Kitchen Tips: ಇಂಥಾ ಟ್ರಿಕ್ಸ್ ಯೂಸ್ ಮಾಡಿದ್ರೆ ಗ್ಯಾಸ್‌ ಎರಡು ತಿಂಗಳಾದ್ರೂ ಖಾಲಿಯಾಗಲ್ಲ!

First Published Mar 3, 2023, 10:48 AM IST

ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಿನಸಿ, ತರಕಾರಿ, ಪೆಟ್ರೋಲ್‌-ಡೀಸೆಲ್, ಗ್ಯಾಸ್ ಸಿಲಿಂಡರ್ ಎಲ್ಲದರ ಬೆಲೆಯೂ ಗಗನದತ್ತ ಮುಖ ಮಾಡಿದೆ. ಹೀಗಿರುವಾಗ ಸಹಜವಾಗಿಯೇ ಜನರು ಎಲ್ಲದರಲ್ಲೂ ಉಳಿತಾಯ ಮಾಡಲು ಯತ್ನಿಸುತ್ತಾರೆ. ಆದ್ರೆ ಗ್ಯಾಸ್‌ ಎಷ್ಟು ಮಿತವಾಗಿ ಬಳಸಿದ್ರೂ ಬೇಗ ಖಾಲಿಯಾಗುತ್ತೆ ಅನ್ನೋದು ಹಲವರ ದೂರು. ಹಾಗಿದ್ರೆ ಗ್ಯಾಸ್ ಉಳಿಸೋಕೆ ಏನ್ಮಾಡ್ಬೋದು. ಇಲ್ಲಿದೆ ಸಿಂಪಲ್ ಟಿಪ್ಸ್.

ಎಲ್ಲಾ ಗೃಹಿಣಿಯರು ಸಾಮಾನ್ಯವಾಗಿ ದಿನಬಳಕೆಯ ಗ್ಯಾಸ್‌ನ್ನು ಉಳಿಸೋಕೆ ಯತ್ನಿಸ್ತಾರೆ. ಇದಕ್ಕಾಗಿ ಬೇಳೆಯನ್ನು ಮೊದಲೇ ನೆನೆಸಿಡೋದು, ಆದಷ್ಟು ಒಂದೇ ಸಾರಿ ಅಡುಗೆ ಮಾಡಿಕೊಳ್ಳುವುದು ಮೊದಲಾದ ಟ್ರಿಕ್ಸ್ ಅನುಸರಿಸ್ತಾರೆ. ಹೀಗೆಲ್ಲಾ ಮಾಡಿದ್ರೂ ಗ್ಯಾಸ್‌ ಎರಡು ತಿಂಗಳಲ್ಲೆಲ್ಲಾ ಬರೋದು ಕಡಿಮೆ. ಒಂದೇ ತಿಂಗಳಿಗೆ ಖಾಲಿಯಾಗಿ ಬಿಡುತ್ತದೆ. 

ದಿನ ಬಳಕೆಯ ಗ್ಯಾಸ್‌‌ ನ್ನು ಉಳಿತಾಯ ಮಾಡಿದರೆ ಅದರಿಂದ ಹಣದ ಉಳಿತಾಯ ಆಗುವುದು ಮಾತ್ರವಲ್ಲದೆ, ತಿಂಗಳ ಖರ್ಚು ಕೂಡ ಕಡಿಮೆ ಆಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಸ್ಥಿರವಾಗಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದು ಜನ ಸಾಮಾನ್ಯರಿಗೂ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಗ್ಯಾಸ್ ಉಳಿಸೋಕೆ ನಾನಾ ಟ್ರಿಕ್ ಹುಡುಕ್ತಾ ಇರ್ತಾರೆ.

Latest Videos


ಗ್ಯಾಸ್‌ ಸಿಲಿಂಡರ್ ಬೆಲೆ ಕಡಿಮೆಯಾಗೋದಿಲ್ಲ ಅಂದ್ರೆ ಗ್ಯಾಸ್ ಬಳಕೆ ಮಾಡುವ ಜನರು, ತಮ್ಮ ಕೈಯಲ್ಲಿ ಆದಷ್ಟು ಗ್ಯಾಸ್ ಉಳಿತಾಯ ಮಾಡಲು ಪ್ರಯತ್ನಿಸಬೇಕಾಗುತ್ತದೆ. ಹಾಗಾದ್ರೆ ಗ್ಯಾಸ್ ಉಳಿತಾಯ ಮಾಡುವುದು ಹೇಗೆ? ಇದು ಅಷ್ಟೊಂದು ಸುಲಭವೇ ? ಗ್ಯಾಸ್ ಉಳಿಸೋಕೆ ಯಾವುದೆಲ್ಲಾ ಟ್ರಿಕ್ಸ್ ಯೂಸ್ ಮಾಡಬಹುದು ತಿಳಿಯೋಣ. 

ಪಾತ್ರೆಗಳಲ್ಲಿ ನೀರಿನಂಶ ಇರದಂತೆ ನೋಡಿಕೊಳ್ಳಿ
ಸಾಮಾನ್ಯವಾಗಿ ಹೆಚ್ಚಿನವರು ಪಾತ್ರೆಗಳನ್ನು ತೊಳೆದು ಕೂಡಲೇ ಡೈರೆಕ್ಟ್ ಆಗಿ ಗ್ಯಾಸ್ ಒಲೆ ಮೇಲೆ ಇಟ್ಟುಬಿಡುತ್ತಾರೆ. ಒಗ್ಗರೆಣೆ ರೆಡಿ ಮಾಡಲು ಬಾಣಲೆಯನ್ನು ತೊಳೆದು, ನೇರವಾಗಿ ಗ್ಯಾಸ್ ಒಲೆಯ ಮೇಲೆ ಇಟ್ಟುಕೊಳ್ಳುತ್ತಾರೆ, ಆದರೆ ಹೀಗೆ ಮಾಡುವುದರಿಂದ ಗ್ಯಾಸ್ ಮುಗಿಯುವ ಸಾಧ್ಯತೆ ಹೆಚ್ಚು. ಯಾಕೆಂದರೆ ಒದ್ದೆಯಾಗಿರುವ ಪಾತ್ರೆ ಬೇಗನೇ ಬಿಸಿಯಾಗುವುದಿಲ್ಲ. ಹೀಗಾಗಿ ಒದ್ದೆ ಪಾತ್ರೆಯನ್ನು ಗ್ಯಾಸ್ ಮೇಲಿಡುವ ಮೊದಲು ಶುದ್ಧ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಪಾತ್ರೆ ಬೇಗ ಬಿಸಿಯಾಗುತ್ತದೆ. ಹೆಚ್ಚು ಗ್ಯಾಸ್ ವೇಸ್ಟ್ ಆಗುವುದು ತಪ್ಪುತ್ತದೆ.

Electric Cooker

ಕುಕ್ಕರ್ ಹೆಚ್ಚು ಬಳಸಿ
ಅಡುಗೆ ಮಾಡುವಾಗ ಯಾವಾಗಲೂ ತೆರೆದ ಪಾತ್ರೆಯನ್ನು ಬಳಸುವ ಬದಲು ಕುಕ್ಕರ್‌ನ್ನು ಬಳಸಿ. ಕುಕ್ಕರ್ ಬಳಸೋದ್ರಿಂದ ಅನ್ನ, ತರಕಾರಿ ಬೇಗ ಬೇಯುತ್ತದೆ. ವಿನಾಕಾರಣ ಗ್ಯಾಸ್ ವೇಸ್ಟ್ ಆಗುವುದಿಲ್ಲ.ಅಡುಗೆ ಕೂಡಾ ಬೇಗ ಆಗುತ್ತದೆ.

Gas

ಬರ್ನರ್ ಶುಚಿಯಾಗಿರಬೇಕು
ಗ್ಯಾಸ್ ಉಳಿತಾಯವಾಗಬೇಕೆಂದ್ರೆ, ಮೊದಲಿಗೆ ಗ್ಯಾಸ್ ಬರ್ನರ್ ಅನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಬರ್ನರ್‌ನ್ನು ಕನಿಷ್ಟ ಪಕ್ಷ ಮೂರು ತಿಂಗಳಿಗೊಮ್ಮೆ ಆದರೂ ಸರ್ವೀಸ್ ಮಾಡುತ್ತಲೇ ಇರಬೇಕು. ಗ್ಯಾಸ್ ಒಲೆಯ ಬೆಂಕಿಯ ಬಣ್ಣವನ್ನು ಗಮನಿಸಿ ಬರ್ನರ್‌ ಕ್ಲೀನಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.  ಗ್ಯಾಸ್ ಒಲೆಯ ಬೆಂಕಿಯ ಬಣ್ಣ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಬರ್ನರ್‌ನಲ್ಲಿ ಸಮಸ್ಯೆ ಇದೆ ಎಂದರ್ಥ. ಕೂಡಲೇ ಬರ್ನರ್‌ನ್ನು ಶುಚಿ ಯಾಗಿಟ್ಟುಕೊಳ್ಳಿ. ಸಾಧ್ಯವಾದರೆ, ಒಮ್ಮೆ ಸರ್ವೀಸ್ ಮಾಡಿಟ್ಟುಕೊಳ್ಳಿ. ಇದರಿಂದ ಅನಾವಶ್ಯಕ ಗ್ಯಾಸ್ ನಷ್ಟವಾಗುವುದನ್ನು ತಪ್ಪಿಸಬಹುದು.

ಧಾನ್ಯ, ಅಕ್ಕಿಯನ್ನು ನೆನೆಸಿಡಿ
ಸಾಮಾನ್ಯವಾಗಿ ಧಾನ್ಯಗಳನ್ನು ಬೇಯಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಹೆಚ್ಚು ಗ್ಯಾಸ್ ಖರ್ಚಾಗುತ್ತದೆ. ಹೀಗಾಗದೇ ಇರಬೇಕಾದರೆ ಅಡುಗೆ ರೆಡಿ ಮಾಡುವ ಮುನ್ನ ಕನಿಷ್ಠ ಒಂದು ಗಂಟೆಯ ಮುನ್ನ ಧಾನ್ಯಗಳು ಅಥವಾ ಅಕ್ಕಿ ಯನ್ನು ಗಂಟೆಗಳ ಕಾಲ, ನೀರಿನಲ್ಲಿ ನೆನೆಸಿಡಿ. ಇದರಿಂದ ಅನ್ನ ಅಥವಾ ಧಾನ್ಯಗಳು ಬಹಳ ಬೇಗನೇ ಬೇಯುವುದು. ಹೀಗಾಗಿ ಗ್ಯಾಸ್ ಕೂಡಾ ಉಳಿತಾಯವಾಗುತ್ತದೆ.

click me!