Published : Jun 20, 2025, 05:55 PM ISTUpdated : Jun 20, 2025, 05:57 PM IST
ಸಾಂಪ್ರದಾಯಿಕ ಇಳಕಲ್ ಸೀರೆಗಳು ಕರ್ನಾಟಕದಲ್ಲಿ ಫೇಮಸ್. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನೆನಪಿಗಾಗಿ ಸುಂದರವಾದ ಕೈಯಿಂದ ನೇಯ್ದ ಇಳಕಲ್ ಸೀರೆಯನ್ನು ಖರೀದಿಸದ ಹೊರತು ನಿಮ್ಮ ದಕ್ಷಿಣ ಭಾರತ ಪ್ರವಾಸವು ಪೂರ್ಣಗೊಳ್ಳುವುದಿಲ್ಲ.
ಹೆಣ್ಮಕ್ಕಳಿಗೆ ಸೀರೆ ಒಂದು ರೀತಿ ಬೆಸ್ಟ್ ಫ್ರೆಂಡ್ ಇದ್ದ ಹಾಗೆ. ಯಾವುದೇ ಸಮಾರಂಭ, ಸಂದರ್ಭಕ್ಕೆ ಸೂಕ್ತವಾಗುವ ಈ ಉಡುಗೆ ಮಹಿಳೆಯರ ಅಂದವನ್ನು ಹೆಚ್ಚು ಮಾಡುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಯಾವುದೇ ಮಹಿಳೆಯ ಬೀರುವಿನಲ್ಲಿ ಸಾಂಪ್ರದಾಯಿಕ ಸೀರೆಗಳಿಲ್ಲ ಅಂದ್ರೆ ಹೇಗೆ ಹೇಳಿ?, ಸಾಂಪ್ರದಾಯಿಕ ಸೀರೆಗಳು ಅಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಇಳಕಲ್ ಸೀರೆ. ಎಲ್ಲರಿಗೂ ಗೊತ್ತಿರುವ ಹಾಗೆ ಇಳಕಲ್ ಸೀರೆಯನ್ನು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣವಾದ ಇಳಕಲ್‌ನಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ.
28
ಇಳಕಲ್ ಸೀರೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಪ್ರದೇಶದ ಜನರು ಕೈಯಿಂದ ನೇಯ್ದ ಇಳಕಲ್ ಸೀರೆಗಳನ್ನು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಉಡುಗೊರೆಯಾಗಿ ನೀಡುತ್ತಾರೆ. ಇದು ಕೈಯಿಂದ ತಯಾರಿಸಲ್ಪಟ್ಟಿದೆ ಎಂದು ಹೇಳುತ್ತಾರೆ.
38
ಇತ್ತೀಚಿನ ದಿನಗಳಲ್ಲಿ ಇಳಕಲ್ ಸೀರೆಯೊಂದಿಗೆ ಚಿಕ್ಕಿ, ಗೋಮಿ, ಜರಿ, ಗಡಿದಾಡಿ, ಮಾಡರ್ನ್ ಗಾಯತ್ರಿ ಎಂದು ವಿವಿಧ ರೀತಿಯ ಬಾರ್ಡರ್ ಕೂಡ ಬರುತ್ತದೆ.
48
ಎಲ್ಲಾ ಇಳಕಲ್ ಸೀರೆಗಳ ಡಿಸೈನ್ಸ್ ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಹಾಗಾದರೆ ನಿಮ್ಮನ್ನು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡಬೇಕೆಂದರೆ ಏನು ಮಾಡಬೇಕು. ಬ್ಲೌಸ್ ಆಯ್ಕೆಯ ಕಡೆ ಗಮನಹರಿಸಬೇಕು.
58
ಸೀರೆಯ ಅಂದವನ್ನು ಹೆಚ್ಚಿಸುವಂತೆ ಫ್ಯಾಶನ್ ಸ್ಟೈಲ್‌ನಲ್ಲಿ ಬ್ಲೌಸ್ ಅನ್ನು ಡಿಸೈನ್ ಮಾಡಿ. ಇಳಕಲ್ ಸೀರೆಯ ಬ್ಲೌಸ್‌ಗೆ ಡಿಸೈನರ್ ಬ್ಯಾಕ್ ಹೊಂದಿರುವ ಬ್ಯಾಂಡ್ ಗಾಲಾ ಉತ್ತಮ ಆಯ್ಕೆಯಾಗಿದೆ.
68
ಉದ್ದವಾದ ಜುಮ್ಕಾಗಳನ್ನು ಹೊಂದಿರುವ ಸುಂದರವಾದ ಉದ್ದನೆಯ ನೆಕ್‌ಪೀಸ್ ಇಳಕಲ್ ಸೀರೆಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಲುಕ್ ಕಂಪ್ಲೀಟ್ ಆಗಬೇಕೆಂದ್ರೆ ಒಂದು ಒಳ್ಳೆಯ ಹ್ಯಾಂಡ್‌ಬ್ಯಾಗ್ ಅನ್ನು ಒಯ್ಯಿರಿ.
78
ಸಾಂಪ್ರದಾಯಿಕ ಇಳಕಲ್ ಸೀರೆಗಳು ಕರ್ನಾಟಕದಲ್ಲಿ ಫೇಮಸ್. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನೆನಪಿಗಾಗಿ ಸುಂದರವಾದ ಕೈಯಿಂದ ನೇಯ್ದ ಇಳಕಲ್ ಸೀರೆಯನ್ನು ಖರೀದಿಸದ ಹೊರತು ನಿಮ್ಮ ದಕ್ಷಿಣ ಭಾರತ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ಅವರಿಗೆ ಇಳಕಲ್ ಸೀರೆಯನ್ನು ಉಡುಗೊರೆಯಾಗಿ ನೀಡಿ. ನಿಮ್ಮನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತಾರೆ. ಜೊತೆಗೆ ನಿಮಗಾಗಿ ಒಂದನ್ನು ಖರೀದಿಸಲು ಸಹ ಮರೆಯಬೇಡಿ.
88
ಇಳಕಲ್ ಸೀರೆ ಕೈಯಿಂದ ನೇಯ್ದದ್ದಾಗಿರುವುದರಿಂದ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅವುಗಳ ಮೇಲೆ ಖರ್ಚು ಮಾಡುವ ಮೊದಲು ಗುಣಮಟ್ಟದ ಪರಿಶೀಲನೆ ಮಾಡಲು ಮರೆಯದಿರಿ.