ಸಾಮಾನ್ಯವಾಗಿ, ಕಾರ್ಖಾನೆ ಹೆಸರನ್ನು ಕೇಳಿದಾಗ, ಏನು ನೆನಪಾಗುತ್ತೆ? ದೊಡ್ಡ ಪ್ರಮಾಣದಲ್ಲಿ ಯಾವುದಾದರೂ ವಸ್ತುಗಳನ್ನು ಉತ್ಪಾದಿಸುವ ಸ್ಥಳವನ್ನು ಕಾರ್ಖಾನೆ ಎನ್ನಲಾಗುತ್ತೆ ಅಲ್ವಾ? ಇದು ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು, ಇಟ್ಟಿಗೆ, ಕಬ್ಬಿಣ ಅಥವಾ ಆಟಿಕೆಗಳನ್ನು ತಯಾರಿಸುವ ಕಾರ್ಖಾನೆಯೂ ಆಗಿರಬಹುದು ಅಲ್ವಾ? ಆದರೆ ನೀವು ಮಕ್ಕಳನ್ನು ತಯಾರಿಸೋ (baby making factory) ಕಾರ್ಖಾನೆಯ ಬಗ್ಗೆ ಕೇಳಿದ್ದೀರಾ? ಈ ರೀತಿ ಇರೋದಕ್ಕೆ ಸಾಧ್ಯನೆ ಇಲ್ಲ ಎಂದು ನೀವು ಭಾವಿಸಿದ್ರೆ ಅದು ತಪ್ಪು. ಆಫ್ರಿಕಾದಲ್ಲಿ ಒಂದು ದೇಶವಿದೆ, ಅಲ್ಲಿ ಮಕ್ಕಳನ್ನು ಸರಕುಗಳಂತೆ ಉತ್ಪಾದಿಸಲಾಗುತ್ತದೆ.