ಏನೇನೋ ನೋವು, ಕೆಲಸದ ಟೆನ್ಷನ್‌ನಿಂದಲೂ ಕಾಡಬಹುದು, ಸರ್ವೆ ಹೇಳುವುದೇನು?

Effects of Heavy Workload: ಕೂಲ್ ಕೂಲ್ ಆಗಿ ಕೆಲಸ ಮಾಡೋದು ಒಂದು ಕಲೆ. ಆದ್ರೆ ಈಗಿನ ದಿನಗಳಲ್ಲಿ ಅದು ಅಸಾಧ್ಯ ಎನ್ನಬಹುದು. ಬಹುತೇಕರು ಒತ್ತಡದಲ್ಲಿಯೇ ಕೆಲಸ ಮಾಡ್ತಿರುತ್ತಾರೆ. ಈ ಒತ್ತಡ ಅವರಿಗೆ ತಿಳಿಯದೆ ಅವರ ಆರೋಗ್ಯ ಹಾಳು ಮಾಡ್ತಿರುತ್ತದೆ.

Increased Stress Due To Workload

ನೌಕರಿ ಮಾಡಿದ್ರೂ ಟೆನ್ಷನ್, ಮಾಡದೆ ಹೋದ್ರೂ ಟೆನ್ಷನ್. ಸ್ವಲ್ಪ ರಿಲ್ಯಾಕ್ಸ್ ಆಗಿ ಮಾಡಬಹುದಾದ ಕೆಲಸವೇ ಇಲ್ಲವಾ ಎನ್ನುವ ಪ್ರಶ್ನೆ ಅನೇಕ ಬಾರಿ ಉದ್ಭವವಾಗುತ್ತದೆ. ಯಾಕೆಂದ್ರೆ ಈ ಟೆನ್ಷನ್ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲಸ ಹಾಗೂ ಒತ್ತಡದಿಂದ ಆಗುವ ಪರಿಣಾಮಗಳು ಏನು ಎನ್ನುವ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಿವೆ. ಇತ್ತೀಚಿಗೆ ನಡೆದ ಸಮೀಕ್ಷೆಯೊಂದರಲ್ಲೂ ಕೆಲಸ ಹಾಗೂ ಅದ್ರ ಒತ್ತಡದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. 

ನೀವೂ ಕೆಲಸ (Work) ಮಾಡೋರಾಗಿದ್ದರೆ ಹೆಚ್ಚು ಒತ್ತಡ (Stress) ವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಯಾಕೆಂದ್ರೆ ಕೆಲಸ ಮಾಡುವಾಗ ಹೆಚ್ಚು ಒತ್ತಡಕ್ಕೆ ಒಳಗಾದ್ರೆ ಅದು ಗಂಭೀರ ಅನಾರೋಗ್ಯ (Illness) ಕ್ಕೆ ದಾರಿ ಮಾಡಿಕೊಡುತ್ತದೆ. ವರದಿಯ ಪ್ರಕಾರ, ಕೆಲಸದ ಒತ್ತಡ, ಉದ್ಯೋಗಿಗಳ ಮಾನಸಿಕ (Mental) ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲಸಗಾರನ ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ. ವರದಿಯ ಪ್ರಕಾರ, ಶೇಕಡಾ 77 ರಷ್ಟು ಜನರು, ಕೆಲಸದಿಂದ ಒತ್ತಡ, ಆತಂಕ ಮತ್ತು ಖಿನ್ನತೆ (Depression) ಯಂತಹ ಸಮಸ್ಯೆ ಶುರುವಾಗಿದೆ ಎಂದಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇಕಡಾ 14 ರಷ್ಟು ಮಂದಿ ತಟಸ್ಥವಾಗಿದ್ದರೆ  ಶೇಕಡಾ 9 ಪ್ರತಿಶತ ಜನರು ಕೆಲಸದಿಂದ ಯಾವುದೇ ಸಮಸ್ಯೆ ಆಗ್ತಿಲ್ಲ ಎಂದಿದ್ದಾರೆ. 

ಸರ್ವೆಯ ವಿವರ : ಈ ಸರ್ವೆಯನ್ನು ಹೆಚ್ ಆರ್ ಸಲ್ಯೂಷನ್ ಸಪ್ಲೈಯರ್ ಜೀನಿಯಸ್ ಕನ್ಸಲ್ಟೆಂಟ್ಸ್ ಮಾಡಿದೆ. ಈ ಸಮೀಕ್ಷೆ  ಸೆಪ್ಟೆಂಬರ್ 5 ರಿಂದ ಅಕ್ಟೋಬರ್ 15, 2022 ರವರೆಗೆ ನಡೆದಿದೆ. ಬ್ಯಾಂಕಿಂಗ್ ಮತ್ತು ಹಣಕಾಸು, ನಿರ್ಮಾಣ ಮತ್ತು ಎಂಜಿನಿಯರಿಂಗ್, ಶಿಕ್ಷಣ, ಎಫ್‌ಎಂಸಿಜಿ, ಐಟಿ, ಐಟಿಇಎಸ್ ಮತ್ತು ಬಿಪಿಒ, ಲಾಜಿಸ್ಟಿಕ್ಸ್ ಮತ್ತು ಉತ್ಪಾದನೆಯಂತಹ ಅನೇಕ ವಲಯಗಳಲ್ಲಿ ಈ ಸರ್ವೆ ನಡೆದಿದೆ. ಸರ್ವೆಯಲ್ಲಿ 1,380 ಉದ್ಯೋಗಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.  

ಫ್ರೋಝನ್ ಪಿಜ್ಜಾ ತಿನ್ನೋ ಮುಂಚೆ ತಿಳ್ಕೊಂಡಿರಿ, ಇದು ಆಯಸ್ಸು ಕಡಿಮೆ ಮಾಡುತ್ತೆ

ವರದಿಯಲ್ಲಿ ಏನಿದೆ ? : ಸರ್ವೆಯ ವರದಿ ಪ್ರಕಾರ, ಸರ್ವೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 82ರಷ್ಟು ಮಂದಿ, ಆರೋಗ್ಯ ಸಮಸ್ಯೆಗಳಾದ ಇಮ್ಯುನೊ ಡಿಫಿಷಿಯನ್ಸಿ ಡಿಸಾರ್ಡರ್‌ಗಳು, ಜಠರಗರುಳಿನ ಅಸ್ವಸ್ಥತೆಗಳು ಮತ್ತು ಮಸ್ಕ್ಯುಲೋಸ್ಕೆಲಿಟಲ್ ಡಿಸಾರ್ಡರ್‌ ಗೆ ನೇರವಾಗಿ ಕೆಲಸದ ಒತ್ತಡ ಕಾರಣ ಎಂದಿದ್ದಾರೆ.

ಒತ್ತಡದಿಂದ ಮಾನಸಿಕ ಆರೋಗ್ಯದಲ್ಲಿ ಏರುಪೇರು : ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 73 ರಷ್ಟು ಜನರು ಕೆಲಸದ ಒತ್ತಡವನ್ನು ನಿಭಾಯಿಸಲು ಮಿಡ್ ವರ್ಕ್ ನ್ಯಾಪ್, ಕೆಲಸದ ಮಧ್ಯೆ ಸಣ್ಣ ನಿದ್ರೆ ಮಾಡ್ತೇವೆ ಎಂದಿದ್ದಾರೆ. ಶೇಕಡಾ 18ರಷ್ಟು ಜನರು ಅದರ ಬಗ್ಗೆ ಖಚಿತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮತ್ತೆ ಶೇಕಡಾ 9ರಷ್ಟು ಜನರು, ಕೆಲಸದ ಒತ್ತಡದಿಂದ ಮಾನಸಿಕ ಸಮಸ್ಯೆಯಾಗುತ್ತದೆ ಎಂಬುದನ್ನು ಒಪ್ಪಲು ಸಿದ್ಧವಿಲ್ಲ. ಕೆಲಸ ಹೆಚ್ಚಾದಂತೆ ಒತ್ತಡ ಹೆಚ್ಚಾಗುವುದು ಸಹಜ. ಜವಾಬ್ದಾರಿಗೆ ತಕ್ಕಂತೆ ಟೆನ್ಷನ್ ಜಾಸ್ತಿಯಾಗುತ್ತದೆ. ಹಾಗಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೆಲ ಜನರು ಕೆಲಸದ ದಿನಗಳನ್ನು ಕಡಿಮೆ ಮಾಡಬೇಕು ಎಂದಿದ್ದಾರೆ. ಶೇಕಡಾ 68ರಷ್ಟು ಜನರು ಕೆಲಸದ ದಿನಗಳನ್ನು ಕಡಿತಗೊಳಿಸಬೇಕೆಂದು ಹೇಳಿದ್ದಾರೆ. ಇಲ್ಲಿ ಕೂಡ ಶೇಕಡಾ 18 ರಷ್ಟು ಜನರು ತಟಸ್ಥರಾಗಿದ್ದಾರೆ. ಶೇಕಡಾ 14 ರಷ್ಟು ಜನರು ಕೆಲಸದ ದಿನದಲ್ಲಿ ಕಡಿತ ಮಾಡುವುದನ್ನು ಒಪ್ಪುತ್ತಿಲ್ಲ.  

ದೇಹಕ್ಕೆ ಮಾತ್ರವಲ್ಲ, ಮಿದುಳಿಗೂ ವಯಸ್ಸಾಗುತ್ತೆ! ಆಗ ಹೀಗೆಲ್ಲ ಬದಲಾಗುತ್ತೆ

ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗ್ಬಾರದು ಅಂದ್ರೆ ಕೆಲಸವನ್ನು ಒತ್ತಡವಿಲ್ಲದೆ ಮಾಡುವುದು ಮುಖ್ಯವಾಗುತ್ತದೆ. ಮನಸ್ಸನ್ನು ಶಾಂತವಾಗಿಟ್ಟು, ಸಣ್ಣಪುಟ್ಟ ವಿಶ್ರಾಂತಿ ತೆಗೆದುಕೊಂಡು ಕೆಲಸ ಮುಂದುವರೆಸಬೇಕು. ವಾರ ಪೂರ್ತಿ, ದಿನವಿಡಿ ಕೆಲಸ ಮಾಡುವುದ್ರಿಂದ ಮಾನಸಿಕ ಸಮಸ್ಯೆ ಜೊತೆ ದೈಹಿಕ ಸಮಸ್ಯೆಗಳು ಕೂಡ ಕಾಡಲು ಶುರುವಾಗುತ್ತವೆ.   

Latest Videos
Follow Us:
Download App:
  • android
  • ios