ಬಿಸಿನೆಸ್‌ನಲ್ಲಿ ಸೂಪರ್‌ ಸಕ್ಸಸ್ ಆಗಿರೋ ಈ ಭಾರತೀಯ ಮಹಿಳೆ, ಮಾಡೆಲ್‌ಗಳನ್ನೂ ಮೀರಿಸುವಷ್ಟು ಬ್ಯೂಟಿ!

First Published | Feb 2, 2024, 10:42 AM IST

ಬ್ಯೂಟಿ ವಿತ್‌ ಬ್ರೈನ್‌ ಎಂದು ಕರೆಸಿಕೊಳ್ಳುವ ಮಹಿಳೆಯರು ಕಡಿಮೆ. ಬಹುತೇಕರು ಸೌಂದರ್ಯ ಹೊಂದಿದ್ದರೂ ಚಾಣಾಕ್ಷತನ ಹೊಂದಿರುವುದಿಲ್ಲ. ಆದ್ರೆ ಈಕೆ ಇವೆಲ್ಲದಕ್ಕೆ ಅಪವಾದ ಎಂಬಂತೆ ಬಿಸಿನೆಸ್‌ನಲ್ಲಿ ಸೂಪರ್‌ವುಮೆನ್, ಸ್ಟೈಲ್‌ನಲ್ಲಿ ಸಖತ್‌ ಲಕ್ಸುರಿಯಸ್‌. ಯಾರಾಕೆ?

ಬ್ಯೂಟಿ ವಿತ್‌ ಬ್ರೈನ್‌ ಎಂದು ಕರೆಸಿಕೊಳ್ಳುವ ಮಹಿಳೆಯರು ಕಡಿಮೆ. ಬಹುತೇಕರು ಸೌಂದರ್ಯ ಹೊಂದಿದ್ದರೂ ಚಾಣಾಕ್ಷತನ ಹೊಂದಿರುವುದಿಲ್ಲ. ಹೀಗಾಗಿ ಇವೆರಡನ್ನೂ ಒಟ್ಟಿಗೆ ಹೊಂದಿರುವವರು ಎಲ್ಲರ ಗಮನ ಸೆಳೆಯುತ್ತಾರೆ. ಅಂಥವರಲ್ಲೊಬ್ಬರು ಪ್ರಸಿದ್ಧ ಭಾರತೀಯ ಉದ್ಯಮಿ ನತಾಶಾ ಪೂನಾವಾಲಾ.

ಪ್ರಸ್ತುತ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನಾ ಲಸಿಕೆಯನ್ನು ವಿಶ್ವದಾದ್ಯಂತ ಪೂರೈಸಿದ ಅಡಾರ್ ಪೂನಾವಾಲಾ ಅವರ ಪತ್ನಿ. 

Tap to resize

 ನತಾಶಾ, ಬಿಸಿನೆಸ್ ನಿರ್ವಹಿಸುವುದರ ಜೊತೆ ಪಾರ್ಟಿ, ಸಮಾರಂಭಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಹರ್ಮೆಸ್, ಲೂಯಿ ವಿಟಾನ್, ಗುಸ್ಸಿ ಮತ್ತು ಡಿಯರ್‌ನಂತಹ ಬ್ರ್ಯಾಂಡ್‌ಗಳ ಬೆಲೆಬಾಳುವ ಕೈಚೀಲಗಳೊಂದಿಗೆ ಫೋಸ್ ಕೊಡುತ್ತಾರೆ.

1933ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಕ್ಲೌಡ್ ಬ್ಯಾಟ್ಲಿ ವಿನ್ಯಾಸಗೊಳಿಸಿದ 750 ಕೋಟಿಯ ಬಂಗಲೆ ಲಿಂಕನ್ ಹೌಸ್, ನತಾಶಾ ಮತ್ತು ಅಡಾರ್ ಪೂನಾವಾಲಾ ಅವರ ವಾಸಸ್ಥಳವಾಗಿದೆ. ವಾಂಕನೇರ್‌ನ ಮಹಾರಾಜ ಸರ್ ಅಮರಸಿಂಹಜಿ ಬನೇಸಿನ್ಹಜಿ ಮತ್ತು ಅವರ ಮಗ ಪ್ರತಾಪ್‌ಸಿಂಹಜಿ ಝಾಲಾ ಅವರು ಲಿಂಕನ್ ಹೌಸ್‌ನ ಮೂಲ ಮಾಲೀಕರು.

ನತಾಶಾ, ಪುಣೆಯಲ್ಲಿ ಹುಟ್ಟಿ ಬೆಳೆದರು. ವಿದೇಶದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಡಿಪ್ಲೊಮಾ ಮಾಡಿದ ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂ.ಎಸ್ಸಿ ಮಾಡಿದರು. ಸೈರಸ್‌ ಪೂನಾವಾಲಾ ಕಂಪೆನಿಯಲ್ಲಿ  ನತಾಶಾ, ಕ್ರಿಯೇಟಿವ್‌ ಮತ್ತು ವ್ಯವಹಾರ ವಿಭಾಗವನ್ನು ನಿರ್ವಹಿಸುತ್ತಾರೆ.

Natasha Ponawall

ಬಿಸಿನೆಸ್‌ನಲ್ಲಿ ದಿ ಬೆಸ್ಟ್ ವುಮೆನ್‌ ಎಂದು ಗುರುತಿಸಿಕೊಂಡಿರೋ ನತಾಶಾ, ಲೈಫ್‌ಸ್ಟೈಲ್‌ನಲ್ಲಿಯೂ ಸಿಕ್ಕಾಪಟ್ಟೆ ಸ್ಟೈಲಿಶ್‌. ತಮ್ಮ ಸೊಗಸಾದ ಉಡುಗೆ ಮತ್ತು ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.

ನತಾಶಾ ಬಿಸಿನೆಸ್‌ನಲ್ಲಿ ಚಾಣಾಕ್ಷೆ ಆಗಿರುವ ಹಾಗೆಯೇ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ನ್ನು ಸಹ ಹೊಂದಿದ್ದಾರೆ. ನತಾಶಾ ಫ್ಯಾನ್ಸಿ ಮನೆಗಳು, ದುಬಾರಿ ಕಾರುಗಳು ಮತ್ತು ಡಿಸೈನರ್ ಬ್ಯಾಗ್‌ಗಳೊಂದಿಗೆ ಅದ್ದೂರಿ ಜೀವನಶೈಲಿಯನ್ನು ನಡೆಸುತ್ತಾರೆ. ಪ್ರಪಂಚದ ಕೆಲವು ಅತ್ಯಮೂಲ್ಯ ವಸ್ತುಗಳ ಮಾಲೀಕರೂ ಹೌದು. 

ಪ್ರಸ್ತುತ ಅವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ, ಇವರ ಒಟ್ಟು ಆಸ್ತಿ ಬರೋಬ್ಬರಿ 192000 ಕೋಟಿ ರೂ. ಆಗಿದೆ.

Latest Videos

click me!