ಪರ್ಫೆಕ್ಟ್ ಬಾಡಿ ಪಡೆಯಲು, ಹೆಚ್ಚಾಗಿ ಜನರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ ಮತ್ತು ತುಂಬಾ ಯೋಚನೆ ಮಾಡಿ ಆಹಾರ ಸೇವಿಸುತ್ತಾರೆ. ಅಷ್ಟು ಕಷ್ಟ ಪಟ್ರೆ ಮಾತ್ರ ಸಿಕ್ಸ್ ಪ್ಯಾಕ್ ಬಾಡಿ (six pack body) ಪಡೆಯೋದಕ್ಕೆ ಸಾಧ್ಯವಾಗುತ್ತೆ. ಆದರೆ ಇಲ್ಲೊಬ್ಬ ಹುಡುಗಿ ಸಿಕ್ಸ್ ಪ್ಯಾಕ್ ಅನ್ನು ಕ್ರೀಡೆಯ ಮೂಲಕ ಸಾಧಿಸಿದ್ದಾಳೆ. ಹುಡುಗಿ ವಯಸ್ಸು ತುಂಬಾ ಚಿಕ್ಕದು, ಆದರೆ ಆಕೆಯ ಉತ್ಸಾಹ ಮಾತ್ರ ತುಂಬಾ ದೊಡ್ಡದು, ಅವರು ಆಹಾರ ಆಗಿರಲಿ, ಕಟ್ಟುನಿಟ್ಟಿನ ವ್ಯಾಯಾಮಗಳ ಮೂಲಕ ತನ್ನನ್ನು ಎಷ್ಟು ನಿಯಂತ್ರಿಸಿದ್ದಾಳೆ ಎಂದರೆ ದೊಡ್ಡವರು ಸಹ ಈಕೆಯನ್ನು ನೋಡಿದ್ರೆ ಶಾಕ್ ಆಗ್ತಾರೆ.