Mother's Day: ಅಮ್ಮ ಇಷ್ಟಪಡೋದು ಇಂಥ ಪುಟ್ಟ ಪುಟ್ಟ ಗಿಫ್ಟ್‌ಗಳನ್ನೇ!

Published : May 10, 2025, 11:02 AM ISTUpdated : May 12, 2025, 12:02 PM IST

ನಾವು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನ(Mother’s Day)ವನ್ನು ಆಚರಿಸುತ್ತೇವೆ. ಈ ಬಾರಿ ನಾವು ಮೇ 11 ರಂದು ಈ ವಿಶೇಷ ದಿನವನ್ನು ಆಚರಿಸಲಿದ್ದೇವೆ. ತಾಯಂದಿರ ದಿನವು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಸೂಚಿಸುತ್ತದೆ. ಹಾಗಾಗಿ ಮಕ್ಕಳು ತಮ್ಮ ತಾಯಿಗೆ ಪ್ರೀತಿಯಿಂದ ಏನಾದರೂ ವಿಶೇಷ ಉಡುಗೊರೆಗಳನ್ನು ಕೊಡಬೇಕೆಂದು ಪ್ಲಾನ್ ಮಾಡುತ್ತಿದ್ದರೆ, ಇದನ್ನ ಕೊಡಿ..ಖುಷಿಯಾಗದಿದ್ರೆ ಕೇಳಿ! 

PREV
17
Mother's Day: ಅಮ್ಮ ಇಷ್ಟಪಡೋದು ಇಂಥ ಪುಟ್ಟ ಪುಟ್ಟ ಗಿಫ್ಟ್‌ಗಳನ್ನೇ!

ಕಸ್ಟಮೈಸ್ ಮಾಡಿದ ಉಡುಗೊರೆಗಳು ಇತ್ತೀಚಿನ ಟ್ರೆಂಡ್. ತಾಯಿ ತನಗಾಗಿ ಎಂದಿಗೂ ಗಿಫ್ಟ್ ಕೇಳುವುದಿಲ್ಲ. ಆದರೆ ನಾವು ಆಕೆಯ ಸ್ವಭಾವವನ್ನು ಅರ್ಥ ಮಾಡಿಕೊಂಡು ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡಿದರೆ ತುಂಬಾ ಖುಷಿಯಾಗುತ್ತಾಳೆ. ಗಿಫ್ಟ್‌ಗಳನ್ನು ನೀವೇ ತಯಾರಿಸಬಹುದು ಅಥವಾ ಆನ್‌ಲೈನ್‌ನಲ್ಲಿ ಸುಲಭವಾಗಿ ಆರ್ಡರ್ ಮಾಡಬಹುದು. ಉದಾಹರಣೆಗೆ ಮಗ್ ಕಪ್ ತೆಗೆದುಕೊಂಡು "Best Mom Ever [ತಾಯಿಯ ಹೆಸರು] ಎಂದು ಬರೆಯಬಹುದು. ಅಮ್ಮನಿಗೆ ಇಷ್ಟವಾದ ಫ್ಯಾಮಿಲಿ ಫೋಟೋಗಳನ್ನು ಸೇರಿಸಿ ಫ್ರೇಮ್ ಮಾಡಿಕೊಡಬಹುದು. ಮಾಡರ್ನ್ ತಾಯಂದಿರಾದರೆ ವಿಶೇಷ ಸಂದೇಶವುಳ್ಳ ಟೀ ಶರ್ಟ್ ಕೊಡಬಹುದು. ಟೀ ಶರ್ಟ್ ಮೇಲೆ "Super Mom", "My First Friend, My Forever Mom" ಇತ್ಯಾದಿ. ಬರೆಸಬಹುದು. ತಾಯಿಯ ಹೆಸರು ಅಥವಾ ಸಂದೇಶದೊಂದಿಗೆ ಕಸ್ಟಮೈಸ್ ಪರ್ಸನಲ್ ಡೈರಿ ಅಥವಾ ನೋಟ್ಬುಕ್  ಸಹ ಕೊಡಬಹುದು. ಧಾರ್ಮಿಕ ನಂಬಿಕೆಯುಳ್ಳವರಾದರೆ ತಾಯಿಯ ಜನ್ಮರಾಶಿಗೆ ಹೊಂದುವ ಆಭರಣಗಳನ್ನು ಕೊಡಿಸಬಹುದು. ಇನ್ನು ಗ್ರಿಟಿಂಗ್ ಕಾರ್ಡ್ ಸಾರ್ವಕಾಲಿಕ ಎಂದೇ ಹೇಳಬಹುದು. ಹೌದು, ಹ್ಯಾಂಡ್‌ಮೇಡ್  ಗ್ರೀಟಿಂಗ್ ಕಾರ್ಡ್ ಮೇಲೆ ನಿಮ್ಮ ಬರವಣಿಗೆಯಲ್ಲಿ ಏನಾದರೂ ಬರೆದು ಪ್ರೀತಿಯನ್ನು ವ್ಯಕ್ತಪಡಿಸಿಬಹುದು.  

27

ಅಮ್ಮ ಎಲ್ಲಿಯಾದರೂ ಹೋಗಬೇಕೆಂದು ಬಹುದಿನದಿಂದ ಇಷ್ಟಪಟ್ಟಿರುತ್ತಾರೆ. ಅದಕ್ಕೆ ಇದು ಸೂಕ್ತ ಸಂದರ್ಭವೆಂದು ಹೇಳಬಹುದು. ಅಮ್ಮ ಇಷ್ಟಪಡುವ ಸ್ಥಳಕ್ಕೆ ಪ್ರವಾಸವನ್ನು ಯೋಜಿಸಿ. ಅಮ್ಮನಿಗೆ ಯಾವ ಗುಟ್ಟು ಬಿಟ್ಟು ಕೊಡದೆ, ಸರ್ ಪ್ರೈಸ್ ಆಗಿ ಕರೆದುಕೊಂಡು ಹೋದರೆ ಇನ್ನು  ಖುಷಿಪಡುತ್ತಾಳೆ. ಅಷ್ಟೇ ಅಲ್ಲ, ದಿನವಿಡೀ ಮನೆ-ಕಚೇರಿ ಕೆಲಸ ಎಂದು ಬೇಸತ್ತವರಿಗೆ ಇದು ರಿಲಾಕ್ಸ್ ಮಾಡುವ ಸಮಯ. 

37

ಇನ್ನು ಅಮ್ಮ ಹೆಚ್ಚು ಮೊಬೈಲ್ ಫೋನ್ ಅನ್ನು ಉಪಯೋಗಿಸುತ್ತಿದ್ದರೆ ಅದನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ಬಹುಪಯೋಗಿ ಮೊಬೈಲ್ ಹೋಲ್ಡರ್ ಪರ್ಸ್ ಅನ್ನು ಉಡುಗೊರೆಯಾಗಿ ನೀಡಬಹುದು. ಇದು ಸುಂದರವಾಗಿರುವುದು ಮಾತ್ರವಲ್ಲದೆ ಉಪಯುಕ್ತವೂ ಆಗಿದೆ. ವಾಕ್, ಮಾರ್ಕೆಟ್ ಹೀಗೆ ಎಲ್ಲೆಡೆ ಅಮ್ಮ ಅದನ್ನು ಸುಲಭವಾಗಿ ಕ್ಯಾರಿ ಮಾಡಬಹುದು.  

47

ಧಾರಾವಾಹಿ ಪ್ರಿಯರಾದ ಅಮ್ಮಂದಿರು ಸಿನಿಮಾ ನೋಡದೆಯೇ ಇರುತ್ತಾರೆಯೇ. ಹಾಗಾಗಿ ಅಮ್ಮನ ನೆಚ್ಚಿನ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿ, ಅಥವಾ ಮನೆಯಲ್ಲಿ ಸಿನಿಮಾ ಸೆಟ್ ಮಾಡಿ  ತಾಯಿಯ ನೆಚ್ಚಿನ ತಿಂಡಿಗಳನ್ನು ಸವಿಯಿರಿ. 

57

ಅಮ್ಮ ಎಷ್ಟೇ ಸಿಂಪಲ್ ಅಂದ್ರು ಕ್ರೀಮ್, ಪೌಡರ್ ಹಚ್ಚದೆಯೇ ಇರುವುದಿಲ್ಲ. ಹೆಚ್ಚು ಮೇಕಪ್ ಮಾಡದ ಅಮ್ಮಂದಿರಾದರೆ ಗುಣಮಟ್ಟದ ನೈಸರ್ಗಿಕ ಕ್ರೀಂ, ಶಾಂಪೂ, ಪೌಡರ್ ತಂದುಕೊಡಿ. ಮೇಕಪ್ ಪ್ರಿಯರಾಗಿದ್ದರೆ ಲಿಪ್ಸ್ಟಿಕ್, ಕ್ರೀಮ್ ಮತ್ತು ಐಲೈನರ್ ನಂತಹ ಉತ್ತಮ ಗುಣಮಟ್ಟದ ಸೌಂದರ್ಯವರ್ಧಕಗಳು ತಾಯಿಗೆ ಹೆಚ್ಚು ಖುಷಿ ಕೊಡುತ್ತವೆ. ಅಂದಹಾಗೆ ಬ್ರ್ಯಾಂಡ್‌ಗೆ ಅನುಗುಣವಾಗಿ ಆಯ್ಕೆಮಾಡಿ.

67

ಸದಾ ಅಮ್ಮನಿಗೆ ಅಡುಗೆ ಮಾಡಿ ಒಂದು ಲೆವೆಲ್‌ಗೆ ಬೋರ್ ಬಂದಿರುತ್ತದೆ. ಆದರೆ ಇದನ್ನೆಲ್ಲಾ ತೋರಿಸಿಕೊಳ್ಳುವುದಿಲ್ಲ. ಈ ತಾಯಂದಿರ ದಿನದಂದು, ಅಮ್ಮನಿಗೆ ಅಡುಗೆಮನೆಗೆ ರಜೆ ನೀಡಿ, ಟಿವಿ ಅಥವಾ ಸಿನಿಮಾ ಹಾಕಿ ಕೂರಿಸಿ. ನೆಚ್ಚಿನ ಖಾದ್ಯವನ್ನು ತಯಾರಿಸಿ ಬಡಿಸಿ. ಮಕ್ಕಳು ಪ್ರೀತಿಯಿಂದ ಮಾಡಿದ ಅಡುಗೆಯನ್ನು ಅಮ್ಮ ಖುಷಿಯಿಂದ ಸ್ವೀಕರಿಸುತ್ತಾಳೆ. 

77
silk sarees care tips

ಅಮ್ಮನ ಬಳಿ ಎಷ್ಟು ಸೀರೆ ಇದ್ದರೂ ಕಡಿಮೆಯೇ. ಹಾಗಾಗಿ ತಮ್ಮ ತಾಯಿ ಇಷ್ಟಪಡುವ ಡಿಸೈನ್, ಕಲರ್ ಯಾವುದೆಂದು ಹತ್ತಿರದಿಂದ ನೋಡಿದ ನಿಮಗೆ ಖಂಡಿತ ಗೊತ್ತಿರುತ್ತದೆ. ಗೊತ್ತಿಲ್ಲದಿದ್ದರೆ ಅಪ್ಪನ ಬಳಿಯಾದರೂ ಕೇಳಿ ತಿಳಿದುಕೊಳ್ಳಿ. ಸಾಮಾನ್ಯವಾಗಿ ಅಮ್ಮಂದಿರಿಗೆ ಕಾಟನ್ ಅಥವಾ ಸಿಲ್ಕ್ ಸ್ಯಾರಿ ಮೇಲೆ ವ್ಯಾಮೋಹ ಜಾಸ್ತಿ. ನೀವಿದನ್ನು ಗಿಫ್ಟ್ ಆಗಿ ನೀಡಿದರೂ ಅಮ್ಮ ಫುಲ್ ಖುಷ್. ಸಾಧ್ಯವಾದಷ್ಟು ನೆಚ್ಚಿನ ಬಣ್ಣ,  ಗುಣಮಟ್ಟದ ಸೀರೆಯನ್ನು ಉಡುಗೊರೆಯಾಗಿ ನೀಡಿ.  

Read more Photos on
click me!

Recommended Stories