ಹಿಂದೂ ಧರ್ಮದಲ್ಲಿ, ಅಂಗಳ ಅಥವಾ ಬಾಗಿಲಿಗೆ ರಂಗೋಲಿ ಬಿಡಿಸುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಮನೆಯ ಸಂತೋಷ ಮತ್ತು ಸಮೃದ್ಧಿಯೊಂದಿಗೆ (happiness and prosperity) ಸಂಬಂಧ ಹೊಂದಿದೆ. ಹಬ್ಬಗಳ ಸಂದರ್ಭದಲ್ಲಿ ರಂಗೋಲಿಯಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಆದರೆ ಅದರ ಮಹತ್ವವು ಅಲಂಕಾರ ಅಥವಾ ಧಾರ್ಮಿಕ ಮಟ್ಟದಲ್ಲಿ ಮಾತ್ರವಲ್ಲ, ವೈಜ್ಞಾನಿಕ ಮಟ್ಟದಲ್ಲಿಯೂ ಇದೆ. ರಂಗೋಲಿಯನ್ನು ಬಿಡಿಸುವುದರಿಂದ ಆಗುವ 5 ಪ್ರಯೋಜನಗಳು ಮತ್ತು ಯಾವ ರೀತಿಯ ರಂಗೋಲಿಯನ್ನು ಮನೆಯಲ್ಲಿ ಹಾಕಬಹುದು ಅನ್ನೋದನ್ನು ನೋಡೋಣ.