ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಉತ್ತಮ ಈ ಯೋಗಗಳು

First Published | Mar 2, 2023, 3:10 PM IST

ಯೋಗದ ಸಹಾಯದಿಂದ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು ಅನ್ನೋದು ನಿಮಗೆ ಗೊತ್ತಿದೆ. ಆದರೆ ಮಹಿಳೆಯರ, ಹಾರ್ಮೋನ್ ಅಥವಾ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಸಹ ನೀವು ಕಡಿಮೆ ಮಾಡಬಹುದು ಅನ್ನೋದು ತಿಳಿದಿದೆಯೇ?. ಅದಕ್ಕಾಗಿಯೇ ಇಲ್ಲಿ ನಿಮಗೆ ಕೆಲವು ಅತ್ಯುತ್ತಮ ಯೋಗ ಆಸನಗಳ ಬಗ್ಗೆ ಹೇಳಲಾಗಿದೆ. 

ಯೋಗವು (Yoga) ನಮ್ಮ ಪ್ರಾಚೀನ, ಸಾಂಪ್ರದಾಯಿಕ ಅಭ್ಯಾಸವಾಗಿದ್ದು, ಇದು ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೆ. ಯೋಗ ತಂತ್ರಗಳಲ್ಲಿ ಆಸನ, ಪ್ರಾಣಾಯಾಮ ಮತ್ತು ಧ್ಯಾನ ವ್ಯಾಯಾಮಗಳು ಸೇರಿವೆ. ಎಲ್ಲಾ ದೇಹದ ಪ್ರಕಾರಗಳಿಗೆ ಸೂಕ್ತವಾದ ಯೋಗ ಗರ್ಭಾವಸ್ಥೆಯಲ್ಲಿಯೂ ಸದೃಢವಾಗಿರಲು ಮತ್ತು ತಾಯಿಯನ್ನು ತನ್ನ ಮಗುವಿನೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಪ್ರಕ್ರಿಯೆ.
 

ಯೋಗದ ಪ್ರಯೋಜನಗಳು
ಯೋಗವು ದೇಹದ ಆಕಾರ ಉಳಿಸಿಕೊಳ್ಳಲು ಒಂದು ರೀತಿಯ ವ್ಯಾಯಾಮವಾಗಿದೆ ಮತ್ತು ಇದು ಎಲ್ಲರಿಗೂ ಸೂಕ್ತ. ಇದನ್ನು ಮಾಡಲು ತುಂಬಾ ಸುಲಭವಾದರೂ, ಅದು ಶಕ್ತಿಯುತವಾಗಿದೆ. ಸುಖಾಸನ, ವಜ್ರಾಸನ, ಬಂಧನಕೋನಾಸನ ಮತ್ತು ಇತರ ಆಸನಗಳು ಹಾರ್ಮೋನ್ ಅಥವಾ ಸಂತಾನೋತ್ಪತ್ತಿ ಆರೋಗ್ಯಕ್ಕೆ(Reproductive health) ಸಂಬಂಧಿಸಿದ ಇತರ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.  ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯವನ್ನು ಆರೋಗ್ಯಕರವಾಗಿಡುವ ಅಂತಹ ಕೆಲವು ಯೋಗ ಆಸನಗಳ ಬಗ್ಗೆ ತಿಳಿಯೋಣ.

Tap to resize

1. ಮಂಡುಕಾಸನ  (Mandukasana)
• ಇದನ್ನು ಮಾಡಲು ವಜ್ರಾಸನದಲ್ಲಿ ಕುಳಿತುಕೊಳ್ಳಿ. 
• ತೋಳುಗಳನ್ನು ಮುಂದೆ ಚಾಚಿ. 
• ಹೆಬ್ಬೆರಳನ್ನು ಅಂಗೈಗಳಲ್ಲಿ ಮಡಚಿ, ಉಳಿದ ನಾಲ್ಕು ಬೆರಳುಗಳನ್ನು ಅದರ ಮೇಲೆ ಸುತ್ತಿ ಮತ್ತು ಮುಷ್ಟಿಗಳನ್ನು ಸುತ್ತಿ. 
• ಮೊಣಕೈಗಳಿಂದ ತೋಳುಗಳನ್ನು ಮಡಚಿ, ಮುಷ್ಠಿಗಳನ್ನು ನಾಭಿಯ ಮೇಲೆ ಇರಿಸಿ. 
• ದೇಹದ ಮೇಲ್ಭಾಗವನ್ನು ಬಾಗಿಸಿ ಕೆಳಭಾಗದ ದೇಹದ ಮೇಲೆ ಇರಿಸಿ. 
• ಕುತ್ತಿಗೆಯನ್ನು ಹಿಗ್ಗಿಸಿ ಮತ್ತು ಕಣ್ಣುಗಳನ್ನು ಮುಂದಕ್ಕೆ ಕೇಂದ್ರೀಕರಿಸಿ.

2. ಪ್ರಸಾರಿತ ಪದೋತ್ಥಾನಸನ (Prasarita paadottasana)
• ಕಾಲುಗಳನ್ನು ಬೆರಳುಗಳಿಗೆ ಸಮಾನಾಂತರವಾಗಿ ಇರಿಸಿಕೊಂಡು ಅವುಗಳನ್ನು ಒಳಕ್ಕೆ ಚಾಚಿ. 
• ಮೊಣಕಾಲುಗಳು ನೇರವಾಗಿರಬೇಕು.  
• ಅಂಗೈಗಳನ್ನು ಭುಜಗಳ ಕೆಳಗೆ ತನ್ನಿ. 
• ತಲೆಯನ್ನು ನಿಲಕ್ಕೆ ತಾಗಿಸಲು ಪ್ರಯತ್ನಿಸಿ.
• ಬೆನ್ನನ್ನು ಸಾಧ್ಯವಾದಷ್ಟು ನೇರವಾಗಿ ಇರಿಸಿ. 
• 30 ಸೆಕೆಂಡುಗಳ ಕಾಲ 3 ಸೆಟ್ ಗಳವರೆಗೆ ರಿಪೀಟ್ ಮಾಡಿ.

3. ಬಂಧ ಕೋನಾಸನ (Baddha konasana)
• ದಂಡಾಸನದಿಂದ ಪ್ರಾರಂಭಿಸಿ. 
• ಕಾಲುಗಳನ್ನು ಮಡಚಿ ಮತ್ತು ಅಂಗಾಲುಗಳನ್ನು ಒಟ್ಟಿಗೆ ಜೋಡಿಸಿ. 
• ಹಿಮ್ಮಡಿಯನ್ನು ಪೆಲ್ವಿಕ್ ಕಡೆಗೆ ಮೇಲೆತ್ತಿ. 
• ಮೊಣಕಾಲುಗಳನ್ನು ಆರಾಮವಾಗಿ ಕೆಳಗಿಳಿಸಿ. 
• ಉಸಿರನ್ನು ಹೊರಹಾಕಿ ಮತ್ತು 15 ರಿಂದ 20 ಸೆಕೆಂಡುಗಳ ಕಾಲ ಈ ಭಂಗಿಯನ್ನು ಹಿಡಿದಿಟ್ಟುಕೊಳ್ಳಿ. 
• ಇದನ್ನು 3 ಅಥವಾ ಹೆಚ್ಚು ಬಾರಿ ರಿಪೀಟ್ ಮಾಡಿ.
 

4. ಕಲ್ಯಾಸನ 
• ಕಾಲ್ಬೆರಳುಗಳನ್ನು ಹೊರಕ್ಕೆ ಬಗ್ಗಿಸುವ ಮೂಲಕ ಕಾಲುಗಳನ್ನು ಸ್ವಲ್ಪ ಹೆಚ್ಚು ಹಿಗ್ಗಿಸಿ.
• ಬೆನ್ನನ್ನು ನೇರವಾಗಿ ಇರಿಸಿ. 
• ನಂತರ ಸ್ಕ್ವಾಟ್ ಮಾಡಿ. 
• ತೋಳುಗಳನ್ನು ಮೇಲಕ್ಕೆತ್ತುವಾಗ ಅವು ಭುಜಗಳಿಗೆ ಸಮಾನಾಂತರವಾಗಿವೆ ಎಂದು ಖಚಿತಪಡಿಸಿಕೊಳ್ಳಿ. 
• ಮೊಣಕೈಗಳನ್ನು ಬಗ್ಗಿಸಬೇಕು ಮತ್ತು ಅಂಗೈಗಳು ಆಕಾಶದ ಕಡೆಗೆ ಇರಬೇಕು.

5. ಬಾಲಾಸನ (Balasana)
• ಚಾಪೆಯ ಮೇಲೆ ಮಂಡಿಯೂರಿ ಹಿಮ್ಮಡಿ ಮೇಲೆ ಕುಳಿತು ಮೊಣಕಾಲುಗಳನ್ನು ಆರಾಮದಾಯಕವಾಗಿ ಇಟ್ಟು ಕುಳಿತುಕೊಳ್ಳಬೇಕು.
• ಉಸಿರನ್ನು ತೆಗೆದುಕೊಳ್ಳಿ ಮತ್ತು ಕೈಗಳನ್ನು ತಲೆಯ ಮೇಲೆತ್ತಿ. 
• ಅಂಗೈಗಳನ್ನು ನೆಲದ ಮೇಲೆ ಇರಿಸುವಾಗ ಉಸಿರನ್ನು ಹೊರಹಾಕಿ ಮತ್ತು ದೇಹದ ಮೇಲ್ಭಾಗವನ್ನು ಮುಂದಕ್ಕೆ ಬಗ್ಗಿಸಿ. 
• ಸೊಂಟವನ್ನು ಹಿಮ್ಮಡಿಯ ಮೇಲೆ ಆರಾಮವಾಗಿ ಇರಿಸಿ. 
• ಬೆನ್ನು ನೇರವಾಗಿರುವುದನ್ನು ಖಚಿತಪಡಿಸಿಕೊಳ್ಳಿ.

6. ಪ್ರಾಣಾಯಾಮ ಮತ್ತು ಧ್ಯಾನ (Meditation) 
ಪ್ರಾಣಾಯಾಮ ತಂತ್ರಗಳಾದ ಕಪಾಲಭತಿ, ಅನುಲೋಮ್ ವಿಲೋಮ್, ಭಸ್ತ್ರಿಕಾ ಇತ್ಯಾದಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ದೇಹದಲ್ಲಿನ ನರಗಳನ್ನು ಸ್ವಚ್ಛಗೊಳಿಸುತ್ತವೆ. ಇದು ಒತ್ತಡವನ್ನು ನಿವಾರಿಸುತ್ತೆ ಮತ್ತು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುವ ಮೂಲಕ ಪ್ಯಾರಾಸಿಂಪಥೆಟಿಕ್ ನರ್ವಸ್ ಸಿಸ್ಟಮ್ಗೆ ಪ್ರಯೋಜನವನ್ನು ನೀಡುತ್ತೆ . ರೆಪ್ರೊಡ್ಯೂಕ್ಟಿವ್ ಹೆಲ್ತ್ ಮತ್ತು ಹಾರ್ಮೋನುಗಳ ಸಮಸ್ಯೆಗಳಂತಹ ಕಳಪೆ ಆರೋಗ್ಯಕ್ಕೆ ಒತ್ತಡವು ಪ್ರಮುಖ ಪ್ರಚೋದಕಗಳಲ್ಲಿ ಒಂದಾಗಿದೆ ಮತ್ತು ಯೋಗಾಭ್ಯಾಸಮಹಿಳೆಯರಿಗೆ ಒಟ್ಟಾರೆ ಆರೋಗ್ಯವನ್ನು ಸಾಧಿಸಲು ಸಹಾಯ ಮಾಡುತ್ತೆ.ಈ ಯೋಗಗಳ ಸಹಾಯದಿಂದ ನಿಮ್ಮ ರೆಪ್ರೊಡ್ಯೂಕ್ಟಿವ್ ಹೆಲ್ತ್ ಸಹ ನೀವು ಸರಿಯಾಗಿ ಇಟ್ಟುಕೊಳ್ಳಬಹುದು. 

Latest Videos

click me!