ಕೋವಿಡ್ -19ರಿಂದಾಗಿ ಸಣ್ಣ ವಯಸಲ್ಲೇ ದೊಡ್ಡವರಾಗ್ತಿದ್ದಾರೆ ಹೆಣ್ಣು ಮಕ್ಕಳು

Published : Nov 11, 2022, 05:22 PM IST

ಕೊರೋನಾದಿಂದಾಗಿ ಉಂಟಾದ ಸಮಸ್ಯೆಗಳು ಒಂದೆರಡಲ್ಲ, ಜನರಲ್ಲಿ ಇಮ್ಯೂನಿಟಿಯೇ ಕಡಿಮೆಯಾಗಿದೆ, ಬೇಗನೆ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಇದಲ್ಲದೇ ಹೆಣ್ಣು ಮಕ್ಕಳಲ್ಲೂ ಸಮಸ್ಯೆ ಕಂಡು ಬರುತ್ತಿದೆ. ಹೌದು, ಈ ಕೊರೋನಾದಿಂದಾಗಿ ಹೆಣ್ಣು ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಋತುಚಕ್ರ ಆಗುತ್ತಿರುವುದು ಕಂಡು ಬರುತ್ತಿದೆ. ಇದೇನು ಅರ್ಲಿ ಪ್ಯೂಬರ್ಟಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ…

PREV
19
ಕೋವಿಡ್ -19ರಿಂದಾಗಿ ಸಣ್ಣ ವಯಸಲ್ಲೇ ದೊಡ್ಡವರಾಗ್ತಿದ್ದಾರೆ ಹೆಣ್ಣು ಮಕ್ಕಳು

ಪಿರಿಯಡ್ಸ್(Periods) ಬೇಗನೆ ಪ್ರಾರಂಭವಾಗೋದು ಅಸಾಮಾನ್ಯ. ಇದು ಪ್ರತಿ 5,000 ದಿಂದ 10,000 ಮಕ್ಕಳಲ್ಲಿ ಒಬ್ಬರ ಮೇಲೆ ಪರಿಣಾಮ ಬೀರಿದೆ. ಪ್ರಪಂಚದಾದ್ಯಂತದ ವೈದ್ಯರು ಮತ್ತು ಪೋಷಕರು ಕಡಿಮೆ ವಯಸ್ಸಿನ ಹುಡುಗಿಯರಲ್ಲಿ ಪಿರಿಯಡ್ಸ್ ಹೊಂದುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ನೋಡಿದ್ದಾರೆ. 

29

ಕೆಲವು ಸಂದರ್ಭಗಳಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಸ್ತನ(Breast) ಡೆವೆಲಪ್ ಆಗುತ್ತಿರುವುದು ಕಂಡುಬಂದಿದೆ ಮತ್ತು 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಋತುಚಕ್ರ ಹೊಂದಲು ಪ್ರಾರಂಭಿಸಿದ್ದಾರೆ. ದಿ ಇಟಾಲಿಯನ್ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ಸಮಯದಲ್ಲಿ ಬಾಲಕಿಯರಲ್ಲಿ ಅಕಾಲಿಕ ಪ್ರೌಢಾವಸ್ಥೆಯ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಾಣುತ್ತಿದೆ.

39

ಅರ್ಲಿ ಪ್ಯೂಬರ್ಟಿ (Early puberty)ಎಂದರೇನು? 
ಮಗುವಿನ ದೇಹವು ವಯಸ್ಕ ದೇಹವಾಗಿ ರೂಪಾಂತರಗೊಳ್ಳಲು ಪ್ರಾರಂಭಿಸಿದಾಗ ಅರ್ಲಿ ಪ್ಯೂಬರ್ಟಿ ಸಂಭವಿಸುತ್ತೆ, ಇದು ಬಹಳ ಬೇಗನೆ ಸಂಭವಿಸುತ್ತೆ. ಹುಡುಗಿಯರಲ್ಲಿ ಎಂಟು ಮತ್ತು ಹುಡುಗರಲ್ಲಿ ಒಂಬತ್ತು ವರ್ಷ ವಯಸ್ಸಿನ ಮೊದಲು ಪ್ರಾರಂಭವಾಗುವ  ಪ್ಯೂಬರ್ಟಿಯನ್ನು ಅರ್ಲಿ ಪ್ಯೂಬರ್ಟಿ ಎಂದು ಪರಿಗಣಿಸಲಾಗುತ್ತೆ . 

49

ಅಕಾಲಿಕ ಋತುಚಕ್ರದ ಲಕ್ಷಣಗಳೆಂದರೆ, ಸ್ತನ ಹಿಗ್ಗುವಿಕೆ ಮತ್ತು ಹುಡುಗಿಯರಲ್ಲಿ ಮೊದಲ  ಪಿರಿಯಡ್ಸ್, ಹಿಗ್ಗಿದ ಅಂಡಕೋಶ ಮತ್ತು ಲಿಂಗ, ಮುಖದ ಮೇಲೆ ಕೂದಲು (Hairs)ಮತ್ತು ಹುಡುಗರಲ್ಲಿ ಆಳವಾದ ಧ್ವನಿ, ಗುಪ್ತಾಂಗ ಅಥವಾ ಕಂಕುಳ ಕೂದಲು, ತ್ವರಿತ ಬೆಳವಣಿಗೆ, ಮೊಡವೆ ಮತ್ತು ವಯಸ್ಕ ದೇಹದ ವಾಸನೆ.

59

ಸಾಂಕ್ರಾಮಿಕ ರೋಗದಿಂದಾಗಿ ಈ ವಿಲಕ್ಷಣ ಸಮಸ್ಯೆಗಳಿಗೆ ಸಾಕ್ಷಿಯಾಗಿರುವ ಏಕೈಕ ದೇಶ ಭಾರತವಲ್ಲ(India). ಇಟಲಿಯಿಂದ ಟರ್ಕಿಯವರೆಗೆ, ಯುಎಸ್ ನಿಂದ ಯುರೋಪಿಯನ್ ದೇಶಗಳವರೆಗೆ, ವಿಶ್ವದಾದ್ಯಂತ ಶಿಶುವೈದ್ಯರು ಅಕಾಲಿಕ ಪಿರಿಯಡ್ಸ್ ಮತ್ತು ಪ್ಯೂಬರ್ಟಿಯ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದ್ದಾರೆ.

69

ಮಾನಸಿಕವಾಗಿ(Mentally) ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತೆ 
ಅರ್ಲಿ ಪ್ಯೂಬರ್ಟಿ, ವಿಶೇಷವಾಗಿ ಹುಡುಗಿಯರಲ್ಲಿ, ಕೆಲವು ನೋವಿನ ಪರಿಸ್ಥಿತಿಗಳಿಗೆ ಕಾರಣವಾಗುತ್ತೆ . ಹಾಗೆಯೇ ಅವರ ಹೆತ್ತವರಿಗೆ ಸಹ ಇದೊಂದು ಸಮಸ್ಯೆಯಾಗುತ್ತೆ. ಪ್ಯೂಬರ್ಟಿ ಹಾರ್ಮೋನ್ ಮಟ್ಟವನ್ನು ಬದಲಾಯಿಸುತ್ತೆ , ಆದ್ದರಿಂದ ಅದು ಮಕ್ಕಳ  ಭಾವನೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ .

79

ಹೆಚ್ಚಿನ ಮಕ್ಕಳು ಮುಟ್ಟಿನ ವಿಷಯಗಳನ್ನು ನಿರ್ವಹಿಸುವಷ್ಟು ಪ್ರಬುದ್ಧರಾಗಿರೋದಿಲ್ಲ. ಅವರು ತಮ್ಮ ದೇಹದ ಬಗ್ಗೆ ಸಡನ್ ಆಗಿ ಜಾಗೃತರಾಗುತ್ತಾರೆ. ಇವು ಖಿನ್ನತೆ(Depression), ತಿನ್ನುವ ಅಸ್ವಸ್ಥತೆ, ಮಾದಕವಸ್ತುಗಳ ದುರುಪಯೋಗ ಮತ್ತು ಸಮಾಜವಿರೋಧಿ ನಡವಳಿಕೆಯನ್ನು ಹೆಚ್ಚಿಸಬಹುದು. ಅಲ್ಲದೇ ರಕ್ತವನ್ನು ನೋಡುವಂತಹ ಧೈರ್ಯ ಕೂಡ ಅವರಿಗೆ ಇರೋದಿಲ್ಲ.

89

ಹಾಗಾಗಿ ಈ ಅರ್ಲಿ ಪ್ಯೂಬರ್ಟಿ ಸ್ಥಿತಿಗೆ ಮುಖ್ಯ ಚಿಕಿತ್ಸೆ ಇದೆ, ಜಿಎನ್ಆರ್ಹೆಚ್ ಅನಲಾಗ್ ಥೆರಪಿ ಎಂದು ಕರೆಯಲ್ಪಡುವ ಹಾರ್ಮೋನ್ ಥೆರಪಿ. ಆದರೆ ಕೆಲವು ಮಕ್ಕಳು ಮತ್ತು ಕುಟುಂಬಗಳು(Family) ಅರಿವಿನ ಕೊರತೆಯಿಂದಾಗಿ ಅಥವಾ ಋತುಚಕ್ರದೊಂದಿಗೆ ಬರುವ ಒತ್ತಡದಿಂದಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗೋದಿಲ್ಲ.

99

ಆದ್ದರಿಂದ ಮಕ್ಕಳನ್ನು ಮೊದಲೇ ತಮ್ಮ ಬಾಡಿ ಬಗ್ಗೆ,  ಅರ್ಲಿ ಪ್ಯೂಬರ್ಟಿ, ಪಿರಿಯಡ್ಸ್ ಬಗ್ಗೆ ಹೀಗೆ ಸಾದ್ಯವಷ್ಟು ಪೋಷಕರು ಹೇಳಿಕೊಟ್ಟರೆ ಮತ್ತು ಹಾಗೆ ಏನೇ ಪ್ರಾಬ್ಲೆಮ್ಸ್ (Problems) ಬಂದ್ರು ನಮ್ಮಲ್ಲಿ ಹೇಳಿಕೊಳ್ಳಿ ಎಂದು ಮಕ್ಕಳಲ್ಲಿ ಧೈರ್ಯ, ನಂಬಿಕೆ ಮೂಡಿಸಿದ್ರೆ, ಮಕ್ಕಳು ಈ  ಎಲ್ಲಾ ಸಮಸ್ಯೆಗಳ ಮದ್ಯೆಯೂ ತಮ್ಮ ಬಾಲ್ಯವನ್ನು ಎಂಜಾಯ್ ಮಾಡಬಹುದು.        
 

Read more Photos on
click me!

Recommended Stories