ಈ ಹಿಟ್ಟನ್ನ ಬಳಸಿ ಚಿಕ್ಕ ಉಂಡೆ ರೆಡಿ ಮಾಡಿ..ರಾತ್ರೋರಾತ್ರಿ ಹಲ್ಲಿ, ಇಲಿ, ಜಿರಲೆ ಓಡಿಹೋಗ್ತವೆ!
ಇಲಿಗಳು ಮತ್ತು ಜಿರಲೆಗಳನ್ನು ತೊಡೆದುಹಾಕಲು ಅನೇಕ ಮನೆಮದ್ದುಗಳಿದ್ದು, ಅದರಲ್ಲಿ ಒಂದರ ಬಗ್ಗೆ ಇಲ್ಲಿ ಕೊಡಲಾಗಿದೆ. ಕೇವಲ ಒಂದು ರಾತ್ರಿಯಲ್ಲೇ ನೀವು ಇದರ ಪರಿಣಾಮವನ್ನು ನೋಡುತ್ತೀರಿ…

ಹಲ್ಲಿಗಳು, ಇಲಿಗಳು, ಜಿರಲೆಗಳೆಂದ್ರೆ ಯಾರಿಗೆ ತಾನೇ ಪ್ರೀತಿ?, ಪ್ರತಿಯೊಬ್ಬರೂ ಅವುಗಳನ್ನು ನೋಡುತ್ತಿದ್ದಂತೆ ಸಿಡಿ ಮಿಡಿ ಎನ್ನುವವರೇ. ಮತ್ತೆ ಕೆಲವರು ಅವುಗಳನ್ನು ನೋಡಿದರೇನೇ ಸಿಂಹ, ಹುಲಿ ನೋಡಿದಷ್ಟು ಭಯಪಡುತ್ತಾರೆ. ಇವು ಮನೆ ಕೊಳೆ ಮಾಡುವುದಲ್ಲದೆ, ಅನೇಕ ರೋಗಗಳನ್ನು ಹರಡುತ್ತವೆ. ಅದಕ್ಕೆ ಜನರು ಅವುಗಳನ್ನು ಓಡಿಸಲು ಟಿವಿ ಜಾಹೀರಾತುಗಳಲ್ಲಿ ನೋಡಿದ ಎಲ್ಲಾ ದುಬಾರಿ ಮತ್ತು ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ಈಗ ನೀವು ಚಿಂತಿಸಬೇಕಾಗಿಲ್ಲ ಬಿಡಿ. ಹಲ್ಲಿಗಳು, ಇಲಿಗಳು ಮತ್ತು ಜಿರಲೆಗಳನ್ನು ತೊಡೆದುಹಾಕಲು ಅನೇಕ ಮನೆಮದ್ದುಗಳಿದ್ದು, ಅದರಲ್ಲಿ ಒಂದರ ಬಗ್ಗೆ ಇಲ್ಲಿ ಕೊಡಲಾಗಿದೆ. ಕಂಟೆಂಟ್ ಕ್ರಿಯೇಟರ್ ಪ್ರಜಕ್ತಾ ಇದರ ಬಗ್ಗೆ ವಿಡಿಯೋ ಮಾಡಿದ್ದು, ಕೇವಲ ಒಂದು ರಾತ್ರಿಯಲ್ಲೇ ನೀವು ಇದರ ಪರಿಣಾಮವನ್ನು ನೋಡುತ್ತೀರಿ ಎಂದು ಹೇಳಿಕೊಂಡಿದ್ದಾರೆ. ಹಾಗಾದ್ರೆ ನಾವೇನು ಮಾಡಬೇಕು ಎನ್ನುವವರು ಮುಂದೆ ಓದಿ…
ಇಷ್ಟನ್ನು ತೆಗೆದುಕೊಳ್ಳಿ…
1 ನ್ಯಾಫ್ತಲಿನ್ ಬಾಲ್
1 ಹಸಿರು ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನ ಪುಡಿ
1 ಕರ್ಪೂರ
ಬೋರಿಕ್ ಪೌಡರ್
2 ಟೀಸ್ಪೂನ್ ಗೋಧಿ ಹಿಟ್ಟು
ಡೆಟಾಲ್ ಲಿಕ್ವಿಡ್
ಫ್ಲೋರ್ ಕ್ಲೀನರ್
ಅಗತ್ಯವಿರುವಷ್ಟು ನೀರು
ಮೊದಲನೆಯದಾಗಿ, ನ್ಯಾಫ್ತಲಿನ್ ಬಾಲ್ ಮತ್ತು ಕರ್ಪೂರದ ಮಾತ್ರೆಯನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ. ಈಗ ಹಸಿರು ಮೆಣಸಿನಕಾಯಿಯನ್ನು ಇದಕ್ಕೆ ಸೇರಿಸಿ ಅದರೊಂದಿಗೆ ಜಜ್ಜಿ ಪುಡಿಮಾಡಿ. ಬಯಸಿದರೆ ಮೆಣಸಿನಕಾಯಿಯ ಬದಲಿಗೆ ನೇರವಾಗಿ ಕೆಂಪು ಮೆಣಸಿನ ಪುಡಿಯನ್ನು ಕೂಡ ಸೇರಿಸಬಹುದು. ಈಗ ಬೋರಿಕ್ ಪುಡಿಯನ್ನು ಸೇರಿಸಿ . ನಂತರ ಗೋಧಿ ಹಿಟ್ಟು, ಡೆಟಾಲ್ ಲಿಕ್ವಿಡ್ ಮತ್ತು ಫ್ಲೋರ್ ಕ್ಲೀನರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸುವ ಮೂಲಕ ಎಲ್ಲವನ್ನೂ ಬೆರೆಸಬೇಕು. ಈ ಸಮಯದಲ್ಲಿ ಕೈಗೆ ಗ್ಲೌಸ್ ಅಥವಾ ಕವರ್ ಹಾಕೋದನ್ನ ಮರಿಬೇಡಿ. ಮಿಶ್ರಣ ತುಂಬಾ ಮೃದುವಾಗಿರಬಾರದು. ಚೆಂಡಿನಂತೆ ಕಟ್ಟಲು ಸುಲಭವಾಗಬೇಕು ಎಂಬುದನ್ನು ನೆನಪಿನಲ್ಲಿಡಿ. ಆಗ ಅದನ್ನು ಎಲ್ಲಿ ಬೇಕಾದರೂ ಇಡಲು ಸುಲಭವಾಗುತ್ತದೆ.
ಈಗ ಹಿಟ್ಟನ್ನು ಸಣ್ಣ ತುಂಡುಗಳಾಗಿ ವಿಂಗಡಿಸಿ. ಈ ಉಂಡೆಗಳನ್ನು ಹಲ್ಲಿಗಳು, ಇಲಿಗಳು ಮತ್ತು ಜಿರಲೆಗಳು ಹೆಚ್ಚು ಬರುವ ಸ್ಥಳಗಳಲ್ಲಿ ಇರಿಸಿ. ಉದಾಹರಣೆಗೆ ಅಡುಗೆಮನೆಯ ಕಪಾಟಿನ ಮೂಲೆಗಳಲ್ಲಿ, ರೆಫ್ರಿಜರೇಟರ್ ಹಿಂದೆ ಅಥವಾ ಊಟದ ಪ್ರದೇಶದಲ್ಲಿ.
ಇದು ಹೇಗೆ ವರ್ಕ್ ಆಗುತ್ತೆ ಅಂದ್ರೆ ನ್ಯಾಫ್ತಲಿನ್ ಬಾಲ್ ಮತ್ತು ಕರ್ಪೂರ ಮಾತ್ರೆಗಳು ವಿಶಿಷ್ಟವಾದ ವಾಸನೆಯನ್ನು ಹೊಂದಿರುತ್ತವೆ. ಇದನ್ನು ಈ ಕೀಟಗಳು ಇಷ್ಟಪಡುವುದಿಲ್ಲ. ಹಸಿರು ಮೆಣಸಿನಕಾಯಿಗಳ ಕಟುವಾದ ವಾಸನೆಯೂ ಅವುಗಳ ಮೇಲೆ ಪರಿಣಾಮ ಬೀರುತ್ತದೆ. ಬೋರಿಕ್ ಪುಡಿ ನೈಸರ್ಗಿಕ ಕೀಟನಾಶಕವಾಗಿದ್ದು, ಇದು ಈ ಕೀಟಗಳನ್ನು ಕೊಲ್ಲುತ್ತದೆ. ಹಿಟ್ಟು ಈ ಎಲ್ಲಾ ವಸ್ತುಗಳನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಡೆಟಾಲ್ ಮತ್ತು ನೆಲದ ಕ್ಲೀನರ್ ಇವೆರಡೂ ಹಲ್ಲಿಗಳು, ಜಿರಲೆಗಳು ಮತ್ತು ಇಲಿಗಳನ್ನು ಅವುಗಳ ವಾಸನೆಯಿಂದ ಓಡಿಸಲು ಸಹಾಯ ಮಾಡುತ್ತವೆ .