Womens Day: ಮಹಿಳೆಯರಿಗೆ IRCTC ಭರ್ಜರಿ ಗಿಫ್ಟ್‌, ಕಡಿಮೆ ಹಣದಲ್ಲಿ ಗೋವಾ ಟ್ರಿಪ್ ಹೋಗ್ಬನ್ನಿ

Published : Mar 02, 2023, 12:18 PM ISTUpdated : Mar 02, 2023, 12:23 PM IST

ಮಹಿಳೆ..ಆಕೆ ಮನೆ, ಕಚೇರಿ, ಮಕ್ಕಳು, ಗಂಡ ಅಂತ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುವ ಪರ್ವತ. ಆದರೆ ಆಕೆಗೂ ಆರಾಮ ಬೇಕು..ಎಲ್ಲಾ ಒತ್ತಡದಿಂದ ಒಂದು ಬ್ರೇಕ್‌. ಇದನ್ನು ಮನಗಂಡು IRCTC ಈ ಬಾರಿ ಮಹಿಳಾ ದಿನಾಚರಣೆಗೆ ಮಹಿಳೆಯರಿಗೆ ಭರ್ಜರಿ ಆಫರ್ ನೀಡಿದೆ ಏನದು?

PREV
18
Womens Day: ಮಹಿಳೆಯರಿಗೆ IRCTC ಭರ್ಜರಿ ಗಿಫ್ಟ್‌, ಕಡಿಮೆ ಹಣದಲ್ಲಿ ಗೋವಾ ಟ್ರಿಪ್ ಹೋಗ್ಬನ್ನಿ

ಜನರ ಆಗಾಗ ಹೊಸ ಸ್ಥಳಗಳಿಗೆ ಟ್ರಿಪ್ ಹೋಗುತ್ತಾರೆ. ಮನೆಕೆಲಸ ಮತ್ತು ಕಚೇರಿಯ ಆಯಾಸವನ್ನು ಹೋಗಲಾಡಿಸಲು ಯತ್ನಿಸುತ್ತಾರೆ. ಇದು ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ಅದರಲ್ಲೂ ಮಹಿಳೆಯರಿಗೆ ರಜೆ ಬಹಳ ಮುಖ್ಯ. ಯಾಕೆಂದರೆ ಅವರು ಯಾವಾಗಲೂ ಮನೆ ಮತ್ತು ಕಛೇರಿಯನ್ನು ನೋಡಿಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. ಹೀಗಿರುವಾಗ 2023ರ ಮಹಿಳಾ ದಿನದಂದು, IRCTC ಮಹಿಳೆಯರಿಗೆ ರಿಲ್ಯಾಕ್ಸ್‌ ಆಗಲು ಅವಕಾಶವನ್ನು ನೀಡಿದೆ.

28

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8ರಂದು ಆಚರಿಸಲಾಗುತ್ತದೆ. ಈ ವರ್ಷ ಈ ವಿಶೇಷ ಸಂದರ್ಭದಲ್ಲಿ, IRCTC ಮಹಿಳೆಯರಿಗೆ ಕಡಿಮೆ ಹಣದಲ್ಲಿ ಗೋವಾಗೆ ಪ್ರಯಾಣಿಸಲು ಅವಕಾಶವನ್ನು ನೀಡುತ್ತಿದೆ. ಮಹಿಳಾ ದಿನದ ವಿಶೇಷ ಗೋವಾ ಡಿಲೈಟ್ ಎಕ್ಸ್ ಭುವನೇಶ್ವರ್ ಹೆಸರಿನ ಈ ಪ್ರವಾಸ ಪ್ಯಾಕೇಜ್ ಮಾರ್ಚ್ 7ರಿಂದ ಪ್ರಾರಂಭವಾಗಲಿದೆ. 

38

ಈ ಪ್ಯಾಕೇಜ್ ಅಡಿಯಲ್ಲಿ, ಗೋವಾದಲ್ಲಿ ನಾಲ್ಕು ರಾತ್ರಿ ಮತ್ತು ಐದು ಹಗಲು ಉಳಿಯಲು ನಿಮಗೆ ಅವಕಾಶ ಸಿಗುತ್ತದೆ. ಇದರಲ್ಲಿ ಗೋವಾದ ಸುಂದರವಾದ ಬೀಚ್, ಭವ್ಯವಾದ ಸಂಸ್ಕೃತಿ ಮತ್ತು ಸುಂದರ ನೋಟಗಳನ್ನು ಆನಂದಿಸಲು ಅವಕಾಶವನ್ನು ನೀಡಲಾಗುತ್ತದೆ.

48

ಈ ವಿಶೇಷ ಪ್ಯಾಕೇಜ್ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ವಿಮಾನ ದರ, 3 ಸ್ಟಾರ್ ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆ, ಎಸಿ ಬಸ್ ವ್ಯವಸ್ಥೆ ಒಳಗೊಂಡಿರುತ್ತದೆ. ಉತ್ತರ ಗೋವಾ ಮತ್ತು ದಕ್ಷಿಣ ಗೋವಾದಲ್ಲಿ ದೃಶ್ಯವೀಕ್ಷಣೆಯ ಹೊರತಾಗಿ, ಇದು ಕ್ರೂಸ್ ರೈಡ್ ಮತ್ತು ಗಾಲಾ ಡಿನ್ನರ್ ಅನ್ನು ಒಳಗೊಂಡಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

58

ಪ್ರಯಾಣದ ವೇಳಾಪಟ್ಟಿ: ಈ ಟೂರ್ ಪ್ಯಾಕೇಜ್ ಅಡಿಯಲ್ಲಿ ನೀವು ಪ್ರಯಾಣಿಸಲು ಬಯಸಿದರೆ, ಮಾರ್ಚ್ 7ರಿಂದ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಇದಾದ ನಂತರ, ನೀವು ಗೋವಾಗೆ ಹೋಗಲು ಭುವನೇಶ್ವರದಿಂದ ವಿಮಾನವನ್ನು ಪಡೆಯುತ್ತೀರಿ. ಇದು ನಿಮ್ಮನ್ನು ಗೋವಾಕ್ಕೆ ಕರೆದೊಯ್ಯುತ್ತದೆ.

68

ಇಲ್ಲಿ 3 ಸ್ಟಾರ್ ಹೋಟೆಲ್ ನಲ್ಲಿ ತಂಗುವ ಸೌಲಭ್ಯ ಸಿಗಲಿದೆ. ಈ ಪ್ರವಾಸದ ಅಡಿಯಲ್ಲಿ, ನೀವು ಸುಂದರವಾದ ಕಡಲತೀರಗಳು, ಅರ್ವಾಲೆಮ್ ಗುಹೆಗಳು ಮತ್ತು ಜಲಪಾತಗಳು, ರೀಸ್ ಮಾಗೋಸ್ ಕೋಟೆ ಇತ್ಯಾದಿಗಳನ್ನು ನೋಡಬಹುದು. ಮಹಿಳೆಯರು ಕ್ರೂಸ್ ಮತ್ತು ಗಾಲಾ ಡಿನ್ನರ್‌ನಲ್ಲಿ ಪ್ರಯಾಣಿಸುವುದನ್ನು ಆನಂದಿಸಬಹುದು.

78

ಪ್ರಯಾಣದ ವೆಚ್ಚವೆಷ್ಟು: ಈ ಲಕ್ಸುರಿಯಸ್ ಪ್ರಯಾಣಕ್ಕೆ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಈ ಸಂಪೂರ್ಣ ಪ್ರವಾಸದ ಪ್ಯಾಕೇಜ್‌ಗಾಗಿ ಇಬ್ಬರು ವ್ಯಕ್ತಿಗಳು 25745 ರೂ. ಮತ್ತು ಮೂವರು ವ್ಯಕ್ತಿಗಳು 24615 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ದೊರೆಯುವ ಸೌಲಭ್ಯಗಳೆಂದರೆ ಭುವನೇಶ್ವರದಿಂದ ಗೋವಾಕ್ಕೆ ಹೋಗಿ ಬರಲು ವಿಮಾನ ಟಿಕೆಟ್, ಗೋವಾದಲ್ಲಿ ನಾಲ್ಕು ರಾತ್ರಿ ಹೋಟೆಲ್ ತಂಗುವುದು, ನಾಲ್ಕು ಬಾರಿ ಉಪಹಾರ ಮತ್ತು ರಾತ್ರಿ ಊಟ, ಮಾಂಡೋವಿ ನದಿಯ ಕ್ರೂಸ್ ಟಿಕೆಟ್, ಮಾರ್ಗದರ್ಶಿ ಸೌಲಭ್ಯವಾಗಿದೆ. 

88

ಇದಕ್ಕಾಗಿ ಬುಕ್ಕಿಂಗ್ ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರವಾಸದ ಪ್ಯಾಕೇಜ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Read more Photos on
click me!

Recommended Stories