ಕ್ಯಾಕ್ಟಸ್ ಆಯಿಲ್ ಕೂದಲ ಬೆಳವಣಿಗೆಯಲ್ಲಿ ಹೇಗೆ ಸಹಾಯ ಮಾಡತ್ತೆ?

First Published | Jun 9, 2022, 6:20 PM IST

ಕ್ಯಾಕ್ಟಸ್ ಅಥವಾ ಕಳ್ಳಿ ಗಿಡವನ್ನು ನಾವು ಸಾಮಾನ್ಯವಾಗಿ ಅಲಂಕಾರಕ್ಕಾಗಿ ಮನೆಯಲ್ಲಿ ಬೆಳೆಸುತ್ತೇವೆ. ಇದನ್ನು ಕೆಲವರು ಕೆಟ್ಟದು ಎಂದರೆ, ಇನ್ನೂ ಕೆಲವರು ಲಕ್ಕಿ ಪ್ಲ್ಯಾಂಟ್ ಎಂದು ಸಹ ಕರೆಯುತ್ತಾರೆ. ನಾವು ಇವತ್ತು ಇದ್ಯಾವುದರ ಬಗ್ಗೆಯೂ ಮಾತಾಡ್ತಾ ಇಲ್ಲ. ಬದಲಾಗಿ ಕ್ಯಾಕ್ಟಸ್ ಆಯಿಲ್ ಬಗ್ಗೆ ಹೇಳ್ತಿದ್ದೇವೆ.

ಕ್ಯಾಕ್ಟಸ್  (Cactus) ಸಸ್ಯವು ಮುಳ್ಳಿನ ಸಸ್ಯವಾದರೂ, ಇದು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ತಿಳಿದಿದೆಯೇ? ಜೀರ್ಣಕ್ರಿಯೆಯಿಂದ ಹಿಡಿದು ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವವರೆಗೆ, ಕ್ಯಾಕ್ಟಸ್ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಹೊಂದಿದೆ. ಆದರೆ ಕ್ಯಾಕ್ಟಸ್ ಕೂದಲಿಗೂ ಪ್ರಯೋಜನಕಾರಿ ಅನ್ನೋದು ನಿಮಗೆ ತಿಳಿದಿದೆಯೇ?

ಕ್ಯಾಕ್ಟಸ್ ಆಯಿಲ್  ಕೂದಲಿಗೆ(Hair) ಹೇಗೆ ಪ್ರಯೋಜನಕಾರಿ?
ಕ್ಯಾಕ್ಟಸ್ ಎಣ್ಣೆಯು ಅನೇಕ ಔಷಧೀಯ ಗುಣ ಹೊಂದಿದ್ದು, ಇದು ಕೂದಲಿಗೆ ಪೋಷಣೆ ನೀಡುತ್ತೆ. ಇದು ಸ್ಮೂತಾದ, ಸ್ಟ್ರಾಂಗ್ ಆದ, ಆರೋಗ್ಯಕರ ಕೂದಲು ಮತ್ತು ನೆತ್ತಿ, ಉತ್ತಮ ಕೂದಲಿನ ಬೆಳವಣಿಗೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. 

Tap to resize

ಅಷ್ಟೇ ಅಲ್ಲ, ಈ ಕ್ಯಾಕ್ಟಸ್ ಎಣ್ಣೆಯು ಕೂದಲಿಗೆ ಶಾಖದಿಂದ ಉಂಟಾಗುವ ಹಾನಿಯನ್ನು ತಡೆಯುತ್ತೆ. ಅಲ್ಲದೇ, ಇದು ಕೂದಲನ್ನು ಸೂರ್ಯನಿಂದ(Sun) ರಕ್ಷಿಸುತ್ತದೆ. ಆ ಮೂಲಕ ಕೂದಲಿಗೆ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಿ ಆರೋಗ್ಯಕರ ಕೂದಲನ್ನು ನೀಡುತ್ತೆ. 

ಕ್ಯಾಕ್ಟಸ್ ನಲ್ಲಿ ಯಾವ ರೀತಿಯ ಪೋಷಕಾಂಶಗಳು ಇರುತ್ತವೆ?
ಕ್ಯಾಕ್ಟಸ್ನಲ್ಲಿ ವಿಟಮಿನ್ ಸಿ, ಇ ಮತ್ತು ಎ ಮೊದಲಾದ ಅಂಶಗಳಿವೆ. ಇದಲ್ಲದೆ, ಇದರ ಎಣ್ಣೆಯಲ್ಲಿ ಐರನ್, ಕ್ಯಾಲ್ಸಿಯಂ(Calcium), ಪೊಟ್ಯಾಸಿಯಮ್ ಮತ್ತು ಒಮೆಗಾ -3 ಸಹ ಇದೆ. ಕ್ಯಾಕ್ಟಸ್ ಎಣ್ಣೆಯು ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತದೆ, ಇದು ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿದೆ.  

ಫ್ರೀ-ರಾಡಿಕಲ್ ಗಳ (Free radical)ವಿರುದ್ಧ ಹೋರಾಡುವ ವಿಟಮಿನ್ ಇ ಆಂಟಿ ಆಕ್ಸಿಡೆಂಟ್ ನಂತೆ ಇದು ಕೆಲಸ ಮಾಡುತ್ತದೆ. ಈ ತೈಲವು ಅಮೈನೋ ಆಮ್ಲಗಳನ್ನು ಸಹ ಹೊಂದಿದೆ, ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಹಾಗಾದರೆ ಕೂದಲಿಗೆ ಕ್ಯಾಕ್ಟಸ್ ಎಣ್ಣೆಯ ಪ್ರಯೋಜನಗಳು ಯಾವುವು ತಿಳಿಯೋಣ.

ಕೂದಲನ್ನು ಮೃದುವಾಗಿಸುತ್ತದೆ (Smooth)
ಕ್ಯಾಕ್ಟಸ್ ಸಸ್ಯಗಳು ತೇವಾಂಶ ಸಂಗ್ರಹಿಸುತ್ತವೆ. ಈ ಕಾರಣಕ್ಕಾಗಿಯೇ ಕ್ಯಾಕ್ಟಸ್ ಆಯಿಲ್ ಉತ್ತಮ ಮಾಯಿಶ್ಚರೈಸಿಂಗ್ ಏಜೆಂಟ್ ಆಗಿದೆ. ಇದರಲ್ಲಿರುವ ಜೀವಸತ್ವಗಳು ಕೂದಲಿಗೆ ಪೋಷಣೆ ನೀಡುತ್ತೆ. ಕ್ಯಾಕ್ಟಸ್ ಎಣ್ಣೆ ಹಚ್ಚೋದ್ರಿಂದ ಕೂದಲಿನಲ್ಲಿ ಒಂದು ಪದರವು ಉಂಟಾಗುತ್ತದೆ, ಇದು ಕೂದಲನ್ನು ಮೃದು, ಬಲವಾದ ಮತ್ತು ಹೊಳೆಯುವಂತೆ ಮಾಡುತ್ತದೆ.
 

ಕೂದಲು ಉದುರುವುದನ್ನು(Hair fall) ನಿಯಂತ್ರಿಸುತ್ತೆ
ಕ್ಯಾಕ್ಟಸ್ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಕೂದಲು ಬೆಳೆಯಲು ಸಹಾಯ ಮಾಡುತ್ತೆ ಮತ್ತು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತೆ. ಒಮೆಗಾ ಕೊಬ್ಬಿನಾಮ್ಲಗಳು ಕೂದಲಿನ ಬೆಳವಣಿಗೆಗೆ ಪ್ರಮುಖವಾಗಿವೆ, ಇದುಕೂದಲು ಉದುರುವಿಕೆಯನ್ನು ತಡೆಯುತ್ತದೆ.

ನೆತ್ತಿಯ ಆರೋಗ್ಯಕ್ಕೆ ಉತ್ತಮ
ಕ್ಯಾಕ್ಟಸ್ ನೆತ್ತಿಯ ಆರೋಗ್ಯಕ್ಕೆ ಬೆಸ್ಟ್ ಆಯಿಲ್(Oil) ಆಗಿದೆ, ಏಕೆಂದರೆ ಅದರಲ್ಲಿರುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್-ಇ ತಲೆಬುರುಡೆಯನ್ನು ಪೋಷಿಸುತ್ತೆ. ಇದು ನಿಮ್ಮ ನೆತ್ತಿಯನ್ನು ಮಾಯಿಶ್ಚರೈಸ್ ಮಾಡುವ ಮೂಲಕ ತುರಿಕೆಯನ್ನು ನಿಯಂತ್ರಿಸುತ್ತೆ ಮತ್ತು ಹೇರ್ ರೂಟ್ಸ್ ಗಳನ್ನು ಬಲಪಡಿಸುತ್ತದೆ.
 

ಕೂದಲಿನ ಬೆಳವಣಿಗೆಗೆ (Hair growth) ಸಹಕಾರಿ
ನೆತ್ತಿ ಆರೋಗ್ಯಕರವಾಗಿದ್ದರೆ, ಕೂದಲು ಸಹ ಆರೋಗ್ಯವಾಗಿರುತ್ತದೆ. ಕ್ಯಾಕ್ಟಸ್ ಎಣ್ಣೆಯು ಕೊಬ್ಬಿನಾಮ್ಲಗಳನ್ನು ಹೊಂದಿದ್ದು , ಇದು ಕೂದಲಿನ ಬೆಳವಣಿಗೆಗೆ ಅತ್ಯಗತ್ಯವಾಗಿದೆ, ಇದು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತೆ.

ಸೂರ್ಯನ ಹಾನಿಕಾರಕ ಕಿರಣಗಳಿಂದ (Sun rays) ಕೂದಲನ್ನು ರಕ್ಷಿಸುತ್ತದೆ
ಇದರಲ್ಲಿರುವ ಅಮೈನೋ ಆಮ್ಲಗಳು ಕಾಲಜನ್ ಅನ್ನು ಹೆಚ್ಚಿಸುತ್ತವೆ, ಇದು ಜೀವಕೋಶಗಳಿಗೆ ವೇಗವಾಗಿ ಉತ್ತೇಜನವನ್ನು ನೀಡುತ್ತದೆ. ಕಾಲಜನ್ ಚರ್ಮವನ್ನು ಯಂಗ್ ಆಗಿ ಇಡುವುದಲ್ಲದೆ, ಸೂರ್ಯನ ಕಿರಣಗಳಂತಹ ಪರಿಸರದಲ್ಲಿನ ಬದಲಾವಣೆಗಳಿಂದ ರಕ್ಷಿಸುತ್ತದೆ. 

ಸ್ಟೈಲಿಂಗ್ ಟೂಲ್ ಗಳಿಂದ ಉಂಟಾಗುವ ಹಾನಿ ನಿವಾರಣೆ
ಅಲೋವೆರಾದಂತೆ (Aloevera), ಕ್ಯಾಕ್ಟಸ್ ಎಣ್ಣೆ ಸಹ ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ, ಇದು ಒರಟಾದ, ನಿರ್ಜೀವ ಮತ್ತು ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಕೆಲಸ ಮಾಡುತ್ತದೆ. ಜೊತೆಗೆ ಕೂದಲಿಗೆ ಉತ್ತಮ ಪೋಷಣೆಯನ್ನು ಸಹ ನೀಡುತ್ತೆ. 

Latest Videos

click me!