿತರಾಗುತ್ತಾರೆ ಮತ್ತು ತಮ್ಮ ಆಹಾರವನ್ನು(Food) ನಿಯಂತ್ರಿಸಲು ಪ್ರಾರಂಭಿಸುತ್ತಾರೆ. ಆದರೆ ಆಹಾರ ಅಥವಾ ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸೋದು ಗರ್ಭಿಣಿಯರಿಗೆ ಹಾನಿಕಾರಕ. ಆದ್ದರಿಂದ ಮೊದಲನೆಯದಾಗಿ, ಗರ್ಭಿಣಿ ಮಹಿಳೆಗೆ ತೂಕ ಹೆಚ್ಚಳ ಎಷ್ಟು ಸಾಮಾನ್ಯ? ಡೆಲಿವರಿ ಸಮಯದಲ್ಲಿ ತೂಕ ಹೆಚ್ಚಳವು ಸಮಸ್ಯೆಗಳನ್ನು ಉಂಟುಮಾಡಬಹುದೇ? ಇವುಗಳ ಬಗ್ಗೆ ತಿಳಿಯೋಣ…

37
ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳಕ್ಕೆ(Weight gain) ಕಾರಣಗಳು ಯಾವುವು?

ಗರ್ಭಾವಸ್ಥೆಯಲ್ಲಿ ಮಹಿಳೆಯ ತೂಕ ಹೆಚ್ಚಾಗಲು ಒಂದು ಕಾರಣವೆಂದರೆ ಮಗುವಿನ ತೂಕ ತಾಯಿಯ ದೇಹದಲ್ಲಿ ಸೇರಿಸಲಾಗುತ್ತೆ. ಅವಳಿ ಮಕ್ಕಳಿದ್ದರೆ, 15 ರಿಂದ 20 ಕೆಜಿ ತೂಕ ಹೆಚ್ಚಾಗೋದು ಸಾಮಾನ್ಯ. ಆದುದರಿಂದ ತೂಕ ಹೆಚ್ಚಾದರೆ ಅದರ ಬಗ್ಗೆ ಹೆಚ್ಚು ಯೋಚನೆ ಮಾಡುವ ಅಗತ್ಯ ಇಲ್ಲ. ಇದು ಸಾಮಾನ್ಯ.

47

ಗರ್ಭಿಣಿ ಮಹಿಳೆಯ ಸ್ತನದ(Breast) ಗಾತ್ರದಲ್ಲಿ ಹೆಚ್ಚಳ, ಪ್ಲಾಸೆಂಟಾ ಗಾತ್ರದಲ್ಲಿ ಹೆಚ್ಚಳ, ಗರ್ಭಾಶಯದ ಗಾತ್ರದಲ್ಲಿ ಹೆಚ್ಚಳ ಮತ್ತು ದೇಹದಲ್ಲಿ ಹೆಚ್ಚುವರಿ ರಕ್ತ ಮತ್ತು ದ್ರವದ ರಚನೆಯಿಂದಾಗಿ ಸಹ, ತೂಕ ಹೆಚ್ಚಳವೂ ಪ್ರಾರಂಭವಾಗುತ್ತೆ. ಇದು ಸ್ವಾಭಾವಿಕ ಕ್ರಮ. ಇದರಿಂದ ಮಹಿಳೆಗೆ ಯಾವುದೆ ರೀತಿಯ ತೊಂದರೆ ಆಗೋದಿಲ್ಲ. 

57
ಗರ್ಭಿಣಿ ಯಾವಾಗ ತೂಕ ಹೆಚ್ಚಾಗುತ್ತೆ?

ಗರ್ಭಧಾರಣೆಯ(Pregnancy) ಮೊದಲ ಮೂರು ತಿಂಗಳಲ್ಲಿ ಮಹಿಳೆ ಸಾಮಾನ್ಯ ತೂಕವನ್ನು ಹೊಂದಿರುತ್ತಾಳೆ, ಆದರೆ ನಂತರ ಪ್ರತಿ ವಾರ ಕಾಲು ಅಥವಾ 1 ಕೆಜಿವರೆಗೆ ಹೆಚ್ಚಾಗಬಹುದು. ಒಂದು ವೇಳೆ ನೀವು ಅಧಿಕ ತೂಕ ಹೊಂದಿದರೆ ಆ ಸಮಯದಲ್ಲಿ ಎಚ್ಚರಿಕೆ ವಹಿಸೋದು ತುಂಬಾನೆ ಮುಖ್ಯ. 

67
ಗರ್ಭಧಾರಣೆಯ ಸಮಯದಲ್ಲಿ ಎಷ್ಟು ತೂಕ ಹೆಚ್ಚಾಗೋದು ಸಾಮಾನ್ಯ?

ಗರ್ಭಿಣಿ ಮಹಿಳೆಯ ಸಾಮಾನ್ಯ ತೂಕ 12 ರಿಂದ 16 ಕೆಜಿಗೆ ಹೆಚ್ಚಾಗಬಹುದು. ಗರ್ಭಧಾರಣೆಗೆ ಮೊದಲು ತೂಕ ಹೆಚ್ಚಿಸಿಕೊಂಡ ಮಹಿಳೆಯರು ಗರ್ಭಾವಸ್ಥೆಯಲ್ಲಿ 16 ಕೆ.ಜಿ.ವರೆಗೆ ತೂಕ ಹೆಚ್ಚಿಸಿಕೊಳ್ಳಬಹುದು.  

77

ಆರೋಗ್ಯವಂತ ಮಹಿಳೆಯರು ಸುಮಾರು 12 ಕೆಜಿ ತೂಕ ಹೆಚ್ಚಾಗೋ ಸಾಧ್ಯತೆಯಿದೆ. ಆರೋಗ್ಯವಂತ ತೂಕ ಹೆಚ್ಚಳವು ತಾಯಿ, ಮಗು ಇಬ್ಬರಿಗೂ ಒಳ್ಳೆಯದು. ಒಂದು ವೇಳೆ ಅವಳಿ ಮಕ್ಕಳಲ್ಲದೇ ಇದ್ದಾಗ ನಿಮ್ಮ ತೂಕವು 16 ಕೆ.ಜಿ.ಕ್ಕಿಂತ ಹೆಚ್ಚಾದರೆ, ಆ ಸಮಯದಲ್ಲಿ ನೀವು ವೈದ್ಯರಲ್ಲಿ ಈ ಬಗ್ಗೆ ಕೇಳಿ, ಸಂಶಯ ಪರಿಹರಿಸಿಕೊಳ್ಳುವುದು ಮತ್ತು ಅದಕ್ಕಾಗಿ ಚಿಕಿತ್ಸೆಗಳ(Treatment) ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. 
 

Read more Photos on
click me!

Recommended Stories