ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಅತ್ತೆ ಹೆಸರಾಂತ ಭಾರತೀಯ ವಿಜ್ಞಾನಿ!

Published : Mar 13, 2024, 10:39 AM IST

ಅಂಬಾನಿ ಫ್ಯಾಮಿಲಿಯ ಏಕೈಕ ಪುತ್ರಿ ಇಶಾ ಅಂಬಾನಿಯ ಬಗ್ಗೆ ಎಲ್ಲರಿಗೂ ಗೊತ್ತು. ಉದ್ಯಮಿ ಆನಂದ್‌ ಪಿರಾಮಲ್‌ರನ್ನು ಮದ್ವೆಯಾಗಿರುವ ಇಶಾ, ಕೋಟ್ಯಾಂತರ ರೂ.ನ ಬಿಸಿನೆಸ್‌ನ್ನು ನಿರ್ವಹಿಸುತ್ತಿದ್ದಾರೆ. ಹಾಗೆಯೇ ಈಕೆಯ ಅತ್ತೆ ಸ್ವಾತಿ ಪಿರಾಮಲ್‌, ಸಹ ಹೆಸರಾಂತ ಭಾರತೀಯ ವಿಜ್ಞಾನಿ ಅನ್ನೋದು ನಿಮ್ಗೆ ಗೊತ್ತಿದ್ಯಾ?

PREV
18
ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಅತ್ತೆ ಹೆಸರಾಂತ ಭಾರತೀಯ ವಿಜ್ಞಾನಿ!

ಅಂಬಾನಿ ಫ್ಯಾಮಿಲಿಯ ಏಕೈಕ ಪುತ್ರಿ ಇಶಾ ಅಂಬಾನಿಯ ಬಗ್ಗೆ ಎಲ್ಲರಿಗೂ ಗೊತ್ತು. ಉದ್ಯಮಿ ಆನಂದ್‌ ಪಿರಾಮಲ್‌ರನ್ನು ಮದ್ವೆಯಾಗಿರುವ ಇಶಾ, ಕೋಟ್ಯಾಂತರ ರೂ.ನ ಬಿಸಿನೆಸ್‌ನ್ನು ನಿರ್ವಹಿಸುತ್ತಿದ್ದಾರೆ. ಹಾಗೆಯೇ ಈಕೆಯ ಅತ್ತೆ ಸ್ವಾತಿ ಪಿರಾಮಲ್‌, ಸಹ ಹೆಸರಾಂತ ಭಾರತೀಯ ವಿಜ್ಞಾನಿ ಅನ್ನೋದು ನಿಮ್ಗೆ ಗೊತ್ತಿದ್ಯಾ?

28

ಅಂಬಾನಿ ಫ್ಯಾಮಿಲಿಯಷ್ಟು ಬಿಸಿನೆಸ್‌ನ್ನು ಹೊಂದಿಲ್ಲವಾದರೂ ಪಿರಾಮಲ್ ಗ್ರೂಪ್‌ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದೆ. ಕುಟುಂಬ ಸದಸ್ಯರು ಬಿಸಿನೆಸ್ ನಿರ್ವಹಣೆಯ ಭಾಗವಾಗಿದ್ದಾರೆ. ಸ್ವತಃ ಇಶಾ ಅಂಬಾನಿಯ ಅತ್ತೆ ಸ್ವಾತಿ ಪಿರಾಮಲ್‌, ಹೆಸರಾಂತ ಭಾರತೀಯ ವಿಜ್ಞಾನಿ ಮತ್ತು ಕೈಗಾರಿಕೋದ್ಯಮಿ.

38

ಮಾರ್ಚ್ 28,1956ರಂದು ಜನಿಸಿದ ಸ್ವಾತಿ ಪಿರಾಮಲ್‌, ಸಾರ್ವಜನಿಕ ಆರೋಗ್ಯ ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಆರೋಗ್ಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

48

ಪಿರಾಮಲ್ ಗ್ರೂಪ್‌ನ ಉಪಾಧ್ಯಕ್ಷರಾಗಿ, ಔಷಧೀಯ, ಹಣಕಾಸು ಸೇವೆಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಆಸಕ್ತಿ ಹೊಂದಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಹಾರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

58

ಸ್ವಾತಿ ಪಿರಾಮಲ್‌, ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, 2012ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಯನ್ನು ನೀಡಲಾಯಿತು. ಭಾರತದ ಅಪೆಕ್ಸ್ ಚೇಂಬರ್ ಆಫ್ ಕಾಮರ್ಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿ ಸ್ವಾತಿ ಪಿರಾಮಲ್‌ ಸೇವೆ ಸಲ್ಲಿಸಿದ್ದಾರೆ.

68

ಹಾರ್ವರ್ಡ್ ಬೋರ್ಡ್‌ನಲ್ಲಿ ಸದಸ್ಯತ್ವದಂತಹ ಗೌರವಾನ್ವಿತ ಸ್ಥಾನಗಳನ್ನು ಗಳಿಸಿದ್ದಾರೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಮತ್ತು ಸಾರ್ವಜನಿಕ ಆರೋಗ್ಯದ ಮೇಲ್ವಿಚಾರಕರು ಮತ್ತು ಡೀನ್ ಸಲಹೆಗಾರರೂ ಹೌದು.

78

ಪಿರಾಮಲ್ ತನ್ನ ಶೈಕ್ಷಣಿಕ ಪ್ರಯಾಣವನ್ನು ವಾಲ್ಸಿಂಗ್ಹಮ್ ಹೌಸ್ ಸ್ಕೂಲ್ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜ್, ಮುಂಬೈನಿಂದ ಪ್ರಾರಂಭಿಸಿದರು. 1980ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಯನ್ನು ಪಡೆದರು. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. 1992ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

88

1970ರ ದಶಕದ ಮಧ್ಯಭಾಗದಲ್ಲಿ, ಪೋಲಿಯೊ ಕೇಂದ್ರವನ್ನು ಸಹ-ಸ್ಥಾಪಿಸಿದರು. ಅಲ್ಲಿ ಸಹೋದ್ಯೋಗಿಗಳು ಸಾವಿರಾರು ಮಕ್ಕಳಿಗೆ ಚಿಕಿತ್ಸೆ ನೀಡಿದರು. 
ಪಿರಾಮಲ್ ಗ್ರೂಪ್‌ನ ಅಧ್ಯಕ್ಷರಾದ ಅಜಯ್ ಪಿರಾಮಲ್ ಅವರನ್ನು ವಿವಾಹವಾದ ಸ್ವಾತಿ ಪಿರಮಾಲ್ ತಮ್ಮ ವೃತ್ತಿಪರ ಪ್ರಯತ್ನಗಳನ್ನು ಕುಟುಂಬ ಜೀವನದೊಂದಿಗೆ ಸಮತೋಲನಗೊಳಿಸುತ್ತಾರೆ. 

click me!

Recommended Stories