ಪ್ರತಿ ಮಹಿಳೆಯೂ ತಿಳಿದಿರಲೇಬೇಕಾದ 3 ಆರೋಗ್ಯ ರಹಸ್ಯಗಳು!

First Published | Jun 22, 2023, 4:16 PM IST

ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳಿವೆ, ಅವುಗಳ ಬಗ್ಗೆ ಸರಿಯಾದ ಮಾಹಿತಿ ಬಹಳ ಮುಖ್ಯ. ಯಾರ್ಯಾರೋ ಹೇಳಿದ ಕೆಲವು ಮಾಹಿತಿಗಳನ್ನು ನಂಬಿ, ಅದನ್ನೆ ಇವತ್ತೂ ಅನುಸರಿಕೊಂಡು ಬರೋದು ಸಮಸ್ಯೆಗಳಿಗೆ ಕಾರಣವಾಗಬಹುದು. 
 

ನಮ್ಮ ದೊಡ್ಡ ಆಸ್ತಿ ಅಂದ್ರೆ ಅದು ಆರೋಗ್ಯಕರ ದೇಹ. ನಾವು ಆರೋಗ್ಯಕರವಾಗಿಲ್ಲದಿದ್ದರೆ, ಯಾವುದೇ ಕೆಲಸವನ್ನೂ ಸರಿಯಾಗಿ ಮಾಡಲು ಸಾಧ್ಯವಾಗೋದಿಲ್ಲ. ಆರೋಗ್ಯವಾಗಿರಲು, ನಮ್ಮ ದೇಹ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆರೋಗ್ಯದ (women health) ಬಗ್ಗೆ ಮಾತನಾಡೋದಾದ್ರೆ, ಮಹಿಳೆಯರದ್ದು ಪುರುಷರಿಗಿಂತ ಹೆಚ್ಚು ಸಂಕೀರ್ಣ. ಆದ್ದರಿಂದ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸೋದು ತುಂಬಾ ಮುಖ್ಯ. 

ಆರೋಗ್ಯವಾಗಿರಲು ಮಹಿಳೆಯರು ಏನು ಮಾಡಬೇಕು, ಯಾವ ವಿಷಯಗಳನ್ನು ಅವಾಯ್ಡ್ ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ನೀವು ಬಹಳಷ್ಟು ಮಾಹಿತಿಗಳನ್ನು ತಿಳಿದಿದ್ದೀರಿ ಅಲ್ವಾ?. ಆದರೆ ನೀವು ಕೇಳಿರುವ ಎಲ್ಲಾ ವಿಷಯಗಳು ನಿಜಾ ಅಲ್ಲ. ಅವುಗಳನ್ನು ನಂಬಿ ನೀವು ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದೀರಿ ಅಷ್ಟೇ. ಹಾಗಿದ್ರೆ ಬನ್ನಿ ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಬೇಕಾದ ಆರೋಗ್ಯಕರ ಸೂತ್ರದ ಬಗ್ಗೆ ತಿಳಿಯೋಣ. 

Tap to resize

ಕಾರ್ಬೋಹೈಡ್ರೇಟ್  
ಇತ್ತೀಚೆಗೆ ಜನರು ತಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್ ಗಳನ್ನು ತೆಗೆದು ಹಾಕಲು ಪ್ರಾರಂಭಿಸಿದ್ದಾರೆ. ಆದರೆ ನಿಮಗೆ ತಿಳಿದಿರಲಿ, ಆರೋಗ್ಯಕರ ಆಹಾರದಲ್ಲಿ ಕಾರ್ಬೋಹೈಡ್ರೇಟ್ (carbohydrate) ಸೇರಿಸುವುದು ಮುಖ್ಯ. ಯಾಕಂದ್ರೆ ನಮ್ಮ ದೇಹ ಆರೋಗ್ಯದಿಂದ ಇರಬೇಕು ಅನ್ನೋದಾದ್ರೆ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಬೇಕೇ ಬೇಕು. 

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ತೂಕ ಇಳಿಸಿಕೊಳ್ಳಲು ಕಾರ್ಬೋಹೈಡ್ರೇಟ್ಸ್ ಅವೈಡ್ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಕಾರ್ಬೋಹೈಡ್ರೇಟ್ಸ್ ಆರೋಗ್ಯಕರವಲ್ಲ ಎಂದು ನಂಬುತ್ತಾರೆ. ತೂಕ ಇಳಿಸಿಕೊಳ್ಳಲು ಕೀಟೋ-ಡಯಟ್ ಅಥವಾ ಕಡಿಮೆ ಕಾರ್ಬ್ ಆಹಾರದ ಡಯಟ್ ಮಾಡೋ ಬದಲು ಆರೋಗ್ಯಕರ ಸಮತೋಲನ ಆಹಾರವನ್ನು ಸೇವಿಸಿ ತೂಕ ಇಳಿಸೋದು ಬೆಸ್ಟ್..

ಇಂಟರಿಮೆಟೆಂಟ್ ಫಾಸ್ಟಿಂಗ್ 
ಮಧ್ಯಂತರ ಉಪವಾಸ ಮಹಿಳೆಯರಿಗೆ ಅಲ್ಲ. ನಿರ್ದಿಷ್ಟವಾಗಿ, 16:8 ನಿಯಮವನ್ನು ಅನುಸರಿಸುವುದು ಮಹಿಳೆಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಮಧ್ಯಂತರ ಉಪವಾಸದ (fasting) ಬಗ್ಗೆ ಮಾಡಿದ ಹೆಚ್ಚಿನ ಅಧ್ಯಯನಗಳಲ್ಲಿ, ಇದು ಪುರುಷರಿಗೆ ಪರಿಣಾಮಕಾರಿ ಅನ್ನೋದು ತಿಳಿದು ಬಂದಿದೆ.

ಮಧ್ಯಂತರ ಉಪವಾಸದಿಂದ (Interim Fasting) ಮಹಿಳೆಯರು ತೂಕ ಕಳೆದುಕೊಳ್ಳಬಹುದಾದರೂ, ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳೆಯರ ದೇಹವು ಕ್ಯಾಲೊರಿಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಹಾಗಾಗಿ, ಮಧ್ಯಂತರ ಉಪವಾಸ ಮಹಿಳೆಯರ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಮಧ್ಯಂತರ ಉಪವಾಸ (Intermittent fasting) ಮಾಡೋದೇ ಆದರೆ, ಆಹಾರ ಸೇವನೆಯ ಮಧ್ಯ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಅನ್ನೋದನ್ನು ನೆನಪಿನಲ್ಲಿಡಬೇಕು. 

ಓರಲ್ ಗರ್ಭನಿರೋಧಕ (Oral Contraceptive)
ಋತುಚಕ್ರವನ್ನು ರೆಗ್ಯುಲರ್ ಆಗಿಸಲು ಮೌಖಿಕ ಗರ್ಭನಿರೋಧಕಗಳನ್ನು (Oral Contraceptive) ತೆಗೆದುಕೊಳ್ಳಲು ಅನೇಕ ಬಾರಿ ವೈದ್ಯರು ಶಿಫಾರಸು ಮಾಡುತ್ತಾರೆ. ಆದಾಗ್ಯೂ, ಇದು ಸರಿಯಾದ ಮಾರ್ಗವಲ್ಲ. ಇದು ನಿಮಗೆ ಸಹಾಯ ಮಾಡಬಹುದೇನೋ ನಿಜಾ. ಆದರೆ ಇದು ಹಾರ್ಮೋನುಗಳನ್ನು ಅಸಮತೋಲನ ಗೊಳಿಸಬಹುದು. ಋತುಚಕ್ರದ ಆರೋಗ್ಯವನ್ನು ಸರಿಪಡಿಸಲು ನೈಸರ್ಗಿಕ ವಿಧಾನಗಳನ್ನು ಅನುಸರಿಸೋದು ಮುಖ್ಯ. 

Latest Videos

click me!