ಅಬ್ಬಬ್ಬಾ..ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ, ಮಂತ್ಲೀ ಸ್ಯಾಲರಿ ಇಷ್ಟೊಂದಾ?

First Published | Mar 11, 2024, 3:54 PM IST

ಬಿಲಿಯನೇರ್‌ ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ. ಅಂಬಾನಿ ಗ್ರೂಪ್‌ನ ಹಲವು ಬಿಸಿನೆಸ್‌ನ್ನು ನಿರ್ವಹಿಸ್ತಾರೆ. ಸಿಕ್ಕಾಪಟ್ಟೆ ಲಕ್ಸುರಿಯಸ್ ಲೈಫ್‌ಸ್ಟೈಲ್‌ ಫಾಲೋ ಮಾಡೋ ಇಶಾ ಮಂತ್ಲೀ ಪಡೆಯೋ ಸ್ಯಾಲರಿ ಎಷ್ಟ್‌ ಗೊತ್ತಾ?

ಮುಕೇಶ್ ಅಂಬಾನಿ ಇಡೀ ಏಷ್ಯಾದ ಶ್ರೀಮಂತ ವ್ಯಕ್ತಿ. ತಮ್ಮ ವಿವಿಧ ಉದ್ಯಮಗಳ ಮೂಲಕ ಮುಕೇಶ್ ಅಂಬಾನಿ 963 ಕೋಟಿ ರೂ.ಗಳ ಆಸ್ತಿಯನ್ನು ಗಳಿಸಿದ್ದಾರೆ. ಈಗ, ಅಂಬಾನಿ ಕುಟುಂಬದ ಮುಂದಿನ ಪೀಳಿಗೆಯು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ಅಂಬಾನಿ ಮಕ್ಕಳ ಮೇಲಿದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿಯ ಮೂವರು ಮಕ್ಕಳಲ್ಲಿ ಇಶಾ ಅಂಬಾನಿ ಸಹ ಒಬ್ಬರು. ಬಿಲಿಯನೇರ್‌ ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಏಕೈಕ ಪುತ್ರಿ. ರಿಲಯನ್ಸ್ ಇಂಡಸ್ಟ್ರೀಸ್ ಬೆಳವಣಿಗೆಯ ಪ್ರಮುಖ ಭಾಗವಾಗಿದ್ದಾರೆ. 

Tap to resize

2006ರಲ್ಲಿ ಸ್ಥಾಪಿತವಾದ ರಿಲಯನ್ಸ್ ಇಂಡಸ್ಟ್ರೀಸ್‌ನ ರಿಟೇಲ್ ವಿಭಾಗವಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನ ಸಿಇಒ ಸ್ಥಾನಕ್ಕೆ ಇಶಾ ಅಂಬಾನಿ ಅವರ ನೇಮಕಾತಿಯನ್ನು ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಇಶಾ ಅಂಬಾನಿ ಯಾವಾಗಲೂ ಲಕ್ಸುರಿಯಸ್ ಲೈಫ್‌ಸ್ಟೈಲ್‌ ಫಾಲೋ ಮಾಡುತ್ತಾರೆ. ಬೆಲೆಬಾಳುವ ಡ್ರೆಸ್‌, ಆಭರಣಗಳನ್ನು ಧರಿಸುತ್ತಾರೆ.

ಗುಜರಾತ್‌ನ ಜಾಮ್ನಾ ನಗರದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಇಶಾ, ವಜ್ರ, ಚಿನ್ನ ಹೊದಿಸಿದ ಬ್ಲೌಸ್ ಧರಿಸಿ ಕಣ್ಣು ಕೋರೈಸುವಂತೆ ಮಿಂಚಿದರು.

ಪಾರ್ಟಿ, ಸಮಾರಂಭಗಳಲ್ಲೂ ಕೋಟಿ ಬೆಲೆ ಬಾಳುವ ಲೆಹಂಗಾ, ಡೈಮಂಡ್ ಸೆಟ್ ತೊಟ್ಟು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಸಹಜವಾಗಿಯೇ ಇಶಾ ಅಂಬಾನಿಯ ಆದಾಯವೆಷ್ಟು ಅನ್ನೋ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ. 

ವರದಿಯೊಂದರ ಪ್ರಕಾರ, ವಿಭಜಿತ ಲಾಭವನ್ನು ಹೊರತುಪಡಿಸಿ, ಇಶಾ ಅಂಬಾನಿ ಮಾಸಿಕವಾಗಿ 35 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.  ಡಿವಿಡೆಂಡ್ ಲಾಭವಿಲ್ಲದೆ, 31 ವರ್ಷದ ವಾರ್ಷಿಕ ಆದಾಯ ಸುಮಾರು ರೂ. 4.2 ಕೋಟಿ. ಆಗಿದೆ ಎಂದು ತಿಳಿದುಬಂದಿದೆ.

ಬರೋಬ್ಬರಿ 8,361 ಲಕ್ಷ ಕೋಟಿ ಮೌಲ್ಯದ ರಿಲಯನ್ಸ್ ರಿಟೇಲ್‌ನ್ನು ಇಶಾ ಅಂಬಾನಿ ಮುನ್ನಡೆಸುತ್ತಿದ್ದಾರೆ. RRVL ಭಾರತದ ಪ್ರಮುಖ ನಾಲ್ಕು ನಿಗಮಗಳಲ್ಲಿ ಒಂದಾಗಿದೆ. 18,500 ಸ್ಥಳಗಳು ಮತ್ತು ಡಿಜಿಟಲ್ ವಾಣಿಜ್ಯ ವೇದಿಕೆಗಳೊಂದಿಗೆ ದಿನಸಿ, ಗ್ರಾಹಕ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಜೀವನಶೈಲಿ ಮತ್ತು ಔಷಧೀಯ ನಾಲ್ಕು ಪ್ರಮುಖ ಬ್ರ್ಯಾಂಚ್‌ಗಳನ್ನು ಒಳಗೊಂಡಿದೆ.

AJIO, Tira, Dunzo, Netmeds, Reliance Digital, ಮತ್ತು Reliance Trendsನ್ನು ಸಹ ಇಶಾ ಅಂಬಾನಿ ನಿರ್ವಹಿಸುತ್ತಿದ್ದಾರೆ. ಇಶಾ ಅಂಬಾನಿ ಲೀಡರ್‌ಶಿಪ್‌ ವಹಿಸಿದ ನಂತರ ಫ್ಯಾಷನ್‌ ಬ್ರ್ಯಾಂಡ್‌ಗಳು ಕೋಟಿ ಕೋಟಿ ಗಳಿಸಿವೆ.

Latest Videos

click me!