ಬ್ರಷ್‌ನಿಂದ ಸ್ಕ್ರಬ್ ಮಾಡದೇ ಟಾಯ್ಲೆಟ್‌ ರೂಂನ ಮೊಂಡು ಕಲೆ ಹೋಗೋಕೆ ಇಲ್ಲಿದೆ ಸೂಪರ್ ಟ್ರಿಕ್ಸ್

Published : Sep 10, 2025, 02:40 PM IST

ನಾವೀಗ ಹೇಳುವ ಟಿಪ್ಸ್‌ ಕೇಳಿದ್ರೆ ಫುಲ್ ಖುಷ್ ಆಗ್ತೀರಿ. ಯಾಕಂದ್ರೆ ನೀವಿದನ್ನ ಫಾಲೋ ಮಾಡಿದ್ದೇ ಆದಲ್ಲಿ ಗಂಟೆಗಟ್ಟಲೆ ಸ್ಕ್ರಬ್ ಮಾಡುವ ಅಗತ್ಯ ಬರಲ್ಲ. ಜೊತೆಗೆ ಕಮೋಡ್ ಅಥವಾ ಟಾಯ್ಲೆಟ್ ರೂಂ ಕೂಡ ಕೆಲವೇ ನಿಮಿಷಗಳಲ್ಲಿ ಫಳ ಫಳ ಹೊಳೆಯುವುದನ್ನು ನೋಡಬಹುದು.

PREV
16

ಹೆಣ್ಮಕ್ಕಳಿಗಿಂತಲೂ ಬ್ಯಾಚುಲರ್ಸ್‌ಗೆ ಟಾಯ್ಲೆಟ್ ಕಮೋಡ್ ಅಥವಾ ರೂಂ ಕ್ಲೀನ್ ಮಾಡೋದು ಅಂದ್ರೆ ಕಷ್ಟ ಮತ್ತು ಬೇಸರದ ಕೆಲಸ. ಅದರಲ್ಲೂ ಅದರ ಮೇಲೆ ಹಳದಿ ಮತ್ತು ಮೊಂಡುತನದ ಕಲೆಗಳು ಸಂಗ್ರಹವಾದ್ರೆ ಅವುಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಶ್ರಮಪಡಬೇಕು. ಆದರೆ ನಾವೀಗ ಹೇಳುವ ಟಿಪ್ಸ್‌ ಕೇಳಿದ್ರೆ ಫುಲ್ ಖುಷ್ ಆಗ್ತೀರಿ. ಯಾಕಂದ್ರೆ ನೀವಿದನ್ನ ಫಾಲೋ ಮಾಡಿದ್ದೇ ಆದಲ್ಲಿ ಗಂಟೆಗಟ್ಟಲೆ ಸ್ಕ್ರಬ್ ಮಾಡುವ ಅಗತ್ಯ ಬರಲ್ಲ. ಜೊತೆಗೆ ಕಮೋಡ್ ಅಥವಾ ಟಾಯ್ಲೆಟ್ ರೂಂ ಕೂಡ ಕೆಲವೇ ನಿಮಿಷಗಳಲ್ಲಿ ಫಳ ಫಳ ಹೊಳೆಯುವುದನ್ನು ನೋಡಬಹುದು. ಹಾಗಾದ್ರೆ ಯಾವುದೇ ಕಠಿಣ ಪರಿಶ್ರಮವಿಲ್ಲದೆ ಶೌಚಾಲಯವನ್ನು ಹೇಗೆ ಹೊಳೆಯುವಂತೆ ಮಾಡಬಹುದು ನೋಡೋಣ ಬನ್ನಿ...

26

ಮೊದಲೇ ಹೇಳಿದ ಹಾಗೆ ಈ ವಿಧಾನವು ನಿಮ್ಮ ಶ್ರಮ ಮತ್ತು ಸಮಯ ಉಳಿಸುವುದಲ್ಲದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಮತ್ತು ರಾಸಾಯನಿಕ ಕ್ಲೀನರ್‌ಗಳಿಗಿಂತ ಅದ್ಭುತವಾಗಿದೆ. ಈ ವಿಧಾನವನ್ನು Keya's Kitchen ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಲಾಗಿದ್ದು, ಇದನ್ನು ತಯಾರಿಸಲು ಬೇಕಾಗಿರುವುದೇನು ನೋಡೋಣ ಬನ್ನಿ...

36

ಒಂದು ಕಪ್ ಅಡುಗೆ ಸೋಡಾ
1/4 ಕಪ್ ಸಿಟ್ರಿಕ್ ಆಸಿಡ್
1 ರಿಂದ 2 ಚಮಚ ಡಿಶ್‌ವಾಶಿಂಗ್ ಲಿಕ್ವಿಡ್

ಈ ಎಲ್ಲಾ ಪದಾರ್ಥ ಸೇರಿಸಿ ಉಂಡೆ ಮಾಡಬೇಕು. ಇದನ್ನು ತಯಾರಿಸುವುದು ತುಂಬಾ ಸುಲಭ. ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ಅಡುಗೆ ಸೋಡಾ ಮತ್ತು ಸಿಟ್ರಿಕ್ ಆಮ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಎರಡೂ ಪುಡಿಗಳು ಸಂಪೂರ್ಣವಾಗಿ ಮಿಶ್ರಣವಾಗಬೇಕು ಎಂಬುದನ್ನು ನೆನಪಿನಲ್ಲಿಡಿ. ಈಗ ಡಿಶ್‌ವಾಶಿಂಗ್ ಲಿಕ್ವಿಡ್ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡುತ್ತಾ ಬರಬೇಕು. ಇದರಿಂದ ಫೋಮ್ ಬರುವುದಿಲ್ಲ. ಆದರೆ ಸ್ವಲ್ಪ ತೇವವಾಗುವವರೆಗೆ ಮಿಶ್ರಣ ಮಾಡಿ.

46

ಈಗ ಈ ಮಿಶ್ರಣವನ್ನು ಒಂದೊಂದೆ ಚಮಚ ತೆಗೆದು ಐಸ್ ಟ್ರೇಗೆ ಹಾಕಿ. ಮಿಶ್ರಣವು ಚೆನ್ನಾಗಿ ಹೆಪ್ಪುಗಟ್ಟುವಂತೆ ಸ್ವಲ್ಪ ಒತ್ತಿರಿ. ಐಸ್ ಟ್ರೇ ಅನ್ನು ಕನಿಷ್ಠ 4-5 ಗಂಟೆಗಳ ಕಾಲ ಅಥವಾ ಅವು ಸಂಪೂರ್ಣವಾಗಿ ಗಟ್ಟಿಯಾಗುವವರೆಗೆ ಫ್ರೀಜರ್‌ನಲ್ಲಿ ಇರಿಸಿ. ಇದು ಸಂಪೂರ್ಣವಾಗಿ ಹೆಪ್ಪುಗಟ್ಟಿದ ನಂತರ ಅವುಗಳನ್ನು ಐಸ್ ಟ್ರೇನಿಂದ ತೆಗೆದು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇದರಿಂದ ಅಗತ್ಯವಿದ್ದಾಗ ಅವುಗಳನ್ನು ಬಳಸಬಹುದು.

56

ಈಗ ನೀವು ಶೌಚಾಲಯವು ಕೊಳಕಾಗಿ ಕಂಡುಬಂದಾಗಲೆಲ್ಲಾ ರಾತ್ರಿ ಮಲಗುವ ಮುನ್ನ ನೇರವಾಗಿ ಕಮೋಡ್‌ನಲ್ಲಿ ತಯಾರಿಸಿಟ್ಟುಕೊಂಡ ಈ ಉಂಡೆ ಹಾಕಿ. ಫ್ಲಶ್ ಮಾಡಿದಾಗಲೆಲ್ಲಾ ಅದು ಫೋಮ್ ಕ್ರಿಯೇಟ್ ಮಾಡುತ್ತದೆ. ಸಿಟ್ರಿಕ್ ಆಮ್ಲ ಮತ್ತು ಅಡುಗೆ ಸೋಡಾದ ರಾಸಾಯನಿಕ ಕ್ರಿಯೆಯಿಂದಾಗಿ ಈ ರೀತಿಯಾಗುವುದು. ಈ ಫೋಮ್ ನಿಧಾನವಾಗಿ ಟಾಯ್ಲೆಟ್ ಒಳಭಾಗಗಳಲ್ಲಿ ಹರಡುತ್ತದೆ. ರಾತ್ರಿಯಿಡೀ ಅಥವಾ ಕನಿಷ್ಠ 6-8 ಗಂಟೆಗಳ ಕಾಲ ಅದನ್ನು ಬಿಟ್ಟರೆ ಶೌಚಾಲಯವು ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ. ನೀವು ಬೆಳಗ್ಗೆ ಅದನ್ನು ಫ್ಲಶ್ ಮಾಡಬಹುದು.

66

ಅಡುಗೆ ಸೋಡಾ ಮತ್ತು ಸಿಟ್ರಿಕ್ ಆಮ್ಲದ ನಡುವಿನ ಪ್ರತಿಕ್ರಿಯೆಯಿಂದ ರೂಪುಗೊಂಡ ಫೋಮ್, ಕಲೆಗಳನ್ನು ಸಡಿಲಗೊಳಿಸುತ್ತದೆ ಮತ್ತು ಅವುಗಳನ್ನು ಮೇಲ್ಮೈಯಿಂದ ಬೇರ್ಪಡಿಸಲು ಸಹಾಯ ಮಾಡುತ್ತದೆ. ಸಿಟ್ರಿಕ್ ಆಮ್ಲವು ಮೊಂಡುತನದ ನೀರಿನ ಕಲೆಗಳನ್ನು ಕರಗಿಸುತ್ತದೆ. ಹಾಗೆಯೇ ಡಿಶ್‌ವಾಶಿಂಗ್ ಲಿಕ್ವಿಡ್ ಗ್ರೀಸ್ ಮತ್ತು ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುತ್ತದೆ . ಈ ರೀತಿ ಉಂಡೆ ಮಾಡಿ ಇಟ್ಟುಕೊಳ್ಳುವುದರಿಂದ ಆಗಾಗ ನಿಮ್ಮ ಕೆಲಸ ಸುಲಭವಾಗುತ್ತದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Read more Photos on
click me!

Recommended Stories