ವೈಟ್ ಬೂಟ್ಸ್ ತೊಳೆಯಲು ಸಮಯವಿಲ್ಲದಿದ್ರೆ ಇಷ್ಟು ಮಾಡಿ ಸಾಕು, ಕೊಳೆ ಫಟ್‌ ಅಂತ ಮಾಯವಾಗುತ್ತೆ

Published : Nov 15, 2025, 06:23 PM IST

Remove stains from white shoes: ಇಂದು ಕೆಲವೇ ನಿಮಿಷದಲ್ಲಿ ವೈಟ್ ಬೂಟ್ಸ್ ಅನ್ನು ಸುಲಭವಾಗಿ ಕ್ಲೀನ್ ಮಾಡಲು ನಾಲ್ಕು ವಿಧಾನಗಳನ್ನ ಹೇಳಲಿದ್ದೇವೆ. ಈ ವಿಧಾನ ಕಣ್ಮುಚ್ಚಿ ಬಿಡುವುದರಲ್ಲಿ ನಿಮ್ಮ ಬೂಟುಗಳನ್ನು ಹೊಸದಾಗಿ ಹೊಳೆಯುವಂತೆ ಮಾಡುತ್ತದೆ. 

PREV
15
ಹೊಚ್ಚ ಹೊಸದರಂತೆ ಹೊಳೆಯುತ್ತವೆ

ಬಿಳಿ ಬೂಟು ನೋಡಲು ಬಹಳ ಚೆನ್ನ. ಆದರೆ ಅವುಗಳನ್ನು ನೀಟಾಗಿ ಇಟ್ಟುಕೊಳ್ಳುವುದು ಸ್ವಲ್ಪ ಕಷ್ಟ. ಅವುಗಳ ಮೇಲೆ ಸ್ವಲ್ಪ ಕೊಳಕು ತಗುಲಿದರೂ ಹೊಳಪು ಮಸುಕಾಗುತ್ತದೆ. ನೋಡಲು ಡಲ್ ಆಗಿ ಕಾಣುತ್ತೆ. ವಿಶೇಷವಾಗಿ ನೀವು ಪ್ರತಿದಿನ ಈ ಬಿಳಿ ಬೂಟುಗಳನ್ನ ಧರಿಸಿದರೆ ಅವುಗಳ ಬಿಳುಪು ಒಂದು ವಾರದೊಳಗೆ ಮಸುಕಾಗುತ್ತದೆ. ಆಗ ಪ್ರತಿದಿನ ಬೂಟುಗಳನ್ನು ತೊಳೆಯುವುದು ಸಾಧ್ಯವಿಲ್ಲ. ಆದರೆ ಕೆಲವು ಸಿಂಪಲ್ ಹ್ಯಾಕ್‌ ಅಳವಡಿಸಿಕೊಳ್ಳುವ ಮೂಲಕ ನೀವು ಅವುಗಳ ಕಳೆದುಹೋದ ಹೊಳಪನ್ನು ಪುನಃ ತರಹಬಹುದು. ಇಂದು ನಾವು ನಿಮಗೆ 4 ವಿಧಾನ ಹೇಳಲಿದ್ದೇವೆ. ಅದನ್ನು ಫಾಲೋ ಮಾಡಿದ್ದೇ ಆದಲ್ಲಿ ಕೆಲವೇ ನಿಮಿಷದಲ್ಲಿ ಬಿಳಿ ಬೂಟುಗಳನ್ನ ಸುಲಭವಾಗಿ ಸ್ವಚ್ಛಗೊಳಿಸಬಹುದು. ಆಗ ಶೂಗಳು ಹೊಚ್ಚ ಹೊಸದರಂತೆ ಹೊಳೆಯುತ್ತವೆ.

25
1. ಅಡುಗೆ ಸೋಡಾ ಮತ್ತು ನಿಂಬೆ ರಸ

ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಿದೆ. 1 ಚಮಚ ಅಡುಗೆ ಸೋಡಾವನ್ನು 1 ಚಮಚ ನಿಂಬೆ ರಸದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಬೂಟುಗಳಿಗೆ 10 ನಿಮಿಷಗಳ ಕಾಲ ಹಚ್ಚಿ ಬಿಡಿ. ನಂತರ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಅವುಗಳ ಹೊಳಪನ್ನು ಮತ್ತೆ ತರುತ್ತದೆ.

35
2. ಅಡುಗೆ ಸೋಡಾ ಮತ್ತು ವಿನೆಗರ್

ಒಂದು ಬಟ್ಟಲಿನಲ್ಲಿ 1 ಚಮಚ ಅಡುಗೆ ಸೋಡಾ ಮತ್ತು 1 ಚಮಚ ಬಿಳಿ ವಿನೆಗರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಶೂಗಳಿಗೆ ಹಚ್ಚಿ 7 ರಿಂದ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಶೂಗಳನ್ನು ಸ್ವಚ್ಛಗೊಳಿಸಲು ಬಟ್ಟೆ ಅಥವಾ ಬ್ರಷ್ ಬಳಸಿ. ಇದು ಎಂಥದ್ದೇ ಕಲೆ ಇದ್ರೂ ತೆಗೆದುಹಾಕುತ್ತದೆ.

45
3. ಬೇಬಿ ಅಥವಾ ಸೋಂಕುನಿವಾರಕ ವೈಪ್ಸ್

ನಿಮ್ಮ ಶೂಗಳನ್ನು ತೊಳೆಯಲು ಸಮಯವಿಲ್ಲದಿದ್ದರೆ ಮತ್ತು ಅವುಗಳನ್ನು ಬಹಳ ಬೇಗ ಕ್ಲೀನ್ ಮಾಡಲು ಬಯಸಿದರೆ ಈ ವಿಧಾನವನ್ನು ಪ್ರಯತ್ನಿಸಬಹುದು. ಶೂಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಬೇಬಿ ವೈಪ್ಸ್ ಅಥವಾ ಸೋಂಕುನಿವಾರಕ ವೈಪ್ಸ್ ಬಳಸಿ. ಇದು ಸಂಗ್ರಹವಾದ ಧೂಳು ಮತ್ತು ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.

55
4. ಟೂತ್‌ಪೇಸ್ಟ್

ಬಿಳಿ ಬೂಟುಗಳನ್ನ ಸ್ವಚ್ಛಗೊಳಿಸಲು ನೀವು ಟೂತ್‌ಪೇಸ್ಟ್ ಬಳಸಬಹುದು. ಕಲೆ ಇರುವ ಜಾಗಕ್ಕೆ ಟೂತ್‌ಪೇಸ್ಟ್ ಹಚ್ಚಿ ಮತ್ತು ಬ್ರಷ್‌ನಿಂದ ಚೆನ್ನಾಗಿ ಸ್ಕ್ರಬ್ ಮಾಡಿ. 10 ರಿಂದ 15 ನಿಮಿಷಗಳ ನಂತರ ಒದ್ದೆಯಾದ ಬಟ್ಟೆಯಿಂದ ಬೂಟುಗಳನ್ನು ಒರೆಸಿ. ಇದು ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

Read more Photos on
click me!

Recommended Stories