ಬಟ್ಟೆಗಳಿಂದ ಬಣ್ಣದ ಕಲೆಗಳನ್ನು ತೆಗೆದುಹಾಕಲು ನೀವು ಆಲ್ಕೋಹಾಲ್ ಸಹ ಬಳಸಬಹುದು. ಇದು ಬಟ್ಟೆಯಿಂದ ಬಣ್ಣವನ್ನು ತೆಗೆದುಹಾಕಲು ಬಹಳಷ್ಟು ಸಹಾಯ ಮಾಡುತ್ತದೆ. ಅದರಂತೆ ಒಂದು ಅಥವಾ 2 ಟೀ ಚಮಚ ಆಲ್ಕೋಹಾಲ್ ಅನ್ನು ಕಲೆಯ ಮೇಲೆ ಹಚ್ಚಿ. ಸುಮಾರು 10 ನಿಮಿಷಗಳ ನಂತರ, ಬ್ರಷ್‌ನಿಂದ ಲಘುವಾಗಿ ಉಜ್ಜಿ. ಇದು ಕಲೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ನಂತರ ಬಟ್ಟೆಗಳನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಬಿಸಿಲಿನಲ್ಲಿ ಒಣಗಿಸಿ.