ವಾಷಿಂಗ್ ಮಷೀನ್ ಬಳಸೋವಾಗ ಜನ ಸಾಮಾನ್ಯವಾಗಿ ಮಾಡೋ ತಪ್ಪುಗಳಿವು

Published : Jan 29, 2024, 04:52 PM IST

ಬಟ್ಟೆ ತೊಳೆಯೋಕೆ ವಾಷಿಂಗ್ ಮಷೀನ್ ಬಳಸ್ತೀರಾ? ಹಾಗಿದ್ರೆ ನೀವು ಇದನ್ನ ಓದಬೇಕು. ಯಾಕಂದ್ರೆ ವಾಷಿಂಗ್ ಮಷೀನ್ ಬಳಸುವ ಎಲ್ಲರೂ ಸಹ ಅದನ್ನ ಸರಿಯಾಗಿ ಉಪಯೋಗಿಸುತ್ತಿಲ್ಲ. ನೀವು ವಾಷೀಂಗ್ ಮಷೀನ್ ಬಳಸೋವಾಗ ಏನೆಲ್ಲಾ ತಪ್ಪು ಮಾಡ್ತೀರಿ ನೋಡಿ.

PREV
18
ವಾಷಿಂಗ್ ಮಷೀನ್ ಬಳಸೋವಾಗ ಜನ ಸಾಮಾನ್ಯವಾಗಿ ಮಾಡೋ ತಪ್ಪುಗಳಿವು

ವಾಷಿಂಗ್ ಮಷೀನ್ ನಲ್ಲಿ (washing machine) ಬಟ್ಟೆ ತೊಳೆಯುವಾಗ ನೀವು ಏನೇನೋ ತಪ್ಪುಗಳನ್ನು ಮಾಡುತ್ತಿರಬಹುದು. ಆದರೆ ಇನ್ನು ಮುಂದೆ ನೀವು ಈ ಕೆಳಗೆ ತಿಳಿಸಿದ ವಿಷ್ಯಗಳ ಕಡೆಗೆ ಗಮನ ಹರಿಸಿದ್ರೆ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತೆ. 

28

ಹೆಚ್ಚು ಬ್ಲೀಚ್: ಬ್ಲೀಚ್ (bleach) ಬಟ್ಟೆಗಳನ್ನು ಕಡಿಮೆ ಬಾಳಿಕೆ ಬರುವಂತೆ ಮಾಡುತ್ತದೆ. ಹಾಗಾಗಿ ಬ್ಲೀಚ್ ಸಾಧ್ಯವಾದಷ್ಟು ಕಡಿಮೆ ಬಳಸೋದು ಉತ್ತಮ. ಬಟ್ಟೆ ಬಿಳಿಯಾಗಿಸಲು ಮೊದಲು ನಿಮ್ಮ ಅಜ್ಜಿಯ ಈ ಸಲಹೆಯನ್ನು ಅನುಸರಿಸಬೇಕು: ಕೆಲವು ಹನಿ ನಿಂಬೆಯೊಂದಿಗೆ ದೊಡ್ಡ ಸಾಸ್ ಪ್ಯಾನ್ ನಲ್ಲಿ ಬಟ್ಟೆಗಳನ್ನು ಕುದಿಸಿ. ಇದರಿಂದ ಬಟ್ಟೆ ಶುಚಿಯಾಗುತ್ತೆ.
 

38

ಹೆಚ್ಚು ಡಿಟರ್ಜೆಂಟ್ ಬಳಕೆ: ನೀವು ಹೆಚ್ಚು ಡಿಟರ್ಜೆಂಟ್ (detergent) ಬಳಸಿದರೆ, ನಿಮ್ಮ ಲಾಂಡ್ರಿಯನ್ನು ಸರಿಯಾಗಿ ಕ್ಲೀನ್ ಆಗುತ್ತೆ ಅನ್ನೋದು ನಿಮ್ಮ ತಪ್ಪು ಕಲ್ಪನೆ. ಹೆಚ್ಚು ಡಿಟರ್ಜೆಂಟ್ ಬಳಸಿದಷ್ಟು ಬಟ್ಟೆ ಹಾನಿಗೊಳಗಾಗುವ ಮತ್ತು ಕಲೆಗಳನ್ನು ಹೊಂದುವ ಅಪಾಯ ಹೆಚ್ಚಾಗುತ್ತದೆ. ಡಿಟರ್ಜೆಂಟ್ ಮಷೀನ್ ನಲ್ಲಿ ಸಿಲುಕಿಕೊಳ್ಳಬಹುದು ಮತ್ತು ಇದರಿಂದ ಮಷೀನ್ ಹಾಳಾಗುವ ಸಾಧ್ಯತೆ ಇದೆ.
 

48

ಮಷೀನ್ ಪೂರ್ತಿಯಾಗಿ ಲೋಡ್ ಮಾಡೋದು: ಮಷೀನ್ ನಲ್ಲಿ ಯಾವತ್ತೂ ಪೂರ್ತಿಯಾಗಿ ತುಂಬಬೇಡಿ. ಕಡಿಮೆ ಬಳಸುವುದು ಉತ್ತಮ, ನೀರು ಮತ್ತು ಡಿಟರ್ಜೆಂಟ್ ಜೊತೆಗೆ ಬಟ್ಟೆಯನ್ನು ಸಹ ಕಡಿಮೆ ಪ್ರಮಾಣದಲ್ಲಿ ಬಳಸಿ. ಇದರಿಂದ ಬಟ್ಟೆ ಬೇಗನೆ ಶುಚಿಯಾಗುತ್ತದೆ. 

58

ವಾಷಿಂಗ್ ಮಷಿನ್ ಸ್ವಚ್ಚಗೊಳಿಸದೇ ಇರೋದು: ಅನೇಕ ಜನರು ಈ ತಪ್ಪನ್ನು ಮಾಡುತ್ತಾರೆ ಆದರೆ ನಿಮ್ಮ ವಾಷಿಂಗ್ ಮಷಿನ್ ಅನ್ನು ನೀವು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ (cleaning) ನಿಮ್ಮ ಲಾಂಡ್ರಿ ಹೇಗೆ ಸ್ವಚ್ಛವಾಗಿರುತ್ತೆ ಹೇಳಿ? ಹಾಗಾಗಿ ಮಷೀನ್ ಸಹ ಅವಾಗವಾಗ ಸ್ವಚ್ಚಗೊಳಿಸಬೇಕು. ಅದಕ್ಕಾಗಿ ಎರಡು ಲೋಟ ಬಿಳಿ ವಿನೆಗರ್ ಅನ್ನು ಸುರಿಯಿರಿ ಮತ್ತು ಹೆಚ್ಚಿನ ತಾಪಮಾನಕ್ಕೆ ತಿರುಗಿಸಿ. ನಂತರ ನೀರನ್ನು ಹೊರಗೆ ಬಿಡಿ.

68

ದುಬಾರಿ ಉತ್ಪನ್ನಗಳ ಬಳಕೆ: ನಾವು ಬಳಸುವ ಎಲ್ಲಾ ಉತ್ಪನ್ನಗಳು  ಖರ್ಚು ಹೆಚ್ಚಿಸುತ್ತೆ. ಅದರ ಬದಲಾಗಿ ನೀವು ಕಡಿಮೆ ಖರ್ಚಿನಲ್ಲಿ ಎಲ್ಲಾ ಸರಿ ಮಾಡಬಹುದು. ಉಪ್ಪು ಬಟ್ಟೆಗಳಿಗೆ ಬಣ್ಣವನ್ನು ನೀಡುತ್ತದೆ, ಸುಣ್ಣವು ಗ್ರೀಸ್ ಕಲೆಗಳನ್ನು ತೆಗೆದುಹಾಕುತ್ತದೆ, ಮತ್ತು ನಿಂಬೆ ರಸವನ್ನು ಸುಗಂಧ ದ್ರವ್ಯ ಮತ್ತು ಮೃದುಗೊಳಿಸಲು ಬಳಸಬಹುದು.

78

ಎಲ್ಲಾ ಬಣ್ಣದ ಬಟ್ಟೆಗಳನ್ನು ಒಟ್ಟಿಗೆ ಹಾಕೋದು: ಹೊಸ ಬಟ್ಟೆಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ, ಯಾಕೆಂದ್ರೆ ಅವುಗಳು ಬಣ್ಣ ಬಿಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನಂತರ ಪಶ್ಚಾತ್ತಾಪ ತಪ್ಪಿಸಲು ಡಾರ್ಕ್ ಬಣ್ಣದ ಬಟ್ಟೆಗಳನ್ನು ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಬೇರೆ ಬೇರೆಯಾಗಿ ವಾಶ್ ಮಾಡಿ. 

88

ಬಟ್ಟೆಗಳನ್ನು ಮಷೀನ್ ನಲ್ಲೇ ಬಿಡೋದು: ಬಟ್ಟೆ ವಾಷ್ ಆದ ಬಳಿಕವೂ, ಅವುಗಳನ್ನು ಮಷೀನ್ ನಲ್ಲಿ ಹಾಗೇ ಬಿಟ್ಟರೆ ಬ್ಯಾಕ್ಟೀರಿಯಾವು (bacteria) ಹೆಚ್ಚಿನ ವೇಗದಲ್ಲಿ ಬೆಳೆಯುತ್ತದೆ, ಕೆಟ್ಟ ವಾಸನೆಗಳನ್ನು ಉಂಟುಮಾಡುತ್ತದೆ, ಇದರಿಂದ ನೀವು ಅವುಗಳನ್ನು ಮತ್ತೆ ತೊಳೆಯಬೇಕಾಗಿ ಬರುತ್ತೆ. 

click me!

Recommended Stories