ವಯಸ್ಸು 50 ಅಗ್ತಾ ಬಂತು, ಇನ್ನೂ ಹಂಗೇ ಇದ್ದಾರಲ್ಲ ಈ ಶಿಲ್ಪಾ ಶೆಟ್ಟಿ? ಏನೀದರ ರಹಸ್ಯ?

Published : Jan 13, 2024, 06:14 PM IST

ಶಿಲ್ಪಾ ಶೆಟ್ಟಿಯವರನ್ನ ನೋಡಿದ್ರೆ ಯಾರದ್ರೂ ಆವರಿಗೆ 48 ವರ್ಷ ಆಯ್ತು ಅನ್ನಬಹುದೇ? ಇನ್ನು ಹದಿಹರೆಯದ ಹುಡುಗಿಯಂತಿದ್ದಾರೆ ಈ ನಟಿ. ನೀವು ಸಹ ಸದೃಢವಾಗಿರಲು ಬಯಸಿದರೆ, ನೀವು ಅವರ 5 ಫಿಟ್ನೆಸ್ ಸೀಕ್ರೆಟ್ ಗಳನ್ನು ತಿಳಿದುಕೊಳ್ಳಬೇಕು.   

PREV
17
ವಯಸ್ಸು 50 ಅಗ್ತಾ ಬಂತು, ಇನ್ನೂ ಹಂಗೇ ಇದ್ದಾರಲ್ಲ ಈ ಶಿಲ್ಪಾ ಶೆಟ್ಟಿ? ಏನೀದರ ರಹಸ್ಯ?

ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್ ನ ಅತ್ಯಂತ ಫಿಟ್ ನಟಿ. 48 ವರ್ಷ ದಾಟಿದ್ದರೂ, ಅವರ ಶಕ್ತಿಯ ಮಟ್ಟ ಮತ್ತು ಫಿಟ್ನೆಸ್ ವಿಷಯದಲ್ಲಿ ಯಾವ ಯುವತಿಯರನ್ನು ಸಹ ಮೆಟ್ಟಿ ನಿಲ್ಲಬಹುದು. ವಯಸ್ಸು ಹೆಚ್ಚಾಗುತ್ತಾ ಹೋಗುತ್ತಿದ್ದಂತೆ, ಶಿಲ್ಪಾ ಶೆಟ್ಟಿ ಯಂಗ್ ಆಗುತ್ತಾ ಬರ್ತಿದ್ದಾರೆ. ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ರೆ, ಈವಾಗ್ಲೂ ಅವರನ್ನು ನೋಡಿದ್ರೆ 22 ರ ಹರೆಯದ ಹುಡುಗಿಯಂತೆ ಕಾಣಿಸುತ್ತೆ. 
 

27

ಸೋಶಿಯಲ್ ಮೀಡೀಯಾದಲ್ಲಿ (Social media) ಆಕ್ಟೀವ್ ಆಗಿರುವ ಶಿಲ್ಪಾ ಶೆಟ್ಟಿ, ಅಲ್ಲೂ ಕೂಡ ತಮ್ಮ ಫಿಟ್ನೆಸ್ ಬಗ್ಗೆ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಅವರ ಸರಳ ತಾಲೀಮು ಯಾವಾಗಲೂ ಅವರ ಅನುಯಾಯಿಗಳಿಗೆ ಸ್ಫೂರ್ತಿ ನೀಡುತ್ತದೆ. ನೀವು ಅವರಂತೆ ಫಿಟ್ ಆಗಲು ಬಯಸಿದ್ರೆ ಅವರು ಅನಿಸರಿಸುವ ಕೆಲವೊಂದು ಫಿಟ್ನೆಸ್ ಟ್ರಿಕ್ ಗಳನ್ನು ನೀವು ಫಾಲೋ ಮಾಡಬೇಕು. 

37

ಎದ್ದು ನಿಲ್ಲುವ ಭಂಗಿ 
ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ (instagram) ಸ್ಟ್ಯಾಂಡ್ ಅಪ್ ಚಾಲೆಂಜ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಶಿಲ್ಪಾ ಯೋಗ ಚಾಪೆಯ ಮೇಲೆ ಮಲಗಿದ್ದರು, ಕೈಗಳಲ್ಲಿ ಹೆವಿ ವೈಟ್ ಇತ್ತು. ಕಾಲುಗಳನ್ನು ವೈಟ್ ಮಧ್ಯೆ ಲಾಕ್ ಮಾಡಿದ್ದರು. ಮಲಗಿದ್ದಲ್ಲಿಂದಲೇ ವೈಟ್ ಹಿಡಿದು ಯಾವುದೇ ಅಡೆತಡೆ ಇಲ್ಲದೇ, ಎದ್ದು ನಿಂತು ಮತ್ತೆ ಅದೇ ಮಲಗಿದ ಸ್ಥಾನಕ್ಕೆ ಬರುವ ಭಂಗಿ ಅದಾಗಿತ್ತು. ಈ ಕಠಿಣ ಭಂಗಿಯನ್ನು ಅವರು ಎಷ್ಟು ಸುಲಭವಾಗಿ ಮಾಡಿದ್ದರೆಂದರೆ ಅಭಿಮಾನಿಗಳು ಅವರನ್ನು ಶ್ಲಾಘಿಸಿದ್ದರು. 

47

ಯೋಗ ಭಂಗಿ
ಯೋಗವು ದೇಹವನ್ನು ಸದೃಢ ಮತ್ತು ಆರೋಗ್ಯಕರವಾಗಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಟಿ ಶಿಲ್ಪಾ ಶೆಟ್ಟಿ ಕೂಡ ಯೋಗವನ್ನು ತುಂಬಾ ಇಷ್ಟಪಟ್ಟು ಒಂದು ದಿನವೂ ಮಿಸ್ ಮಾಡದೆ ಮಾಡುತ್ತಾರೆ. ಹಲವಾರು ವರ್ಷಗಳಿಂದ ಯೋಗ ಭಂಗಿಗಳನ್ನು ಅವರು ಅಭ್ಯಾಸ ಮಾಡುತ್ತಿದ್ದು, ಇದೀಗ ಪ್ರತಿಯೊಂದು ಕಠಿಣ ಯೋಗಗಳನ್ನ ತುಂಬಾನೆ ಸಲೀಸಾಗಿ ಮಾಡ್ತಾರೆ. 

57

ಬಾಬಾ ರಾಮದೇವ್ ಅವರೊಂದಿಗೆ ಯೋಗ ಅಧಿವೇಶನದಲ್ಲಿ ಭಾಗವಹಿಸಿದರು
ಶಿಲ್ಪಾ ಶೆಟ್ಟಿ ಬಾಬಾ ರಾಮದೇವ್ (Baba ramdev) ಅವರೊಂದಿಗೆ ಅನೇಕ ಬಾರಿ ಯೋಗ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಐದು ದಿನಗಳ ಯೋಗ ಶಿಬಿರದಲ್ಲಿ ರಾಮ್ದೇವ್ ಅವರನ್ನು ಭೇಟಿಯಾದಾಗ ಅವರ ಒಂದು ವೀಡಿಯೊ ಗಮನ ಸೆಳೆಯಿತು. ಬಾಬಾ ರಾಮದೇವ್ ತಮ್ಮ ಯೋಗ ಚಲನೆಗಳಿಗೆ ಹೆಸರುವಾಸಿಯಾಗಿದ್ದರೆ, ಶಿಲ್ಪಾ ಶೆಟ್ಟಿಯನ್ನು ಯೋಗ ಆಸನಗಳ ರಾಣಿ ಎಂದು ಕರೆಯಲಾಗುತ್ತದೆ. ಈ ಇಬ್ಬರು ವ್ಯಕ್ತಿಗಳನ್ನು ಒಟ್ಟಿಗೆ ನೋಡುವುದೇ ಯೋಗಾಸಕ್ತರಿಗೆ ಹಬ್ಬವಾಗಿದೆ. 

67

ಕಾಲಿಗೆ ಗಾಯವಾದ ನಂತರವೂ ಜಿಮ್ಮಿಂಗ್
ಶಿಲ್ಪಾ ಶೆಟ್ಟಿಗೆ ಫಿಟ್ನೆಸ್ (fitness) ಬಹಳ ಮುಖ್ಯ. ಅವರು ಅದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ. ನಟಿ ತನ್ನ ಫಿಟ್ನೆಸ್ ಗೆ ಎಷ್ಟು ಡೆಡಿಕೇಟೆಡ್ ಆಗಿದ್ದಾರೆ ಎಂದರೆ ಕಾಲಿಗೆ ಗಾಯವಾಗಿದ್ದರೂ, ಅವರು ಜಿಮ್‌ಗೆ ಹೋಗಿ ತರಬೇತಿ ಪೂರ್ಣಗೊಳಿಸುತ್ತಿದ್ದರು. ನೀವೂ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸಿ, ನಿತ್ಯವೂ ನೆಪ ಹೇಳದೇ ಎಕ್ಸರ್ ಸೈಜ್ ಮಾಡುತ್ತಿದ್ದರೆ, ಖಂಡಿತಾ ಫಿಟ್ ಆಗುತ್ತೀರಿ. 

77

ಯೋಗ, ಜಿಮ್ ಮಿಸ್ ಮಾಡಬಾರದು 
ಶಿಲ್ಪಾ ಶೆಟ್ಟಿಯವರ ಒಂದು ರೂಲ್ಸ್ ಎಂದರೆ ನಿಮಗೆ ಎಷ್ಟೇ ಕೆಲಸವಿರಲಿ, ಅಥವಾ ನೀವು ಬೇರೆ ಯಾವುದೇ ಸ್ಥಳದಲ್ಲಿರಲಿ ಯಾವತ್ತೂ ಯೋಗ ಅಥವಾ ಜಿಮ್ ಮಾಡೋದನ್ನು ಮಿಸ್ ಮಾಡಬಾರದು. ಶೂಟಿಂಗ್ ಇದ್ದರೂ ಶಿಲ್ಪಾ ತಮ್ಮ ವರ್ಕ್ ಔಟ್ ಮಾತ್ರ ಯಾವತ್ತೂ ಮಿಸ್ ಮಾಡಿಕೊಳ್ಳೋದೆ ಇಲ್ಲ. 

Read more Photos on
click me!

Recommended Stories